ರತನ್ ಟಾಟಾ ಅಂತಿಮ ದರ್ಶನ ವೇಳೆ ನಕ್ಕ ಇಶಾ ಅಂಬಾನಿ: ಟ್ರೋಲ್‌ಗೆ ಗುರಿಯಾದ ಮುಕೇಶ್ ಅಂಬಾನಿ ಪುತ್ರಿ
ನ್ಯೂಸ್ ಆ್ಯರೋ: ಇಡೀ ದೇಶವೇ ಉದ್ಯಮಿ ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಅಕ್ಟೋಬರ್ 9ರಂದು ರಾತ್ರಿ ನಿಧನವಾಗಿದ್ದ ರತನ್ ಅಂಬಾನಿ ಅವರ ಪಾರ್ಥಿವ ಶರೀರವನ್ನು ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಸಾರ್ವಜನಿಕರು ಸೇರಿದಂತೆ ದೇಶದ ಉದ್ದಿಮೆದಾರರು, ರಾಜಕೀಯ ಮುಖಂಡರು ಆಗಮಿಸಿ ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಪತ್ನಿ ನೀತಾ ಜೊತೆ ಆಗಮಿಸ ರತನ್ ಟಾಟಾ ಅವರಿಗೆ ತಮ್ಮ ಅಂತಿಮ ಪುಷ್ಪ ನಮನಗಳನ್ನು ಸಲ್ಲಿಸಿದರು. ಇದೀಗ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ನಕ್ಕು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಪತಿ ಆನಂದ್ ಪಿರಮಲ್ ಜೊತೆ ಇಶಾ ಅಂಬಾನಿ ಸಹ ರತನ್ ಟಾಟಾ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಅಲ್ಲಿಗೆ ಆಗಮಿಸಿದ್ದ ಗಣ್ಯರು ಟಾಟಾ ಕುಟುಂಬಸ್ಥರಿಗೆ ನಮಸ್ಕರಿಸಿ ಸಾಂತ್ವಾನ ಹೇಳುವ ಕೆಲಸವನ್ನು ಮಾಡುತ್ತಿದ್ದರು. ಈ ಸಮಯದಲ್ಲಿಯೇ ಇಶಾ ಅಂಬಾನಿ ನಗುತ್ತಿರುವ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಮಿಂಚನಂತೆ ಶೇರ್ ಆಗುತ್ತಿದೆ.
ಇಶಾ ಜೊತೆಯಲ್ಲಿಯೂ ಮುಕೇಶ್ ಅಂಬಾನಿ ಅವರನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡಲಾರಂಭಿಸಿದ್ದಾರೆ. ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಇಂತಹ ಸಮಯದಲ್ಲಿ ಅಷ್ಟಕ್ಕೂ ಈ ನಗು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಸುತ್ತಲೂ ಕ್ಯಾಮೆರಾಗಳಿದ್ದಾಗ ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.
Leave a Comment