ಮತದಾನ ಮಾಡಲ್ಲ ಎಂದ ಮದುವೆಯಾಗುವ ಹುಡುಗ; ನಿಶ್ಚಿತಾರ್ಥವೇ ಬೇಡ ಎಂದ ಯುವತಿ
ನ್ಯೂಸ್ ಆ್ಯರೋ: ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ನವೆಂಬರ್ 05 ರಂದು ನಡೆದಿದೆ. ರಿಪಬ್ಲಿಕನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಈ ಇಬ್ಬರು ಅಭ್ಯರ್ಥಿಗಳ ಪೈಕಿ ಯಾರು ಗೆಲ್ಲುತ್ತಾರೆ ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ.
ಈ ನಡುವೆಯೇ ಅಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಚುನಾವಣೆಯಲ್ಲಿ ತನ್ನ ಭಾವಿ ಪತಿ ಮತದಾನ ಮಾಡಿಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥವನ್ನು ಮುರಿಯಲು ಮುಂದಾಗಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ನಿಶ್ಚಿತಾರ್ಥ ಚುನಾವಣೆಯ ಕಾರಣದಿಂದ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಹೌದು ನಿನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾವಿ ಪತಿ ಮತದಾನ ಮಾಡಲು ನಿರಾಕರಿಸಿ ಅಸಡ್ಡೆ ತೋರಿದ ಪರಿಣಾಮ ಅಮೆರಿಕದ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥವನ್ನೇ ಮುರಿಯಲು ಮುಂದಾಗಿದ್ದಾಳೆ. ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದ ಪ್ಲಾಟ್‌ಫಾರ್ಮ್ ರೆಡ್ಡಿಡ್‌ನಲ್ಲಿ ಹಂಚಿಕೊಳ್ಳಲಾಗಿದೆ.
“ನಾನು ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಯುವತಿಯಾಗಿದ್ದು, ನನ್ನ ಭಾವಿ ಪತಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ತಿರಸ್ಕರಿಸಿದ ಕಾರಣ ನಾನು ಆತನೊಂದಿಗಿನ ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ಬಯಸುತ್ತಿದ್ದೇನೆ. ಆತನಿಗೆ ಎರಡೂ ಪಕ್ಷದ ಅಭ್ಯರ್ಥಿಗಳು ಇಷ್ಟವಿಲ್ಲದ ಕಾರಣ ಆತ ಮತದಾನ ಮಾಡಲು ಒಪ್ಪಲಿಲ್ಲ. ಇದರಿಂದ ನಾನು ನೈತಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ಅವನು ಏನಾದರೂ ಮತದಾನ ಮಾಡದೇ ಹೋದರೆ ಖಂಡಿತವಾಗಿಯೂ ನಾನು ನಿಶ್ಚಿತಾರ್ಥವನ್ನು ಮುರಿದುಕೊಳ್ಳುತ್ತೇನೆ” ಎಂದು ಸುದೀರ್ಘ ಬರಹವನ್ನು ಬರೆದುಕೊಂಡಿದ್ದಾಳೆ.
Leave a Comment