ರೈಲಿನಲ್ಲಿ ಪ್ರಯಾಣಿಸುವಾಗ ನೀವು ಹೀಗೆ ಮಾಡ್ತೀರಾ…? ಹಾಗಾದ್ರೆ ಎಚ್ಚರ…..!

20240906 111821 1
Spread the love

ನ್ಯೂಸ್ ಆ್ಯರೋ : ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಟ್ರೆಂಡ್ ಸೆಟ್ ಮಾಡಬೇಕು ಅಂತ ಎಷ್ಟೋ ಜನ ಹುಚ್ಚು ಸಾಹಸಗಳನ್ನು ಮಾಡುತ್ತಾರೆ. ಇಂಥಾ ಸಾಹಸಗಳಿಂದ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ.

ಈ ರೀಲ್ಸ್ ನ ಗೀಳಿಗೆ ಬಿದ್ದು ಯುವಜನರು ಚಲಿಸುವ ವಾಹನದಿಂದ ಹಾರುವುದು, ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದು ಮತ್ತು ಅಪಾಯದ ಸ್ಥಳಗಳಲ್ಲಿ ನಿಂತು ಡ್ಯಾನ್ಸ್ ಮಾಡಿ ಸಾವಿನ ಬಾಯಿಗೆ ಸಿಲುಕಿಕೊಳ್ಳುತ್ತಿದ್ದಾರೆ.

ಈಗಿನ ಜನರಿಗಂತು ಮೋಜು ಮಸ್ತಿ ಸುತ್ತಾಟ ಅಂದ್ರೆ ಎಲ್ಲಿಲ್ಲದ ಉತ್ಸಾಹ. ಈ ಸಮಯದಲ್ಲಿ ಬೇರೆ ಬೇರೆ ತರದ ವಿಡಿಯೋಗಳನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ. ಇದೇ ರೀತಿ ಇಲ್ಲೊಬ್ಬ ಯುವತಿ ರೈಲಿನಲ್ಲಿ ಪ್ರಯಾಣಿಸುವಾಗ ರೀಲ್ಸ್ ಮಾಡಲು ಹೋಗಿ ನನಗೆ ಅಪಾಯವನ್ನೇ ತಂದೊಡ್ಡಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವೈರಲ್ ವಿಡಿಯೊದಲ್ಲಿ ಯುವತಿ ಚಲಿಸುತ್ತಿರುವ ರೈಲಿನಲ್ಲಿ ತನ್ನ ಎರಡೂ ಕೈಗಳಿಂದ ಬಾಗಿಲಿನ ಕಂಬಿಗಳನ್ನು ಹಿಡಿದು ಹೊರಗೆ ನೇತಾಡಿದ್ದಾಳೆ. ಪ್ರಯಾಣದ ಉತ್ಸಾಹದಲ್ಲಿ ರೈಲಿನ ಹೊರಗಡೆ ನೇತಾಡಿದ ಯುವತಿಯ ತಲೆ ಹಳಿಗಳ ಪಕ್ಕದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಆಕೆ ರೈಲಿನ ಕಂಬಗಳನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ರೈಲಿನಿಂದ ಕೆಳಕ್ಕೆ ಬೀಳಲಿಲ್ಲ. ಈ ಆಘಾತಕಾರಿ ಘಟನೆಯ ನಂತರ ಆಕೆಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ.

ಇಂತಹ ದುಸ್ಸಾಹಸಕ್ಕೆ ಕೈಹಾಕಿ ಅಪಾಯಕ್ಕೆ ಸಿಲುಕಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಂತಹ ವಿಡಿಯೋಗಳು ಮನೋರಂಜನೆಗಿಂತ ತಮ್ಮ ಜೀವದ ಸುರಕ್ಷತೆಯ ಬಗ್ಗೆ ಮುಂಜಾಗ್ರತೆಯನ್ನು ನೀಡುತ್ತಿದೆ.

Leave a Comment

Leave a Reply

Your email address will not be published. Required fields are marked *