ತನ್ನ ಮೊಗದಲ್ಲಿ ನಗು ತರಿಸಿದ ಡೆಲಿವರಿ ಬಾಯ್‌ನ ನೆನೆದ ಮಹಿಳೆ; ಭಾವುಕ ಪೋಸ್ಟ್ ಹಂಚಿಕೊಂಡ ಹಿಂದಿದೆ ಅದ್ಬುತ ಕಾರಣ
ನ್ಯೂಸ್ ಆ್ಯರೋ: ಇನ್ನೇನೂ ದೀಪಾವಳಿ ಹಬ್ಬ ಬಂದೇ ಬಿಡ್ತು. ಈ ಸುಸಂದರ್ಭದ ಹೊತ್ತಿನಲ್ಲಿ ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ಒಂದು ಸಣ್ಣ ನಗು, ದಯೆ ತನ್ನ ದಿನವನ್ನು ಹೇಗೆ ಬೆಳಗಿಸಿತು, ಬದಲಾಯಿಸಿತು ಎಂಬ ಸ್ಟೋರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು. . . ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ದೀಪಾವಳಿಯ ಶುಭ ದಿನದಂದು ಒಂಟಿಯಾಗಿ ಬಹಳ ಬೇಸರದಲ್ಲಿದ್ದ ಸಂದರ್ಭದಲ್ಲಿ ಬಂದ ಫುಡ್ ಡೆಲಿವರಿ ಬಾಯ್ ದೀಪಾವಳಿ ಹಬ್ಬದ ಶುಭ ಕೋರಿ, ಒಂದು ಸಣ್ಣ ಕಿರು ನಗೆಯೊಂದಿಗೆ ಪಾರ್ಸೆಲ್ ಕೊಡುತ್ತಾನೆ. ಆತನ ಈ ಸಣ್ಣ ನಡೆ ತನ್ನ ಮೊಗದಲ್ಲಿ ನಗು ತರಿಸಿತು ಮತ್ತು ತನ್ನ ದಿನವನ್ನು ಉತ್ತಮ ರೀತಿಯಲ್ಲಿ ಬದಲಿಸಿತು ಎಂಬ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
Neend App ಸಂಸ್ಥಾಪಕಿ ಸುರಭಿ ಜೈನ್ ತಮ್ಮ ಈ ಸ್ಟೋರಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ದಿನವನ್ನು ಬೆಳಗುವವರಿಗೆ ನಾವು ದಯೆಯನ್ನು ತೋರಲು ಮರೆಯದಿರೋಣ ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಐದು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವರ ಸ್ನೇಹಿತರು, ಫ್ಲಾಟ್‌ಮೇಟ್‌ಗಳು ಎಲ್ಲರೂ ದೀಪಾವಳಿ ಹಬ್ಬದ ಆಚರಣೆಗೆ ಅವರವರ ಊರುಗಳಿಗೆ ಹೋಗಿದ್ದರು, ಆದ್ರೆ ಸುರಭಿ ಮಾತ್ರ ಬೆಂಗಳೂರಿನಲ್ಲಿದ್ದರು.
ಈ ಒಂಟಿ ದೀಪಾವಳಿಯನ್ನು ಹೇಗೆ ಆಚರಿಸುವುದು ಎಂದು ಬಹಳ ಬೇಸರದಿಂದ ಕುಳಿತಿದ್ದಂತಹ ಸಂದರ್ಭದಲ್ಲಿ ಫುಡ್ ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ರಮೇಶ್ ಸುರಭಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿ, ಕಿರು ನಗೆಯೊಂದಿಗೆ ಪಾರ್ಸೆಲ್ ಕೊಟ್ಟು ಹೋಗುತ್ತಾನೆ. ಆ ದಿನ ಸುರಭಿಗೆ ಆ ವ್ಯಕ್ತಿ ಮಾತ್ರ ಹಬ್ಬದ ಶುಭಾಶಯಗಳನ್ನು ಕೋರಿದ್ದು, ರಮೇಶ್‌ನ ಈ ಒಂದು ನಡೆ ಬೇಸರದಲ್ಲಿದ್ದ ನನ್ನ ಮೊಗದಲ್ಲಿ ನಗು ತರಿಸಿತು. ಹೀಗೆ ನಮ್ಮ ದಿನವನ್ನು ಬೆಳಗುವವರಿಗೆ ನಾವು ದಯೆಯನ್ನು ತೋರಲು ಮರೆಯದಿರೋಣ ಎಂದು ಹೇಳಿದ್ದಾರೆ.
Leave a Comment