ನಾವಿಲ್ಲ ಅಂದ್ರೆ ಬೆಂಗಳೂರು ಖಾಲಿ: ನಾಲಿಗೆ ಹರಿಬಿಟ್ಟ ಯುವತಿ
ನ್ಯೂಸ್ ಆ್ಯರೋ: ಇಲ್ಲಿಯೇ ಅನ್ನ ತಿಂದು ಇಲ್ಲಿನ ಜನರನ್ನ ತೆಗಳೋ ನಾಲಿಗೆಗಳು ಜಾಸ್ತಿ ಎನ್ನುವ ಮಾತಿದೆ. ಅಕ್ಷರಶಃ ಅದು ಸತ್ಯ. ಹೊರರಾಜ್ಯದಿಂದ ಬಂದು ಬೆಂಗಳೂರಿನಲ್ಲಿಯೆ ನೆಲೆಸಿ ಪುನಃ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುವರಿಗೆ ಏನೂ ಕಡಿಮೆ ಇಲ್ಲ. ಇದೀಗ ಇಂಥದ್ದೆ ಒಂದು ವೀಡಿಯೋ ಬಹಳಷ್ಟು ವೈರಲ್ ಆಗ್ತಿದೆ..
ವಿಷಯ ಏನು..?
ಕಳೆದ ವಾರದ ಹಿಂದೆ ಆಟೋ ಡ್ರೈವರ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಗ್ಯಾಸ್ ಬೆಲೆ ನಿಮ್ ಅಪ್ಪ ಕೊಡ್ತಾನಾ..? ಎಂದು ಕಪಾಳ ಮೋಕ್ಷ ಮಾಡಿದ್ದ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಸಾಕಷ್ಟು ಹೊರ ರಾಜ್ಯದವರು ತಮ್ಮ ಕೆಟ್ಟ ಬಾಯಿ ಬಿಚ್ಚಿ ದುರ್ಗಂಧದ ಮಾತುಗಳನ್ನಡಿದ್ದರು..ಅದಕ್ಕೆ ಯುವತಿಯೋರ್ವಳು ” ಬೆಂಗಳೂರಿಗರೇ ನಾವಿಲ್ಲ ಅಂದ್ರೆ ನಿಮ್ಮ ಊರು ಖಾಲಿ ಖಾಲಿ ಬಿದ್ದಿರುತ್ತೆ ಹುಷಾರ್ , ಪಬ್ , ಮಾಲ್ ಎಲ್ಲಾ ನೊಣ ಹೊಡಿತಾವೆ ಎಂದು ನಾಲಿಗೆ ಹರಿಬಿಟ್ಟಿದ್ದಾಳೆ . ಇದಕ್ಕೆ ಉತ್ತರಿಸಿರುವ ಅನೇಕರು ‘ನಮಗೆ ಅವಶ್ಯಕತೆ ಇಲ್ಲ ಕರ್ನಾಟಕ ಬಿಟ್ಟು ತೊಲಗು’ ಎಂದಿದ್ದಾರೆ
https://www.instagram.com/reel/DAGSldPS4pj/?igsh=MWhrcTZkcW9nYXh3Ng==
Leave a Comment