ಅಬ್ಬಬ್ಬಾ.. ಎಂಥಾ ಸೆಕ್ಯೂರಿಟಿ…! ಯುವತಿಯ ತಲೆಗೆ ಸಿಸಿ ಕ್ಯಾಮರಾ ಫಿಕ್ಸ್ ಮಾಡಿದ ಪೋಷಕರು
ನ್ಯೂಸ್ ಆ್ಯರೋ : ಪಾಕಿಸ್ತಾನವು ಕೆಲವು ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕಾರ್ಯಗಳಿಂದ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ಆವಿಷ್ಕಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ.
ಹೌದು, ಪಾಕಿಸ್ತಾನದ ಯುವತಿಯೊಬ್ಬಳು ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತನ್ನ ತಲೆಯ ಮೇಲೆ ಸಿ ಸಿ ಕ್ಯಾಮೆರಾವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
ಈ ವೀಡಿಯೊದಲ್ಲಿ, ಪಾಕಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷತೆಯ ದೃಷ್ಟಿಯಿಂದ ಕುಟುಂಬವು ನನ್ನ ತಲೆಯ ಮೇಲೆ ಸಿಸಿಟಿವಿಯನ್ನು ಅಳವಡಿಸಿದೆ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಯುವತಿಯ ಕುಟುಂಬವು ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ. ಅವಳು ಎಲ್ಲಿಗೆ ಹೋದರೂ, ಯಾರನ್ನು ಭೇಟಿಯಾದರೂ ಪೋಷಕರಿಗೆ ತಿಳಿಯಬೇಕು ಎಂಬ ದೃಷ್ಟಿಯಿಂದ ಈ ವಿಚಿತ್ರ ಹಾಗು ವಿಶೇಷ ಆವಿಷ್ಕಾರವನ್ನು ಮಾಡಿದೆ.
ಈ ವಿಡಿಯೋವು ಸೆಪ್ಟೆಂಬರ್ 6 ರಂದು ವೈರಲ್ ಆಗಿದ್ದು, ಇದುವರೆಗೆ ಸಾವಿರಾರು ವೀಕ್ಷಣೆಯನ್ನು ಹೊಂದಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ‘ಕ್ಯಾಮರಾ ವುಮನ್’ ಮತ್ತು ಇಂತಹ ಆವಿಷ್ಕಾರ ಪಾಕಿಸ್ತಾನವರಿಂದ ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Leave a Comment