ಅನಿರೀಕ್ಷಿತ ತಿರುವಿನಲ್ಲಿ ಸೀತಾ ರಾಮ ಧಾರಾವಾಹಿ; ಮುಖ್ಯ ಪಾತ್ರಕ್ಕೆ ತಿಲಾಂಜಲಿ ಹಾಡಿದರೇ ನಿರ್ದೇಶಕರು ?
ನ್ಯೂಸ್ ಆ್ಯರೋ: ಜೀ ಕನ್ನಡದಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಹಿಟ್ ಧಾರಾವಾಹಿಗಳೇ. ಒಂದಕ್ಕಿಂತ ಒಂದು ಚೆನ್ನಾಗಿದ್ದಾವೆ. ಹೊಸದಾಗಿ ಶುರುವಾದ ಯಾವ ಧಾರಾವಾಹಿಯೂ ಜನರ ಮನಸ್ಸು ಗೆಲ್ಲದೇ ಸೋತಿಲ್ಲ. ಆದರೀಗ ಅನಿರೀಕ್ಷಿತ ತಿರುವಿನಲ್ಲಿ ಸೀತಾ ರಾಮ ಧಾರಾವಾಹಿ ಬಂದು ನಿಂತಿದೆ. ಸೀತಾ ರಾಮ ಧಾರಾವಾಹಿಯಲ್ಲಿ ಈ ವರೆಗೂ ಒಂದಷ್ಟು ಸತ್ಯಗಳು ಹೊರಬಂದಿವೆ. ಅದರಲ್ಲೂ ಸಿಹಿ ಜನ್ಮ ರಹಸ್ಯದ ಬಗ್ಗೆಯೇ ಕುತೂಹಲ ಸೃಷ್ಟಿಯಾಗಿತ್ತು. ಈಗ ಆ ಕೌತುಕವೂ ತಣಿಸಿದೆ. ಸಿಹಿಯ ಅಪ್ಪ ಅಮ್ಮ ಯಾರೆಂಬ ಸತ್ಯ ಬಯಲಾಗಿದೆ. ಸೀತಾ ತನ್ನ ಯಾವ ವಿಚಾರವನ್ನು ಗೌಪ್ಯವಾಗಿ ಉಳಿಸಿಕೊಂಡಿದ್ದಳೋ ಅದೀಗ ಜಗಜ್ಜಾಹೀರಾಗಿದೆ.
ಬಾಡಿಗೆ ತಾಯ್ತನದ ಹಿಂದಿನ ಅಸಲಿಯತ್ತು ರಾಮನಿಗೆ ಗೊತ್ತಾಗಿದೆ. ಸೀತಾಳ ಆ ನಿರ್ಧಾರಕ್ಕೆ ರಾಮ ಸಹಮತಿಸಿದ್ದಾನೆ. ಆದರೆ, ತಾತ ಸೂರ್ಯಪ್ರಕಾಶ್ ಇದೀಗ ಇದೇ ವಿಚಾರಕ್ಕೆ ಕೊಂಚ ಗರಂ ಆಗಿದ್ದಾನೆ.
ಸೀತಾಳ ನಿಜಬಣ್ಣ ಬಯಲಾಗುತ್ತಿದ್ದಂತೆ, ಭಾರ್ಗವಿ ಮತ್ತು ವಿಶ್ವ ಹಿರಿ ಹಿರಿ ಹಿಗ್ಗಿದ್ದಾರೆ. ಹೇಗಾದರೂ ಮಾಡಿ, ಸೀತಾಳನ್ನು ಈ ಮನೆಯಿಂದ ಆಚೆ ಕಳಿಸಬೇಕು ಎಂಬ ನಿರ್ಧಾರಕ್ಕೆ ಬಂದು, ತಾತನ ಎದುರು ಬಣ್ಣದ ಮಾತನಾಡಿ, ಅತ್ತು ಕರೆದು ನಾಟಕ ಮುಂದುವರಿಸಿದ್ದಾಳೆ. ಈ ನಡುವೆ ಶತಾಯಗತಾಯ ಸಿಹಿಯನ್ನು ಪಡೆದೇ ತೀರುತ್ತೇನೆ ಎಂದು ಮೇಘಶ್ಯಾಮ್ ಪಣತೊಟ್ಟಂತಿದೆ. ಅದಕ್ಕಾಗಿ ಸೀತಾ ಮತ್ತು ರಾಮ್‌ಗೆ ಲೀಗಲ್ ನೋಟಿಸ್ ರವಾನಿಸಿದ್ದಾನೆ. ಇದೀಗ ಇದೇ ಸೀತಾ ರಾಮ ಸೀರಿಯಲ್‌ನಿಂದ ಶಾಕಿಂಗ್ ಪ್ರೋಮೋ ಹೊರಬಿದ್ದಿದೆ.
