ಎಆರ್ ರೆಹಮಾನ್ ಮತ್ತೆ ಒಂದಾಗ್ತಾರೆ ರೆಹಮಾನ್-ಸೈರಾ ದಂಪತಿ; ವಕೀಲೆ ವಂದನಾ ಶಾ ಪ್ರತಿಕ್ರಿಯೆ
ನ್ಯೂಸ್ ಆ್ಯರೋ: ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನದ ಬಳಿಕ ಸಾಕಷ್ಟು ವಿಚಾರಗಳು ಸುದ್ದಿ ಆಗುತ್ತಿವೆ. ಸೈರಾ ಅವರು ಎಷ್ಟು ಕೋಟಿ ರೂಪಾಯಿ ಜೀವನಾಂಶ ಪಡೆದರು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಆದರೆ, ಈ ವಿಚಾರದಲ್ಲಿ ಯಾವುದೇ ನಿರ್ಧಾರ ಆಗಿಲ್ಲ ಎಂದು ದಂಪತಿಗಳು ಹೇಳಿದ್ದರು. ಈ ಬೆನ್ನಲ್ಲೇ ಮಕ್ಕಳ ಕಸ್ಟಡಿ ಯಾರ ಕೈ ಸೇರುತ್ತದೆ ಎಂಬ ವಿಚಾರದಲ್ಲಿ ಚರ್ಚೆಗಳು ಆರಂಭ ಆಗಿವೆ. ಇದಕ್ಕೆ ಉತ್ತರ ನೀಡುವ ಕೆಲಸವನ್ನು ಇವರ ವಕೀಲೆ ಮಾಡಿದ್ದಾರೆ. ಜೊತೆಗೆ ಇವರು ಮತ್ತೆ ಒಂದಾಗುವ ಸೂಚನೆಯನ್ನೂ ನೀಡಿದ್ದಾರೆ.
ರೆಹಮಾನ್ ಹಾಗೂ ಸೈರಾ ಬಾನು ಪರ ವಂದನಾ ಶಾ ಅವರು ವಕೀಲೆ ಆಗಿದ್ದಾರೆ. ವಿಚ್ಛೇದನದ ಕೆಲಸಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಈಗ ಮಕ್ಕಳ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ. ರೆಹಮಾನ್ ಹಾಗೂ ಸೈರಾಗೆ ಮೂವರು ಮಕ್ಕಳು. ತಂದೆ ಹಾಗೂ ತಾಯಿ ಇಬ್ಬರ ಜೊತೆಯೂ ಇವರು ವಾಸ ಮಾಡುತ್ತಾರೆ ಎನ್ನುವ ವಿಚಾರ ರಿವೀಲ್ ಆಗಿದೆ.
‘ಸದ್ಯ ನಾವು ಏನನ್ನೂ ನಿರ್ಧಾರ ಮಾಡಿಲ್ಲ. ಅದನ್ನು ಇನ್ಮೇಲೆ ನಿರ್ಧರಿಸಬೇಕು. ಮಕ್ಕಳಲ್ಲಿ ವಯಸ್ಕರು ಇದ್ದಾರೆ. ಅವರು ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವ ಹಕ್ಕು ಇದೆ’ ಎಂದು ವಂದನಾ ಶಾ ಅವರು ಹೇಳಿದ್ದಾಗಿ ಅವರದಿ ಆಗಿದೆ. ರೆಹಮಾನ್ ಹಾಗೂ ಸೈರಾ ದಂಪತಿಗೆ ಮೂವರು ಮಕ್ಕಳು.
ಈ ದಂಪತಿ ಒಂದಾಗುವ ಸೂಚನೆಯನ್ನು ಕೂಡ ನೀಡಿದ್ದಾರೆ ವಂದನಾ. ‘ಸಮನ್ವಯ ಸಾಧ್ಯವಿಲ್ಲ ಎಂದು ನಾನು ಹೇಳಿಲ್ಲ. ನಾನು ಯಾವಾಗಲೂ ಪ್ರೀತಿ ಮತ್ತು ಪ್ರಣಯದ ಬಗ್ಗೆ ಮಾತನಾಡುತ್ತೇನೆ. ಜಂಟಿ ಹೇಳಿಕೆಯು ಪ್ರತ್ಯೇಕತೆಯ ಬಗ್ಗೆ ಹೇಳುತ್ತದೆ. ಇದು ಸುದೀರ್ಘ ವಿವಾಹವಾಗಿದೆ ಮತ್ತು ಈ ನಿರ್ಧಾರಕ್ಕೆ ಬರಲು ಸಾಕಷ್ಟು ಚಿಂತನೆ ನಡೆರುತ್ತದೆ, ಆದರೆ ನಾನು ಎಲ್ಲಿಯೂ ಸಮನ್ವಯ ಸಾಧ್ಯವಿಲ್ಲ ಎಂದು ಹೇಳಿಲ್ಲ’ ಎಂದು ಅವರು ಹೇಳಿದ್ದಾರೆ.
ಸದ್ಯ ವದಂನಾ ನೀಡಿರುವ ಹೇಳಿಕೆಯಿಂದ ಅವರು ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
Leave a Comment