ಪಾನಿಪುರಿ ಪ್ರಿಯರೇ ಈ ವಿಡಿಯೋ ನೋಡಿ; ಇನ್ನು ಜನ್ಮದಲ್ಲಿ ನೀವು ತಿನ್ನೋದೇ ಇಲ್ಲ

ನ್ಯೂಸ್ ಆ್ಯರೋ: ಪಾನಿಪುರಿ.. ಈ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರು ಬರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಪಾನಿಪುರಿಯನ್ನು ತುಂಬಾ ಇಷ್ಟಪಡುತ್ತಾರೆ.
ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ದೂರದ ಹಳ್ಳಿಗಳಲ್ಲಿಯೂ ಪಾನಿಪುರಿ ಮಾರಾಟವಾಗುತ್ತದೆ. ಪಾನಿ ಪುರಿ ಗಾಡಿಗಳಲ್ಲಿ ಕೇಳಿಬರುವ ‘ಭೈಯಾ ತೋಡಾ ಪಾಯಾಜ್ ದಾಲೋ’ ಎಂಬ ಮಾತು ಒಂದು ರೇಂಜ್ ನಲ್ಲಿ ಫೇಮಸ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ.
ಪಾನಿಪುರಿ ಎಷ್ಟು ಪ್ರಸಿದ್ಧವಾಗಿದೆ ಎಂಬುದನ್ನು ಇದು ವಿವರಿಸುತ್ತದೆ. ಆದರೆ ಈ ಪಾನಿಪುರಿ ಹೇಗೆ ತಯಾರಾಗುತ್ತೆ ಅಂತ ನೋಡಿದರೆ ಜೀವನದಲ್ಲಿ ಪಾನಿಪುರಿ ತಿನ್ನೋಕೆ ಭಯ ಆಗುತ್ತೆ. ತಿನ್ನಲು ಅಲ್ಲ ಎತ್ತಲೂ ನಡುಗುತ್ತಾರೆ. ಈ ರೀತಿಯ ಪಾನಿಪುರಿ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದು ನಿಮಗೆ ಗೊತ್ತಿರಬಹುದು. ಈ ಹಿಂದೆ ಕೆಲಸದಾಕೆಯೊಬ್ಬಳು ಮೂತ್ರವನ್ನು ಬಳಸಿ ಚಪಾತಿ ಹಿಟ್ಟು ಕಲಸಿರುವ ಸುದ್ದಿ ಭಾರೀ ವೈರಲ್ ಆಗಿತ್ತು. ಈ ನಡುವೆ ಜಾರ್ಖಂಡ್‌ನ ಗರ್ವಾ ಪ್ರದೇಶದಲ್ಲಿ ಒಂದು ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ವಿಡಿಯೋ ಚಪಾತಿಯದ್ದಲ್ಲ, ಬದಲಿಗೆ ಪಾನೀಪುರಿಯದ್ದು.
ಇನ್ನು ಈ ವಿಡಿಯೋದಲ್ಲಿ ಪಾನಿಪುರಿಗಾಗಿ ಯಾವ ರೀತಿ ಹಿಟ್ಟು ಕಲಸಲಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಹಿಟ್ಟು ಹದ ಬರಲು ಕಾಲಿನಿಂದ ಅದರ ತುಂಬಾ ನಡೆದಾಡುವುದನ್ನು ನೋಡಬಹುದು.ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಪಾನೀಪುರಿಯ ಪಾನಿಗೆ ಅಂದರೆ ನೀರಿಗೆ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರವನ್ನು ಬಳಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ಇತ್ತೀಚೆಗೆ, ಪ್ರಸಿದ್ಧ ಬೀದಿ ಆಹಾರವನ್ನು ತಯಾರಿಸುವ ಅನೈರ್ಮಲ್ಯ ಪ್ರಕ್ರಿಯೆಯನ್ನು ತೋರಿಸುವ ಇಬ್ಬರು ಪಾನಿಪುರಿ (ಗೋಲ್ಗಪ್ಪ) ಮಾರಾಟಗಾರರ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ಅನೇಕ ಪಾನಿಪುರಿ ಪ್ರಿಯರನ್ನು ಕೆರಳಿಸಿದೆ.
ಪೊಲೀಸ್ ತನಿಖೆ ವೇಳೆ ಆರೋಪಿಗಳು ಪಾನಿಪುರಿಗೆ (ಗೋಲ್ಗಪ್ಪ) ಯೂರಿಯಾ ಮತ್ತು ಹಾರ್ಪಿಕ್ (ಟಾಯ್ಲೆಟ್ ಕ್ಲೀನರ್) ಅನ್ನು ರುಚಿಗಾಗಿ ಸೇರಿಸಿದ್ದಾರೆ. ಈ ಇಬ್ಬರೂ ಅಂಗಡಿಕಾರರು ಉತ್ತರ ಪ್ರದೇಶದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಾದ ಅರವಿಂದ್ ಯಾದವ್ ಇವರು ಝಾನ್ಸಿ ಜಿಲ್ಲೆಯ ಸೋಮಾ ಗ್ರಾಮದವರು. ಆರೋಪಿತರಿಂದ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಪ್ರಕರಣದ ಸಂಬಂಧ ಆರೋಪಿತರ ಪೋಷಕರಿಗೂ ಸಮನ್ಸ್ ನೀಡಲಾಗಿದೆ.
Leave a Comment