ಸೀತಾ ರಾಮ ಸೀರಿಯಲ್‌ನಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲ ಆಗಬಹುದು? ವೀಕ್ಷಕರಿಗೆ ಈ ಸೀರಿಯಲ್‌ನಿಂದ ಏನೆಲ್ಲ ಕೌತುಕಗಳು ದಕ್ಕಬಹುದು ಎಂಬುದನ್ನು ಹೇಳಲು, ಹೊಸ ಪ್ರೋಮೋ ಬಿಡುಗಡೆ ಮಾಡಿದೆ ಸೀತಾ ರಾಮ ಧಾರಾವಾಹಿ. ಕಾನೂನು ತೊಡಕಿನಿಂದ ಹೊರಬಂದ ಸೀತಾ ರಾಮ, ಮಗಳು ಸಿಹಿ ಜತೆಗೆ ಚೆಂದದ ದಿನಗಳನ್ನು ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಅನಾಹುತವೊಂದು ನಡೆದಿದೆ. ಭಾರ್ಗವಿಯ ಪ್ಲಾನ್ ಉಲ್ಟಾ ಹೊಡೆದಿದೆ. ಸೀತಾ ಸಾಯುವ ಬದಲು ಸಿಹಿ ಕಣ್ಮುಚ್ಚಿದ್ದಾಳೆ.
ಸಿಹಿ ಜತೆಗೆ ಸುತ್ತಾಡೋಕೆ ರಾಮ್ ಮತ್ತು ಸೀತಾ ಆಚೆಕಡೆ ಬಂದಿದ್ದಾರೆ. ರಸ್ತೆ ಪಕ್ಕದಲ್ಲಿದ್ದ ಜೋಳ ನೋಡಿ, ನನಗೂ ಬೇಕು ಎಂದಿದ್ದಾಳೆ. ತನಗೆ ಫೋನ್ ಬಂದಿದೆ ಎಂದು ಸೈಡಿಗೆ ಹೋಗಿದ್ದಾನೆ ರಾಮ. ಇತ್ತ ಭಾರ್ಗವಿ, ಸೀತಾಳನ್ನು ಅಪಘಾತದಲ್ಲಿ ಸಾಯಿಸುವಂತೆ ವ್ಯಕ್ತಿಯೊಬ್ಬನನ್ನು ಕಳಿಸಿದ್ದಾಳೆ. ಆದರೆ ಈ ದುರ್ಘಟನೆಯಲ್ಲಿ ಸೀತಾ ಬದಲು ಸಿಹಿಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಸಿಹಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಇದೊಂದು ಕನಸು ಅಂತಾನೇ ವೀಕ್ಷಕರು ಅಂದಾಜಿಸುತ್ತಿದ್ದಾರೆ. ಆದರೆ ಸೀತಾರಾಮ ಬದುಕಲ್ಲಿ ಹೊಸ ಲಾಲಿ ಅನ್ನೋ ಕ್ಯಾಪ್ಶನ್ ಕೂಡ ಹಾಕಿದ್ದಾರೆ. ಈ ಮೂಲಕ ಮುಖ್ಯ ಪಾತ್ರಕ್ಕೆ ತಿಲಾಂಜಲಿ ಹಾಡಿದರೇ ನಿರ್ದೇಶಕರು ಎಂದು ಮುಂದೆ ಕಾದು ನೋಡಬೇಕಿದೆ.
Leave a Comment