ಗಾಂಜಾ ಗಿಡ ಬೆಳೆಸಲು ಚಿತಾಭಸ್ಮ ಬಳಸಿಕೊಂಡ ಮಗಳು; ಇದು ತಂದೆಯ ಆಸೆಯೆಂದ ಯೂಟ್ಯೂಬರ್
ನ್ಯೂಸ್ ಆ್ಯರೋ: ಅಮೆರಿಕಾದ ಖ್ಯಾತ ಯೂಟ್ಯೂಬರ್ ಆಗಿರುವ ರೊಸಾನ್ನಾ ಪ್ಯಾನ್ಸಿನೊ ಇತ್ತೀಚಿಗಷ್ಟೇ ತನ್ನ ರಾಡಿಕ್ಯುಲಸ್ ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ತಮ್ಮ ದಿವಂಗತ ತಂದೆಯ ಕುರಿತು ಮಾತನಾಡಿದ್ದಾಳೆ.
ಇಲ್ಲಿ ತನ್ನ ತಂದೆಯ ಶವದ ಸುಟ್ಟ ಬೂದಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ, ಅದರ ಎಲೆಯಿಂದ ಸಿಗರೇಟು ಸೇದಿರುವುದನ್ನು ಬಹಿರಂಗಪಡಿಸಿದ್ದಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
39 ವರ್ಷದ ಯೂಟ್ಯೂಬರ್ ರೋಸನ್ನಾ ಪ್ಯಾನ್ಸಿನೊ ಅವರು ತಮ್ಮ ತಂದೆಯ ಚಿತಾಭಸ್ಮವನ್ನು ಬಳಸಿ ಬೆಳೆದ ಗಾಂಜಾದಿಂದ ತಯಾರಿಸಿದ ಸಿಗರೇಟನ್ನು ಸೇದುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
“ಸ್ಮೋಕಿಂಗ್ ಮೈ ಡೆಡ್ ಡ್ಯಾಡ್” ಎಂಬ ಶೀರ್ಷಿಕೆಯ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ನವೆಂಬರ್ 17 ರಂದು ವೀಡಿಯೊ ಪ್ರಸಾರವಾಗಿತ್ತು. ಈ ವೇಳೆ ಈ ತನ್ನ ತಂದೆಯ ಆಸೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಗಾಂಜಾ ಗಿಡವನ್ನು ಬೆಳೆಸಲು ತನ್ನ ಚಿತಾಭಸ್ಮವನ್ನು ಬಳಸುವಂತೆ ತಂದೆ ಕೇಳಿಕೊಂಡಿದ್ದರು. ತನ್ನ ತಂದೆಯ ಕೋರಿಕೆಯ ಮೇರೆಗೆ ಇದನ್ನು ಮಾಡಿದ್ದೇನೆ ಎಂದು ರೋಸನ್ನಾ ಬಹಿರಂಗಪಡಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
https://www.instagram.com/reel/DChUczqSieC/?utm_source=ig_web_button_share_sheet
Leave a Comment