ವ್ಯಕ್ತಿಯೊಬ್ಬನ ಕರುಳಿನಲ್ಲಿತ್ತು ಜೀವಂತ ನೊಣ….! – ಅದು ಪ್ರವೇಶಿಸಿದ್ದು ಹೇಗೆ ಗೊತ್ತಾ…?

ವ್ಯಕ್ತಿಯೊಬ್ಬನ ಕರುಳಿನಲ್ಲಿತ್ತು ಜೀವಂತ ನೊಣ….! – ಅದು ಪ್ರವೇಶಿಸಿದ್ದು ಹೇಗೆ ಗೊತ್ತಾ…?

ನ್ಯೂಸ್ ಆ್ಯರೋ : ನಮ್ಮ ದೇಹ ಸ್ಥಿತಿ ಅತ್ಯಂತ ಸೂಕ್ಷ್ಮ. ಯಾವುದಾದರೂ ರೀತಿಯಲ್ಲಿ ನಮಗೆ ಅನಾರೋಗ್ಯ ಬಂದಾಗ ದೇಹ ಯಾವುದೇ ಕೆಲಸವನ್ನು ಮಾಡಲು ಆಸಕ್ತಿ ವಹಿಸುವುದಿಲ್ಲ. ಇನ್ನು ದೊಡ್ಡ ದೊಡ್ಡ ಖಾಯಿಲೆಗಳು ಬಂದರೆ ಅಷ್ಟೇ ಬಿಡಿ. ನಮಗೆ ಗೊತ್ತಿಲ್ಲದಂತೆ ನಾವು ಮನೋದೌರ್ಬಲ್ಯರಾಗಿ ಹೋಗ್ತೇವೆ. ಆದರೆ ಇಲ್ಲಿ ನಡೆದ ಘಟನೆ ನಿಜವಾಗ್ಲೂ ಮೈ ರೋಮಾಂಚನಗೊಳಿಸುತ್ತೆ. ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ಈ ನೈಜ ಘಟನೆ ನೀವು ತಿಳಿದುಕೊಳ್ಳಲೇಬೇಕು.

ಅಮೆರಿಕದ ಮಿಸೌರಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ, 63 ವರ್ಷದ ವ್ಯಕ್ತಿಯ ಕರುಳಿನಲ್ಲಿ ಜೀವಂತ ನೊಣ ಪತ್ತೆಯಾಗಿದ್ದು, ಇದು ವೈದ್ಯರನ್ನೂ ಆಶ್ಚರ್ಯಗೊಳಿಸಿದೆ. ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ನಿಗೂಢವಾಗಿದೆ.

ಅಮೆರಿಕದ ಮಿಸೌರಿಯಾದ 63 ವರ್ಷದ ವ್ಯಕ್ತಿ ಕುರುಳಿನ ಕ್ಯಾನ್ಸರ್​ನಲ್ಲಿ ಬಳಲುತ್ತಿದ್ದು, ಪ್ರತೀ ತಿಂಗಳ ಅಂತ್ಯದಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ಚೆಕ್​​​ಅಪ್​​​​ ಸಮಯದಲ್ಲಿ ಕರುಳಿನೊಳಗೆ ಕ್ಯಾಮೆರಾವನ್ನು ಇರಿಸಿ ತಪಾಸಣೆಗಾಗಿ ಮಾಡಲಾಗುತ್ತಿತ್ತು.

ಆದರೆ ಈ ಬಾರಿ ತಪಾಸಣೆ ಮಾಡುತ್ತಿರುವ ವೇಳೆ ವ್ಯಕ್ತಿಯ ಕರುಳಿನ ಒಳಗೆ ಜೀವಂತ ನೊಣ ಇರುವುದು ಪತ್ತೆಯಾಗಿದೆ. ಆದರೆ ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ತಿಳಿದಿಲ್ಲ. ಸದ್ಯ ಈ ಘಟನೆ ಎಲ್ಲೆಡೆ ಭಾರೀ ವೈರಲ್​ ಆಗಿದೆ.

ಲ್ಯಾಡ್ಬೈಬಲ್ ವರದಿ ಏನು ಹೇಳುತ್ತೆ..?

ಮಿಸೌರಿ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ತಜ್ಞರು ರೋಗಿಯನ್ನು ವಿಚಾರಣೆ ನಡೆಸಿ ನೊಣವು ಅವನ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನೊಣ ತನ್ನ ದೇಹವನ್ನು ಹೇಗೆ ಪ್ರವೇಶಿಸಿದೆ ಎಂದು ಆ ವ್ಯಕ್ತಿಗೂ ತಿಳಿದಿಲ್ಲ.

ತನಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಕರುಳಿನ ಕ್ಯಾನ್ಸರ್​​​ನ ತಪಾಸಣೆಗೂ ಮುನ್ನ ಒಂದು ದಿನ ಪೂರ್ತಿಯಾಗಿ ಉಪವಾಸದಿಂದಿರಬೇಕು. ಆದ್ದರಿಂದ ಈ ವ್ಯಕ್ತಿ ಹಿಂದಿನ ದಿನ ಜೀರ್ಣಾಂಗವನ್ನು ಖಾಲಿ ಮಾಡಲು ಅಗತ್ಯವಾದ ಕೊಲೊನೋಸ್ಕೋಪಿಯ ದ್ರವಗಳನ್ನು ಮಾತ್ರ ಸೇವಿಸಿದ್ದರು. 24 ಗಂಟೆಗಳ ಉಪವಾಸದ ಹಿಂದಿನ ದಿನ ಸಂಜೆ ಪಿಜ್ಜಾ ಮತ್ತು ಸಲಾಡ್ ಅನ್ನು ಸೇವಿಸಿದ್ದರೂ, ಆಹಾರದಲ್ಲಿ ನೊಣಗಳಿವೆಯೇ ಎಂದು ಅವರಿಗೆ ತಿಳಿದಿರಲಿಲ್ಲ.

ನೊಣ ಕರುಳನ್ನು ಹೇಗೆ ಪ್ರವೇಶಿಸಿತು?

ಅಮೇರಿಕನ್ ಜರ್ನಲ್ ಗ್ಯಾಸ್ಟ್ರೋಎಂಟರಾಲಜಿ ಪ್ರಕಾರ, ಜೀರ್ಣಾಂಗ ವ್ಯವಸ್ಥೆಯ ಕೊನೆಯ ಭಾಗವಾದ ಕೊಲೊನ್ ಅನ್ನು ಜೀವಂತ ನೊಣ ಹೇಗೆ ತಲುಪಿತು ಎಂಬುದು ನಿಗೂಢವಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಹಣ್ಣು, ತರಕಾರಿಗಳನ್ನು ಸೇವಿಸುವಾಗ ತಮಗೆ ಗೊತ್ತಿಲ್ಲದೇ ನೊಣಗಳ ಮೊಟ್ಟೆ ಅಥವಾ ಲಾರ್ವಾಗಳನ್ನು ತಿನ್ನುತ್ತಾರೆ.

ಈ ಕೀಟಗಳು ಹೇಗಾದರೂ ಹೊಟ್ಟೆಯ ಆಮ್ಲದಿಂದ ತಪ್ಪಿಸಿಕೊಂಡು ಕರುಳಿನಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಇದನ್ನು ಕರುಳಿನ ಮೈಯಾಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಕರುಳಿನೊಳಗೆ ಜೀವಂತ ನೋಣಗಳು ಪತ್ತೆಯಾಗಬಹುದು ಎಂದು ತಿಳಿದುಬಂದಿದೆ.

ಮಿಸೌರಿ ವಿಶ್ವವಿದ್ಯಾನಿಲಯದ ಮುಖ್ಯಸ್ಥನ ಪ್ರಕಾರ..

ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಅವರು ಹೇಳುವಂತೆ ನೊಣವು ಅವನ ಬಾಯಿ ಅಥವಾ ಹಿಂಭಾಗದ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸಿರಬಹುದು. ಜೀರ್ಣಕಾರಿ ಕಿಣ್ವಗಳು ಮತ್ತು ಹೊಟ್ಟೆಯ ಆಮ್ಲವು ನೊಣವನ್ನು ನುಂಗಿದ್ದರೆ ನೊಣ ಜೀವಂತವಾಗಿ ಇರುತ್ತಿರಲ್ಲಿಲ್ಲ. ಆದರೂ ಕೂಡ ನೊಣ ಕರುಳಿನೊಳಗೆ ಜೀವಂತ ನೊಣ ಹೇಗೆ ಪತ್ತೆಯಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಆದ್ದರಿಂದ ಹಣ್ಣು, ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು ಮತ್ತು ನೊಣಗಳನ್ನು ದೂರವಿಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಆದರೆ ಯಾವುದೇ ಸಣ್ಣ ಕ್ರಿಮಿಗಳು ನಮ್ಮ ದೇಹವನ್ನು ಪ್ರವೇಶಿಸಿದರೆ ಇದರಿಂದ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ನಾವು ಧರಿಸುವ ಬಟ್ಟೆಯಿಂದ ಹಿಡಿದು ಸೇವಿಸುವ ಆಹಾರಗಳಲ್ಲಿ ಕೂಡಾ ಇಂತಹ ನೊಣ, ಕೀಟ ಕ್ರಿಮಿಗಳಂತಹ ಜೀವಿಗಳು ಇದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *