ಈ ಕೆಫೆಯಲ್ಲಿ ನೀರಲ್ಲಿ ಕಾಲಿಟ್ಟು ಕೂತ್ರೆ ಮಾತ್ರ ತಿನ್ನೋಕೆ ಆಗೋದು..! – ಜೀವಂತ ಮೀನಿನ ಜೊತೆ ಊಟ ಮಾಡೋ ಕೆಫೆ ಹೇಗಿದೆ ಗೊತ್ತಾ?

ಈ ಕೆಫೆಯಲ್ಲಿ ನೀರಲ್ಲಿ ಕಾಲಿಟ್ಟು ಕೂತ್ರೆ ಮಾತ್ರ ತಿನ್ನೋಕೆ ಆಗೋದು..! – ಜೀವಂತ ಮೀನಿನ ಜೊತೆ ಊಟ ಮಾಡೋ ಕೆಫೆ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಯಾವುದೇ ವ್ಯವಹಾರ ಆರಂಭಿಸಿದರೂ ಕೂಡಾ ಅದರಲ್ಲಿ ಅತಿ ಹೆಚ್ಚು ಲಾಭಾಂಶ ಗಳಿಸಲು ಒಂದಲ್ಲ ಒಂದು ಮಾನದಂಡವನ್ನು ನಾವು ಉಪಯೋಗಿಸುತ್ತಲೇ ಇರುತ್ತೇವೆ. ಕೆಲವು ಹೋಟೆಲ್ ಗಳಿಗೆ ಹೋದರಂತೂ ಅಲ್ಲಿ ಅಕ್ವೇರಿಯಂನಲ್ಲಿರುವ ಮೀನುಗಳನ್ನು ನೋಡಿ ಆಕರ್ಷಿತರಾಗುವುದು ಸಹಜ. ಆದರೆ ಇದೇನು ಅಚ್ಚರಿ ಅಂತೀರಾ…. ಈ ಕೆಫೆಗೆ ಆಗಮಿಸುವ ಗ್ರಾಹಕರು ಮೊಣಕಾಲಿನವರೆಗೆ ಇರುವ ಅದರಲ್ಲೂ ಡಜನ್ ಗಟ್ಟಲೆ ಮೀನುಗಳಿರುವ ನೀರಿನಲ್ಲಿ ತಮ್ಮ ಪಾದಗಳನ್ನು ಇಟ್ಟೇ ಆಹಾರ ಸೇವಿಸಬೇಕಂತೆ. ಕೇಳಲು ಸೋಜಿಗವೆನಿದರೂ ಇದು ಸತ್ಯ….!

ಏನಿದು ಸ್ವೀಟ್ ಫಿಶ್ ಕೆಫೆ..?

ಥೈಲ್ಯಾಂಡ್ ನಲ್ಲಿರುವ ಸ್ವೀಟ್ ಫಿಶ್ ಕೆಫೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಕೆಫೆಯು ಪ್ರಾಣಿ ಹಕ್ಕುಗಳ ಕಾರ್ಯಕರ್ತರಿಂದ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಥೈಲ್ಯಾಂಡ್ ನ ಖಾನೋಮ್ ನಲ್ಲಿರುವ ಈ ಉಪಾಹಾರ ಗೃಹದಲ್ಲಿ ಹೊಟೇಲ್ ಸಿಬ್ಬಂದಿ ನೀರಿನಲ್ಲಿ ಹಾಗೆಯೇ ಬಂದು ಸರ್ವ್ ಮಾಡುವುದನ್ನು ಮತ್ತು ಗ್ರಾಹಕರು ನೀರಿನಲ್ಲಿ ಕಾಲಿಟ್ಟುಕೊಂಡು ಆಹಾರವನ್ನು ಸೇವಿಸುತ್ತಾರೆ.
ಇದನ್ನು ಪ್ರಾರಂಭಿಸಿದಾಗ ಕೆಫೆಯ ಮಾಲೀಕ ಯೋಸಾಫೊಲ್ ಜಿಟ್ಮಂಗ್ ಅವರು ಅಮಿಕ್ಸ್ ಕಾಫಿಯಿಂದ ಸ್ಪೂರ್ತಿ ಪಡೆದು ಈ ಕೆಫೆಯನ್ನು ಸ್ಥಾಪಿಸಲಾಯಿತು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಗ್ರಾಹಕರು ನೆಲದ ಮೇಲಿರುವ ನೀರಿನಲ್ಲಿ ಈಜುವ ಮೀನುಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವುದು ಕೆಫೆಯನ್ನು ಪ್ರಾರಂಭಿಸುವ ಹಿಂದಿನ ಆಲೋಚನೆಯಾಗಿದೆ ಎಂದು ತಿಳಿಸಿದರು.

ಥೈಲ್ಯಾಂಡ್ ನಲ್ಲಿ ಇಂತಹ ಕೆಫೆ ಇದೇ ಮೊದಲು..!

ಥೈಲ್ಯಾಂಡ್ ನಲ್ಲಿ ಈ ಮಾದರಿಯ ಕೆಫೆಯನ್ನು ನಿರ್ಮಿಸುವ ಗೋಜಿಗೆ ಯಾರೊಬ್ಬನೂ ಹೋಗಿಲ್ಲ ಎಂಬುದನ್ನು ಜಿಟ್ಮಂಗ್ ಕಂಡುಕೊಂಡರು.‌ ಆದರೂ ಕೆಫೆಯಲ್ಲಿ ಈ ಫಿಲ್ಟರೇಶನ್ ಅಳವಡಿಸುವುದು ದೊಡ್ಡ ಸವಾಲಾಗಿತ್ತು. ಆದರೂ ಸಮಸ್ಯೆಗಳನ್ನು ಎದುರಿಸಿ ನಿರ್ಮಿಸಿದ ಈ ಸ್ವೀಟ್ ಫಿಶ್ ಕೆಫೆ ಅತ್ಯಂತ ಪ್ರಸಿದ್ಧಿಯನ್ನು ಪಡೆಯಿತು.

ಹೇಗಿದೆ ಕೆಫೆಯ ಒಳಾಂಗಣ..?

ದಿನದ 24 ಗಂಟೆಯೂ ಕೆಲಸ ಮಾಡುವ ಕೆಲಸಗಾರರನ್ನು ಇಲ್ಲಿ ನೇಮಿಸಲಾಗಿತ್ತು. ಅಷ್ಟೇ ಅಲ್ಲದೆ ಪ್ರತಿ ಗ್ರಾಹಕರನ್ನು ಕೆಫೆಗೆ ಬಿಡುವ ಮೊದಲು ಸಿಬ್ಬಂದಿ ತಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕಗಳನ್ನು ನೀಡುತ್ತಿದ್ದರು. ಮೀನುಗಳ ರಕ್ಷಣೆ ಇದರ ಹಿಂದಿನ ಮುಖ್ಯ ಧ್ಯೇಯವಾಗಿತ್ತು. ಮೀನುಗಳನ್ನು ಮುಟ್ಟದಂತೆ ಅಥವಾ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಗ್ರಾಹಕರಿಗೆ ಕೆಫೆಯೊಳಗೆ ಬರುವ ಮೊದಲು ತಿಳಿಸಲಾಗುತ್ತದೆ.
ಕೋಯಿ ಎಂಬ ಹೆಸರಿನ ಮೀನುಗಳು ಬಣ್ಣದ ಮೀನಿನ ಪ್ರಬೇಧಗಳಾಗಿವೆ. ಕೊಳಗಳು ಅಥವಾ ನೀರಿನ ಉದ್ಯಾನಗಳಲ್ಲಿ ಇದನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಇರಿಸಲಾಗುತ್ತದೆ. ಅವುಗಳು ಸಾಮಾನ್ಯವಾಗಿ ಜನರಿಗೆ ಹೆದರುವುದಿಲ್ಲ. ಇದೇ ಪ್ರಭೇದದ ಮೀನುಗಳನ್ನೇ ಈ ಕೆಫೆಯಲ್ಲೂ ಇರಿಸಲಾಗಿದೆ.

ಒಟ್ಟಾರೆಯಾಗಿ ಕೊಳದಂತೆ ನಿರ್ಮಿತವಾಗಿರುವ ಒಳಾಂಗಣದ ಈ ಕೆಫೆಯಲ್ಲಿ ಆಹಾರ ಸೇವಿಸುವುದೇ ಒಂದು ರೀತಿಯ ವಿಶೇಷ ಅನುಭವ ಎನ್ನಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *