ಬೆಸ್ಟ್ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಆಫರ್; ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಇಷ್ಟೊಂದು ಕಡಿಮೆ ಬೆಲೆಗೆ ಸಿಗ್ತಿದೆ
ನ್ಯೂಸ್ ಆ್ಯರೋ: ದೇಶಾದ್ಯಂತ ದೀಪಾವಳಿ ಹಬ್ಬದ ಆಫರ್ ಆರಂಭಗೊಂಡಿದೆ. ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ, ಕ್ಯಾಶ್‌ಬ್ಯಾಕ್ ಸೇರಿದಂತೆ ಆಫರ್ ಲಭ್ಯವಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟಫೋನ್‌ಗೆ ಭಾರಿ ಡಿಸ್ಕೌಂಟ್ ಘೋಷಿಸಲಾಗಿದೆ. ಹೌದು, ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಆಫರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಮೇಲೆ 37,999 ರೂಪಾಯಿ ಕಡಿತಗೊಳಿಸಲಾಗಿದೆ. ಹೀಗಾಗಿ 74,999 ರೂಪಾಯಿ ಸ್ಮಾರ್ಟ್‌ಫೋನ್ ಇದೀಗ 37,000 ರೂಪಾಯಿಗೆ ಲಭ್ಯವಿದೆ.
ಕಳದ ವರ್ಷ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ 74,999 ರೂಪಾಯಿ. 8ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಫೋನ್ ಇದೀಗ ಕೇವಲ 37,000 ರೂಪಾಯಿಗೆ ಲಭ್ಯವಿದ.
ಇಷ್ಟೇ ಅಲ್ಲ ಇದರ ಜೊತೆಗೆ ಮತ್ತಷ್ಟು ಉಳಿತಾಯ ಮಾಡಲು ಕೆಲ ಆಯ್ಕೆಗಳಿವೆ. ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಶೇಕಡಾ 5ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರ ಜೊತೆಗೆ ಹಳೇ ಫೋನ್ ಎಕ್ಸ್‌ಚೇಂಜ್ ಮಾಡಿದರೆ ಮತ್ತಷ್ಟು ಬೆಲೆ ಕಡಿತಗೊಳ್ಳಲಿದೆ.
ಎಕ್ಸ್‌ಚೇಂಜ್ ಆಫರ್ ಫೋನ್ ಮೇಲೆ ಅವಲಂಬಿತವಾಗಿದೆ. ಉತ್ತಮ ಕಂಡಿಷನ್‌ನಲ್ಲಿರುವು ಫೋನ್‌ಗಳಿಗೆ ಗರಿಷ್ಠ ಎಕ್ಸ್‌ಚೇಂಜ್ ಬೋನಸ್ ಸಿಗಲಿದೆ. ಈ ಮೂಲಕ ಹೊಸ ಫೋನ್ ಖರೀದಿಸುವಾಗ ಭಾರಿ ರಿಯಾಯಿತಿ ಪಡೆಯಲು ಸಾಧ್ಯವಿದೆ. ಆದರೆ ಫೋನ್ ಕಂಡಿಷನ್ ಸೇರಿದಂತೆ ಇತರ ಕೆಲ ವಿಚಾರಗಳು ಎಕ್ಸ್‌ಜೇಂಚ್ ಬೋನಸ್ ಪಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಸುತ್ತದೆ.
Leave a Comment