Salman Khan hugs and kisses a journalist - Do you know what netizens are?

ಪತ್ರಕರ್ತೆಯನ್ನು ಅಪ್ಪಿ ಮುತ್ತಿಟ್ಟ ಸಲ್ಮಾನ್ ಖಾನ್ – ನೆಟ್ಟಿಗರು ಏನಂದ್ರು‌ ಗೊತ್ತಾ?

ನ್ಯೂಸ್ ಆ್ಯರೋ : ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ತಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಲುಗೆಯಲ್ಲಿರುತ್ತಾರೆ. ಈ ಕುರಿತು ಅನೇಕ ವಿಡಿಯೋಗಳಲ್ಲಿ ಕಾಣಬಹುದು. ಇತ್ತೀಚೆಗೆ ಅವರು ಗೋವಾದಲ್ಲಿ ಪತ್ರಕರ್ತೆಯೊಬ್ಬರನ್ನು ತಬ್ಬಿ ಮುತ್ತು ಕೊಟ್ಟಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೋವಾದಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಎಲ್ಲರ ಗಮನ ಸೆಳೆದರು.

ಸೋದರ ಸೊಸೆ ಅಲಿಜೆ ಅಗ್ನಿಹೋತ್ರಿ ಜೊತೆಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಟೈಗರ್ 3 ಚಿತ್ರನಟ ಸಲ್ಮಾನ್ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಕಡೆಗೆ ಹೋಗುತ್ತಿದ್ದಂತೆ, ಪತ್ರಕರ್ತರ ಸಾಲಿನಲ್ಲಿ ಪರಿಚಿತ ಮುಖವನ್ನು ನೋಡಿ ರೋಮಾಂಚನಗೊಂಡರು.

View this post on Instagram

A post shared by Instant Bollywood (@instantbollywood)

ಬಳಿಕ ಹತ್ತಿರ ಬಂದು ಹಿರಿಯ ಪತ್ರಕರ್ತೆಯೊಬ್ಬರನ್ನು ತಬ್ಬಿಕೊಂಡು ಹಣೆಗೆ ಚುಂಬಿಸಿದರು. ಬಳಿಕ ಹೇಗಿದ್ದೀರಿ ಎಂದು ಹಿರಿಯ ಪತ್ರಕರ್ತೆಯನ್ನು ಸಲ್ಮಾನ್ ಕೇಳಿದ್ದು, ಪತ್ರಕರ್ತೆ ವ್ಯಂಗ್ಯವಾಗಿ ನಾಟಕ ಮಾಡಬೇಡ ಎಂದಿದ್ದಾರೆ.

ಈ ವಿಡಿಯೋ ಹಿರಿಯ ಪತ್ರಕರ್ತರೊಂದಿಗೆ ಸಲ್ಮಾನ್ ಖಾನ್ ಅವರ ಸ್ನೇಹವು ದೀರ್ಘಕಾಲದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇದೀಗ ಈ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಹಲವಾರು ನೆಟ್ಟಿಗರು ಸಲ್ಮಾನ್ ಭಾಯ್ ನಿಜವಾಗಿಯೂ ತುಂಬಾ ಒಳ್ಳೆಯವರು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಿಗ್‌ ಸ್ಟಾರ್‌ ಆದರೂ ತಮ್ಮ ಗೆಳೆಯರ ಜೊತೆ ಎಷ್ಟು ಪ್ರೀತಿಯಿಂದ ಮಾತನಾಡಿಸ್ತಾರೆ ಎಂದು ಸಲ್ಲು ಅನ್ನು ಹೊಗಳಿದ್ದಾರೆ.