ಮಕ್ಕಳ ಸಂಖ್ಯೆ ಕಡಿಮೆ ಆಗ್ತಿರೋ ಬಗ್ಗೆ ಸದನದಲ್ಲೇ ಬಿಹಾರ ಸಿಎಂ ‘ಲೈಂಗಿಕ’ ಮಾತು – ಮದುವೆ ಆದ್ಮೇಲೆ ರಾತ್ರಿಯಿಡೀ..*, ಆದ್ರೆ ** ಆಗುವಾಗ * ಹೊರಗೆ ಬಿಡ್ತಾರೆ.‌.!!

ಮಕ್ಕಳ ಸಂಖ್ಯೆ ಕಡಿಮೆ ಆಗ್ತಿರೋ ಬಗ್ಗೆ ಸದನದಲ್ಲೇ ಬಿಹಾರ ಸಿಎಂ ‘ಲೈಂಗಿಕ’ ಮಾತು – ಮದುವೆ ಆದ್ಮೇಲೆ ರಾತ್ರಿಯಿಡೀ..*, ಆದ್ರೆ ** ಆಗುವಾಗ * ಹೊರಗೆ ಬಿಡ್ತಾರೆ.‌.!!

ನ್ಯೂಸ್ ಆ್ಯರೋ : ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದು ಕ್ರಾಂತಿ ಮಾಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ಸದನದಲ್ಲಿ ‘ಲೈಂಗಿಕತೆಯ’ ಬಗೆಗಿನ ಹೇಳಿಕೆ ನೀಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೀಸಲಾತಿ ವ್ಯವಸ್ಥೆಗೆ ಹೊಸ ಮುನ್ನುಡಿ ಬರೆಯ ಹೊರಟ ಇವರು ಮೀಸಲಾತಿಯನ್ನು ಸಮರ್ಥಿಸಿಕೊಳ್ಳುವಾಗ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುವಾಗ ನೀಡಿದ ಒಂದು ಹೇಳಿಕೆ ಸಖತ್ ವೈರಲ್ ಆಗ್ತಾ ಇದೆ. ಬಿಹಾರ ಸಿಎಂ ವಿರುದ್ಧ ಮಹಿಳಾ ಆಯೋಗ ಕಿಡಿಕಾರಿದೆ.

ಅಧಿವೇಶನದಲ್ಲಿ ನಿತೀಶ್ ಕುಮಾರ್ ಹೇಳಿದ್ದೇನು?

ಖುದ್ದು ನಿತೀಶ್ ಕುಮಾರ್ ಅವರೇ ಹೇಳಿದಂತೆ ಒಂದು ಹುಡುಗ- ಹುಡುಗಿ ಮದುವೆ ಆಗುತ್ತೆ. ಮದುವೆ ಆದ್ಮೇಲೆ ರಾತ್ರಿಯಿಡೀ ಅವನು *ಅವನು ** ಕಾರಣಕ್ಕೆ ಮಕ್ಕಳು ಹುಟ್ಟುತ್ತವೆ. ಶಿಕ್ಷಿತ ಹುಡುಗಿಯಾದವಳು ಅವನು ** ಅದನ್ನು ಪೂರ್ತಿ ** ಅಂತಾರೆ. ಅದು ** ಆಗೋವಾಗ ಹೊರಗೆ ** ಬಿಡ್ತಾರೆ. ಹಾಗಾಗಿ ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ…! ಹೀಗೆ ನಾವು ಇಲ್ಲಿ ಬರೆಯಲು ಸಾಧ್ಯವಾಗದಷ್ಟು ಅಶ್ಲೀಲವಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಸದನದಲ್ಲಿ ಮಾತನಾಡುತ್ತಾರೆ ಎಂದರೆ ನಾವು ಶಾಕ್ ಆಗಲೇಬೇಕು.

ನಿತೀಶ್ ವಿರುದ್ಧ ಬಿಜೆಪಿ ಕೆಂಡಾಮಂಡಲ

ನಿತೀಶ್ ಕುಮಾರ್ ಹೇಳಿಕೆಗೆ ಬಿಹಾರ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.‌ 70ರ ವಯೋಮಾನದ ನಿತೀಶ್ ಕುಮಾರ್ ಮನಸ್ಸಿನಲ್ಲಿ ಇಂತಹ ಲೈಂಗಿಕ ಭಾವನೆಗಳು ಮೂಡುವುದು ತಪ್ಪು. ಜೊತೆಗೆ ಜನಪ್ರತಿನಿಧಿಗಳ ಸದನದಲ್ಲಿ ಇಂಥಾ ಮಾತು ಸರಿಯಲ್ಲ ಎಂದು ಟೀಕಿಸಿದೆ.

ಬಿಹಾರ ಸಿಎಂ ಹೇಳಿಕೆ ವಿರುದ್ಧ ರೊಚ್ಚಿಗೆದ್ದ ಮಹಿಳಾ ಆಯೋಗ

ಈ ಬೆಳವಣಿಗೆಗಳ ಮಧ್ಯೆಯೇ ಮಹಿಳಾ ಆಯೋಗ ಸಿಎಂ ನಿತೀಶ್ ಕುಮಾರ್ ಕ್ಷಮೆ ಯಾಚನೆಗೆ ಆಗ್ರಹಿಸಿದೆ. ವಿಧಾನಸೌಧದಲ್ಲಿ ಹೀಗೆ ಮಾತನಾಡಿದ್ದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಮಹಿಳೆಯರ ಗೌರವಕ್ಕೆ ಧಕ್ಕೆ. ಈ ಕೂಡಲೇ ಇವರು ಕ್ಷಮೆಯಾಚಿಸಬೇಕೆಂದು ಹೇಳಿಕೆ ವಿರುದ್ಧ ಗರಂ ಆಗಿದ್ದ ಮಹಿಳಾ ಆಯೋಗ ಒತ್ತಾಯಿಸಿದೆ.

ವಿರೋಧಕ್ಕೆ ಕ್ಯಾರೇ ಅನ್ನದೆ ಆರೋಪ ತಳ್ಳಿಹಾಕಿದ ಡಿಸಿಎಂ ತೇಜಸ್ವಿ ಯಾದವ್….!

ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುವಾಗ ಸಹಜವಾಗಿ ಎಲ್ಲರಿಗೂ ಮುಜುಗರ ಆಗುತ್ತದೆ. ಶಾಲಾ ಕಾಲೇಜುಗಳಲ್ಲೇ ಈ ಬಗ್ಗೆ ಶಿಕ್ಷಣ ನೀಡಲಾಗ್ತಿದೆ. ನಿತೀಶ್ ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಡಿಸಿಎಂ ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *