ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್; KEA ಇಂದ ಶೀಘ್ರವೇ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
ನ್ಯೂಸ್ ಆ್ಯರೋ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಂಕ್ಷಿಪ್ತ ಅಧಿಸೂಚನೆಯನ್ನು ಈ ಹಿಂದೆ ಹೊರಡಿಸಿತ್ತು. ಆದರೆ ವಿವರವಾದ ಅಧಿಸೂಚನೆಯನ್ನು ನಂತರ ಹೊರಡಿಸಲಾಗುವುದಾಗಿ ಈಗ ಹೇಳಿದೆ. ಯವ್ಯಾವ ಹುದ್ದೆಗಳಿಗೆ ಯಾಕೆ ಈ ವರೆಗೂ ನೋಟಿಫಿಕೆಶನ್ ಬಿಡುಗಡೆ ಮಾಡಲಾಗಿಲ್ಲ ಎಂಬುದರ ಮಾಹಿತಿಯನ್ನು ಕೆಇಎ ತಿಳಿಸಿದೆ.
ರಾಜ್ಯಾದ್ಯಂತ ಕೆಇಎ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,609 ಉದ್ಯೋಗಗಳಿಗೆ ನೇಮಕಾತಿ ಹೊರಡಿಸಬೇಕಿತ್ತು. ಆದರೆ ವಿವಿರವಾದ ಅಧಿಸೂಚನೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಇದಕ್ಕೆ ಕೆಇಎ ಕಾರಣಗಳನ್ನು ನೀಡಿದೆ. ಮತ್ತು ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಉದ್ಯೋಗಗಳಿಗೆ ಅರ್ಜಿ ಕರೆಯಲಾಗುವುದು ಎನ್ನುವುನ್ನೂ ಮಾಹಿತಿ ನೀಡಿದೆ.
ಕೆಇಎ ಅಧಿಸೂಚನೆ ಹೊರಡಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಈ ಮಧ್ಯೆ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 388 ಸಿನೆನಿ 2024 ದಿನಾಂಕ 25/11/2024 ರಂತೆ ಹೊಸ ಅಧಿಸೂಚನೆ ಹೊರಡಿಸಲು ಆಗಿಲ್ಲ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಮೇಲೆ ವಿವರಿಸಿರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ, ಆ ಹುದ್ದೆಗಳಿಗೆ ನಿಗದಿಯಾಗಿರುವ ಪಠ್ಯಕ್ರಮದಂತೆ ಅಭ್ಯಾಸ ಮಾಡಲು ತಿಳಿಸಲಾಗಿದೆ.
ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿಸಿದ ತಕ್ಷಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಅನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಕ್ರಮವಹಿಸಲಾಗುವುದು. ಅಲ್ಲದೇ ಶೀಘ್ರವಾಗಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೆಇಎ ಮಾಹಿತಿ ನೀಡಿದೆ.
Leave a Comment