ತರುಣ್ -ಸೋನಾಲ್ ಕ್ರಿಶ್ಚಿಯನ್ ವೆಡ್ಡಿಂಗ್ ಫೋಟೋ ವೈರಲ್: ನ್ಯೂ ಹೇರ್ ಸ್ಟೈಲ್ ನಲ್ಲಿ ಮಿಂಚಿದ ತರುಣ್
ನ್ಯೂಸ್ ಆ್ಯರೋ : ಆಗಸ್ಟ್ 10 ಮತ್ತು 11ರಂದು ಬೆಂಗಳೂರಿನಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋ ಕಾಲಿಟ್ಟಿದರು.
ಈಗ ಮತ್ತೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡಿದ್ದಾರೆ. ಇದೀಗ ತರುಣ್ ಸುಧೀರ್ ಸಾಂಪ್ರದಾಯಿಕವಾಗಿ ಮಂಗಳೂರಿನ ಅಳಿಯನಾಗಿದ್ದಾರೆ.
ಅರಿಶಿಣ ಶಾಸ್ತ್ರ, ಮೆಹೇಂದಿ ಶಾಸ್ತ್ರ, ರಿಸೆಪ್ಶನ್ ಮತ್ತು ಮುಹೂರ್ತ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಸ್ಟಾರ್ ನಟ-ನಟಿಯರು ಹಾಗೂ ಗಣ್ಯರು ವಧು-ವರರನ್ನು ಹರಿಸಿದ್ದರು.
ಮಂಗಳೂರಿಗೆ ಕಾಲಿಡುತ್ತಿದ್ದಂತೆ ತರುಣ್ ಹೇರ್ ಸ್ಟೈಲ್ ಬದಲಾಯಿಸಿಕೊಂಡಿರುವುದು ಅಭಿಮಾನಿಗೆ ಸಕ್ಕತ್ ಖುಷಿ ನೀಡಿದೆ. ಚರ್ಚ್ ವೆಡ್ಡಿಂಗ್ ನಲ್ಲಿ ಸೋನಾಲ್ ಸಿಂಡ್ರೆಲ್ಲಾ ವೈಟ್ ಗೌನ್ ನಲ್ಲಿ ಮಿಂಚಿದರೆ, ತರುಣ್ ವೈಟ್ ಅಂಡ್ ಬ್ಲಾಕ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿರುವ ಸೋನಾಲ್ ಕುಟುಂಬಸ್ಥರು ಮತ್ತು ಸ್ನೇಹಿತರಿಗಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಚರ್ಚ್‌ಗೆ ಭೇಟಿ ನೀಡಿ ಅಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದಾದ ಬಳಿಕ ಇಬ್ಬರೂ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
Leave a Comment