
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಗಿಲ್-ಸಾರಾ ಫೋಟೋ – ಕೊನೆಗೂ ಪ್ರೀತಿಯನ್ನು ಖಾತ್ರಿ ಪಡಿಸಿದ್ರಾ ಲವ್ ಬರ್ಡ್ಸ್? ವೈರಲ್ ಫೋಟೋ ಕಥೆ ಏನು?
- ವೈರಲ್ ನ್ಯೂಸ್
- November 8, 2023
- No Comment
- 63
ನ್ಯೂಸ್ ಆ್ಯರೋ : ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹಾಗೂ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮ್ಯಾನ್ ಶುಭ್‌ಮನ್ ಗಿಲ್ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವಿಶ್ವಕಪ್ ಏಕದಿನ ಪಂದ್ಯಾಟ ನಡೆಯುತ್ತಿದ್ದು, ಆಟದ ವೇಳೆ ಸ್ಟೇಡಿಯಂನಲ್ಲಿ ಸಾರಾ ಅವರ ಹೆಸರನ್ನು ಕ್ರಿಕೆಟ್ ಅಭಿಮಾನಿಗಳು ಜೋರಾಗಿ ಕೂಗುತ್ತಲೇ ಇರುತ್ತಾರೆ. ಈ ಜೋಡಿ ಡೇಟಿಂಗ್‌ನಲ್ಲಿದ್ದಾರೆಂಬ ಸುದ್ದಿಯ ಬೆನ್ನಲ್ಲೇ ಗಿಲ್ ಅವರನ್ನು ಸಾರಾ ತಬ್ಬಿಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಕೊನೆಗೂ ಈ ಜೋಡಿ ತಮ್ಮ ಸಂಬಂಧವನ್ನು ಖಾತ್ರಿ ಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ವೈರಲ್ ಆಗಿರುವ ಫೋಟೋದ ಸತ್ಯಾಸತ್ಯತೆ ಇಲ್ಲಿದೆ ನೋಡಿ.
ಈಚೆಗೆ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಎಐ ನಕಲಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು, ಇದರಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿತ್ತು. ಅದೇ ಸಮಯದಲ್ಲಿ, ಈಗ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಅವರ ಫೋಟೋಗಳು ಸಹ ವೈರಲ್ ಆಗುತ್ತಿವೆ. ಆದರೆ ಇದು ನಿಜವಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ನಿಜವಲ್ಲ. ಇದರ ನೈಜ ಫೋಟೋದಲ್ಲಿ ಸಾರಾ ಅವರು ಸಹೋದರ ಅರ್ಜುನ್ ತೆಂಡೂಲ್ಕರ್ ಜೊತೆಗೆ ಪೋಸ್ ಕೊಡುವುದನ್ನು ಕಾಣಬಹುದು. ಆದರೆ ಈ ಫೋಟೋವನ್ನು ಟ್ಯಾಂಪರ್ ಮಾಡಲಾಗಿದೆ. ಸಾರಾ ತನ್ನ ಸಹೋದರ ಅರ್ಜುನ್ ಅವರ ಹುಟ್ಟುಹಬ್ಬದಂದು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈಗ, ಫೋಟೋ ಟ್ಯಾಂಪರ್ ಮಾಡಿ, ಅರ್ಜುನ್ ಮುಖ ಇರುವಲ್ಲಿ ಗಿಲ್ ಫೋಟೋವನ್ನು ಎಡಿಟ್ ಮಾಡಿ ಹಾಕಲಾಗಿದೆ.
ಕಳೆದ ಕೆಲ ವರ್ಷಗಳಿಂದ ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ.