ನನಗೆ ಸಾಯಲು 37 ದಾರಿಗಳಿವೆ ಎಂದು ಈ ಯುವತಿ ಹೇಳಿದ್ದು ಯಾಕೆ? – 21 ವರ್ಷದ ಯುವತಿಗೆ ಸಾವಿನ ಚಿಂತೆ ಕಾಡಿದ್ದೇಕೆ?

ನನಗೆ ಸಾಯಲು 37 ದಾರಿಗಳಿವೆ ಎಂದು ಈ ಯುವತಿ ಹೇಳಿದ್ದು ಯಾಕೆ? – 21 ವರ್ಷದ ಯುವತಿಗೆ ಸಾವಿನ ಚಿಂತೆ ಕಾಡಿದ್ದೇಕೆ?

ನ್ಯೂಸ್ ಆ್ಯರೋ : ವೈದ್ಯರು ಒಂದೆರಡು ವಸ್ತುಗಳನ್ನು ತಿನ್ನಬೇಡಿ. ಅದು ನಿಮ್ಮ ದೇಹಕ್ಕೆ ಹಿತವಲ್ಲ ಎಂದರೆ ಸಾಕು ಎಲ್ಲ ಕಾಯಿಲೆ ನಮಗೆ ಬಂದಿದೆ ಎನ್ನುವಂತೆ ಕೊರಗುತ್ತೇವೆ. ಆದರೆ ಇಲ್ಲೊಬ್ಬರು ಮಹಿಳೆಗೆ ಒಟ್ಟು 37 ಆಹಾರಗಳಿಂದ ಅಲರ್ಜಿ ಇದೆ. ಆಕೆ ಏನು ಮಾಡಬಹುದು.

ಸಿಯೋಲ್ ಮೂಲದ 21 ವರ್ಷದ ಜೋನ್ನೆ ಫ್ಯಾನ್ ತನಗಿರುವ ಅಲರ್ಜಿ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದು, ನನಗೆ ಸಾಯಲು 37 ದಾರಿಗಳಿವೆ ಎಂದು ಹೇಳಿದ್ದಾರೆ.

ಒಟ್ಟು 37 ಆಹಾರಗಳಿಂದ ನನಗೆ ಅಲರ್ಜಿ ಕಾಡುತ್ತದೆ ಎಂದಿರುವ ಅವರು, ಇದರಿಂದ ತನ್ನ ಜೀವನಶೈಲಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.

ನಟ್ಸ್, ದ್ರಾಕ್ಷಿ, ಸಮುದ್ರಾಹಾರ ಸೇರಿದಂತೆ ಹಲವು ಬಗೆಯ ಆಹಾರಗಳು ಫ್ಯಾನ್‌ಗೆ ಅಲರ್ಜಿಯನ್ನುಂಟು ಮಾಡುತ್ತದೆ. ಈ ಬಗ್ಗೆ ಹಾಸ್ಯಾತ್ಮಕವಾಗಿ ಹೇಳಿರುವ ಅವರು, ನನಗೆ 37 ಮೆಚ್ಚಿನ ಸಂಖ್ಯೆಯಾಗಿದೆ. ಯಾಕೆಂದರೆ ನಾನು ಅಲರ್ಜಿಯುಳ್ಳ ಆಹಾರಗಳೊಂದಿಗೆ ಜೀವನಪರ್ಯಂತ ಸಾಗಬೇಕು ಎಂದಿದ್ದಾರೆ.

ಆದರೂ ಎದೆಗುಂದದ ಇವರು, ನಾನು ಹೊಂದಿರುವ ಕಾಯಿಲೆ ಜೀವನ ಪರ್ಯಂತ ಇರುವಂತಹದ್ದು ಎಂಬುದು ನನಗೆ ತಿಳಿದಿದೆ. ಇದರಿಂದ ನಾನು ಒತ್ತಡಕ್ಕೆ ಒಳಗಾಗಿಲ್ಲ ಬದಲಿಗೆ ಇದನ್ನೇ ಹಾಸ್ಯಮಯ ರೀತಿಯಲ್ಲಿ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ಅಲರ್ಜಿ ಕಾಯಿಲೆ ಫ್ಯಾನ್ ಗೆ ಅನುವಂಶಿಕವಾಗಿ ಬಂದಿಲ್ಲ. ಆದರೆ ಅವಳು ಮಕ್ಕಳನ್ನು ಪಡೆಯದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಫ್ಯಾನ್ ಸಾಮಾಜಿಕ ಜಾಲತಾಣದಲ್ಲಿ ತನಗಿರುವ ಅಪರೂಪದ ಕಾಯಿಲೆಯ ಬಗ್ಗೆ ಹೇಳಿಕೊಂಡ ಬಳಿಕ ಆಕೆಗೆ ಹಲವು ನೆಗೆಟಿವ್ ಕಾಮೆಂಟ್ ಗಳು ಬಂದಿವೆ.

ತನಗೆ ಬಂದಿರುವ ಕಾಮೆಂಟ್ ಗಳನ್ನು ಧನಾತ್ಮಕವಾಗಿಯೇ ಸ್ವೀಕರಿಸಿರುವ ಫ್ಯಾನ್ , ತನ್ನಂತೆಯೇ ಇಂತಹ ಕಾಯಿಲೆ ಹೊಂದಿರುವ ಇಲ್ಲವೇ ಬೇರಾವುದಾದರೂ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಾವು ಬೆಂಬಲ ನೀಡಲು ಈ ವಿಡಿಯೋ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.

ಅಲ್ಲದೇ ಚರ್ಮದ ಬಗ್ಗೆ ಹೆಚ್ಚು ಕಾಳಜಿಯನ್ನು ತಾವು ವಹಿಸುತ್ತಿದ್ದು, ಇದು ನನ್ನನ್ನು ಆರೋಗ್ಯಕರವಾಗಿ ಇರಿಸಿದೆ ಎಂದು ಫ್ಯಾನ್ ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *