ಇಲ್ಲಿ ನಾಗರಹಾವಿನ ಪಕೋಡಾ ಫುಲ್ ಫೇಮಸ್; ವಿಡಿಯೋ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ
ನ್ಯೂಸ್ ಆ್ಯರೋ: ನಮ್ಮ ಪ್ರಪಂಚ ಎಲ್ಲಾ ವಿಚಾರದಲ್ಲೂ ವೈವಿಧ್ಯತೆಯಿಂದ ಕೂಡಿರುವಂತದ್ದು. ಅವುಗಳಲ್ಲಿ, ಹಾವುಗಳು ಅತ್ಯಂತ ನಿಗೂಢ ಮತ್ತು ಅಪಾಯಕಾರಿ. ಅವುಗಳ ವಿಷದ ಒಂದು ಹನಿ ಪ್ರಾಣಿಗಳನ್ನು, ಮನುಷ್ಯರನ್ನು ಕೂಡ ಕೊಲ್ಲಬಹದು. ಹಾವುಗಳು ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ, ಅದರಲ್ಲೂ ನಾಗರಹಾವು ಅತ್ಯಂತ ವಿಷಯುಕ್ತ ಪ್ರಾಣಿ. ಆದರೆ ಕೆಲವರು ನಾಗರಹಾವುಗಳನ್ನು ಪಕೋಡ ಮಾಡಿ ತಿಂತಾ ಇದ್ದಾರಂತೆ. ಅಷ್ಟೇ ಅಲ್ಲ ಹಾವಿನ ರಕ್ತವನ್ನು ಹಣ್ಣಿನ ರಸದಂತೆ ಕುಡಿಯುತ್ತಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇಂಡೋನೇಷ್ಯಾದಿಂದ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ನಿಮ್ಮನ್ನು ಬೆಚ್ಚಿ ಬೀಳಿಸೋದು ಗ್ಯಾರಂಟಿ . ಭಾರತೀಯ ವ್ಲಾಗೋರ್ ಒಬ್ಬ ಇಂಡೋನೇಷ್ಯಾದ ಬೀದಿ ಆಹಾರಗಳ ಬಗ್ಗೆ ಒಂದು ವಿಡಿಯೋ ಮಾಡಿದ್ದಾರೆ. ಅಲ್ಲಿ ಕೊಬ್ರಾ ಪಕೋಡಾ ಬೋರ್ಡ್ ನೋಡಿ ಖುದ್ದು ವ್ಲಾಗೋರ್ನೇ ಬೆಚ್ಚಿಬಿದ್ದಿದ್ದಾನೆ.
ಈ ವೈರಲ್ ವೀಡಿಯೊವನ್ನು kaash_chaudhary ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಆಕಾಶ್ ಚೌಧರಿ ಅವರು ನಾಗರ ಹಾವಿನ ಪಕೋಡವನ್ನು ತಿನ್ನಲು ಹೇಗೆ ಬರುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾಗರಹಾವಿನ ರಕ್ತವನ್ನು ಕುಡಿಯಲು ಆರ್ಡರ್ ಮಾಡುತ್ತಾರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ ಅಲ್ಲಿಯ ಜನರು.
ವೀಡಿಯೊದಲ್ಲಿ, ಒಬ್ಬ ನಾಗರಹಾವಿನ ಬೆಲೆ 2 ಮಿಲಿಯನ್ ಎಂದು ಇಂಡೋನೇಷಿಯನ್ ವ್ಯಕ್ತಿ ವಿವರಿಸುತ್ತಾನೆ. ಎದುರಿಗೆನೇ ಹಾವುಗಳನ್ನು ಕತ್ತರಿಸಿ ಪಕೋಡಾ ಮಾಡಿ ತೋರಿಸಿದ್ದಾರೆ. ಅದು ಅಲ್ಲದೇ ಈ ಒಂದು ಪಕೋಡಾ ಇಂಡೋನೇಷಿಯಾದ ಜಕರ್ತಾದಲ್ಲಿನ ಜನರಿಗೆ ಸಿಕ್ಕಾಪಟ್ಟೆ ಇಷ್ಟದ ಆಹಾರ ಎಂದು ಕೂಡ ತಿಳಿದು ಬಂದಿದೆ.
ಇನ್ನು ರಾಶಿ ರಾಶಿ ಹಾವುಗಳನ್ನು ಒಂದು ಕಡೆ ಕೂಡಿ ಹಾಕಿರೋದನ್ನ ಅವುಗಳನ್ನು ಒಂದೊಂದಾಗಿ ಹೊರ ತೆಗೆದು ಕತ್ತರಿಸಿದ ಅದರ ಪಕೋಡಾ ಮಾಡಿ ಮಾರುವುದು ಕಂಡು ಬಂದಿದೆ. ಹಾವಿನ ಮಾಂಸಕ್ಕೆ ಇಂಡೋನೇಷಿಯಾದಲ್ಲಿ ಭಾರೀ ಡಿಮ್ಯಾಂಡ್ ಇದೆ.
ಕತ್ತರಿಸಿ ಗ್ರಿಲ್ ಮಾಡಲಾದ ಒಂದು ಪಕೋಡಾಗೆ ಭಾರತೀಯ ರೂಪಾಯಿಗಳಲ್ಲಿ ಒಂದು ಸಾವಿರ ರೂಪಾಯಿ ಬೆಲೆ ಇದೆ ಎಂದು ಹೇಳಲಾಗಿದೆ. ಹಾವಿನ ಮಾಂಸ ತಿನ್ನುವುದರಿಂದ ಹೆಚ್ಚು ಶಕ್ತಿ ಬರುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎನ್ನುವುದು ಇಲ್ಲಿಯ ಜನರ ನಂಬಿಕೆ.
https://www.instagram.com/reel/C9uq7M8qtRs/?utm_source=ig_web_copy_link
Leave a Comment