47ನೇ ವಯಸ್ಸಿಗೆ ಹಸೆಮಣೆ ಏರಿದ ‘ಬಾಹುಬಲಿ’ ಕುಮಾರ ವರ್ಮ; ಸುಬ್ಬರಾಜು ಕೈ ಹಿಡಿದ ಆ ಚೆಲುವೆ ಯಾರು ?
ನ್ಯೂಸ್ ಆ್ಯರೋ: ಟಾಲಿವುಡ್ ನಟ, ಬಾಹುಬಲಿ ಸಿನಿಮಾ ಖ್ಯಾತಿಯ ಕುಮಾರ ವರ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 47ರ ವಯಸ್ಸಿನಲ್ಲಿ ಮದುವೆ ಅಗಿದ್ದಾರೆ. ಮೆಗಾ ಬ್ಲಾಕ್‌ಬಸ್ಟರ್ ‘ಬಾಹುಬಲಿ: ದಿ ಕನ್‌ಕ್ಲೂಷನ್’ ನಲ್ಲಿ ನಟಿಸಿದ ನಟ ತಮ್ಮ ಮದುವೆಯನ್ನು ಇನ್‌ಸ್ಟಾಗ್ರಾಮ್ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಪತ್ನಿ ಜತೆ ಪೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮದುವೆಯ ಫೋಟೋದಲ್ಲಿ, ಸುಬ್ಬರಾಜು ಧೋತಿ ಮತ್ತು ಕುರ್ತಾದಲ್ಲಿಕಾಣುತ್ತಿದ್ದರೆ, ವಧು ಕೆಂಪು ರೇಷ್ಮೆ ಸೀರೆಯಲ್ಲಿ ಸಖತ್ ಆಗಿ ಕಂಡಿದ್ದಾರೆ. ‘ಕೊನೆಗೂ ಮದುವೆಯಾದೆ’ ಎಂದಷ್ಟೆ ಬರೆದುಕೊಂಡಿದ್ದಾರೆ. ಸುಬ್ಬರಾಜು ಪತ್ನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೊಸ ಜೋಡಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ.
ಸುಬ್ಬರಾಜು 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಯಕನ ಗೆಳೆಯನಾಗಿ, ವಿಲನ್ ಆಗಿ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಸುಭಾಷ್ ಚಂದ್ರ ಬೋಸ್’, ‘ಬಿಲ್ಲಾ’, ‘ಮಿರ್ಚಿ’, ’ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗೀತ ಗೋವಿಂದಂ’, ‘ಆರ್ಯ’, ‘ಪೋಕಿರಿ’ ಮತ್ತು ಇನ್ನಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಖಡ್ಗಮ್’ ಸಿನಿಮಾ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು. ಕನ್ನಡದ ‘ನಮ್ಮಣ್ಣ’, ‘ಗಜ’, ‘ಸತ್ಯ ಇನ್ ಲವ್’, ‘ಸಂಚಾರಿ’, ಸಿನಿಮಾಗಳಲ್ಲಿ ಸುಬ್ಬರಾಜು ನಟಿಸಿದ್ದಾರೆ.
‘ಬಾಹುಬಲಿ 2’ ನಲ್ಲಿ ಕುಮಾರ್ ವರ್ಮಾ ಪಾತ್ರಕ್ಕಾಗಿ ಇನ್ನಷ್ಟು ಜನಪ್ರೀಯತೆ ಗಳಿಸಿದ್ದರು. ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿನ ಅವರ ಪಾತ್ರವು ಜಪಾನ್‌ನಲ್ಲಿಯೂ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Leave a Comment