ಕುಡಿದು ಟೈಟ್‌ ಆದ ಮಾಲೀಕ; ಜೋಪಾನವಾಗಿ ಮನೆಗೆ ಕರೆದುಕೊಂಡು ಹೋದ ಗೂಳಿ

brazil loyal bull
Spread the love

ನ್ಯೂಸ್ ಆ್ಯರೋ: ಕಂಠಪೂರ್ತಿ ಕುಡಿದು ಇತರರೊಂದಿಗೆ ಜಗಳವಾಡಿ ರಂಪಾಟ ಮಾಡುವವರು ಒಂದೆಡೆಯಾದರೆ, ಕುಡಿದು ತೂರಾಡಿ ರೋಡ್‌ ಮಧ್ಯೆ, ಚರಂಡಿಯಲ್ಲಿ ಬೀಳುವವರು ಇನ್ನೊಂದು ಕಡೆ. ಕುಡುಕರ ಅವಾಂತರಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲೂ ಕೂಡಾ ಹರಿದಾಡುತ್ತಿರುತ್ತವೆ.

ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಕಂಠಪೂರ್ತಿ ಕುಡಿದು ನಡೆದಾಡಲು ಕೂಡಾ ಸಾಧ್ಯವಾಗದ ಮಾಲೀಕನನ್ನು ಗೂಳಿಯೊಂದು ಜೋಪಾನವಾಗಿ ಮನೆಗೆ ಕರೆದುಕೊಂಡು ಹೋಗಿದೆ. ಹೌದು ಕುಡಿದು ಎಲ್ಲೂ ಬೀಳಬಾರದೆಂದು ಗೂಳಿ ಸ್ವತಃ ಮಾಲೀಕನನ್ನು ಕರೆದುಕೊಂಡು ಹೋಗಿದೆ. ಮಾಲೀಕ ಹಾಗೂ ಗೂಳಿಯ ಬಾಂಧವ್ಯದ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಬ್ರೆಜಿಲ್‌ ದೇಶದಲ್ಲಿ ನಡೆದ ಘಟನೆ ಇದಾಗಿದ್ದು, ನಿಷ್ಠಾವಂತ ಗೂಳಿಯೊಂದು ಕಂಠಪೂರ್ತಿ ಕುಡಿದು ಟೈಟ್‌ ಆಗಿದ್ದ ಮಾಲೀಕನನ್ನು ಮನೆಗೆ ಜೋಪಾನವಾಗಿ ಕರೆದುಕೊಂಡು ಹೋಗಿದೆ. AMAZINGNATURE ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ದೃಶ್ಯವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕುಡಿದು ಟೈಟ್‌ ಆಗಿದ್ದ ಮಾಲೀಕನನ್ನು ಗೂಳಿಯೊಂದು ನಡುರಸ್ತೆಯಲ್ಲಿ ಜೋಪಾನವಾಗಿ ಮನೆಗೆ ಕರೆದುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಷ್ಟು ಮುದ್ದಾಗಿದೆ ಈ ದೃಶ್ಯʼ ಎಂಬ ಕಾಮೆಂಟ್ಸ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಲ್ಲವೇ ನಿಜವಾದ ಪ್ರೀತಿ ಅಂದ್ರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಗೂಳಿಗೆ ನಿಷ್ಠೆಯನ್ನು ಕಂಡು ಫುಲ್‌ ಫಿದಾ ಆಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!