ಡೀಪ್ ಫೇಕ್ ವಿಡಿಯೋದಿಂದ ನಟಿಯರ ಗೋಳಾಟ -ತೊಂದರೆ ಅನುಭವಿಸಿದ ನಟಿಯರ ಲಿಸ್ಟ್ ಇಲ್ಲಿದೆ..

ಡೀಪ್ ಫೇಕ್ ವಿಡಿಯೋದಿಂದ ನಟಿಯರ ಗೋಳಾಟ -ತೊಂದರೆ ಅನುಭವಿಸಿದ ನಟಿಯರ ಲಿಸ್ಟ್ ಇಲ್ಲಿದೆ..

ನ್ಯೂಸ್ ಆ್ಯರೋ : ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಬಹಳ ಚರ್ಚೆಯನ್ನು ಉಂಟು ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಗ್ ಬಿ ಅಮಿತಾಬ್ ಸೇರಿದಂತೆ ಅನೇಕ ಸಿನಿಮಾ ತಾರೆಯರು, ಅವರ ಅಭಿಮಾನಿಗಳು ಈ ಬಗ್ಗೆ ಧ್ವನಿ ಎತ್ತಿರುವುದು.

ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ ನಡೆದಾಗ ಒಂದೊಂದಾಗಿ ಸಿನಿಮಾ ತಾರೆಯರ ನಕಲಿ ವಿಡಿಯೋಗಳು ಬೆಳಕಿಗೆ ಬರುತ್ತಿವೆ. ಜರಾ ಪಟೇಲ್ ಎಂಬ ಯುವತಿಗೆ ಎಡಿಟ್ ಮಾಡಿ ರಶ್ಮಿಕಾ ಮಂದಣ್ಣ ಅವರ ಫೋಟೋ ಹಾಕಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಒಳಪಡುತ್ತಿದ್ದಂತೆ ಡಿಪ್​ಫೇಕ್​ ವಿಡಿಯೋಗಳಿಂದ ತೊಂದರೆ ಅನುಭವಿಸಿರುವ ಸಾಕಷ್ಟು ಸಿನಿಮಾ ತಾರೆಯರ ಹೆಸರು ಈಗ ಕೇಳಿ ಬರುತ್ತಿದೆ. ಅವರಲ್ಲಿ ಮುಖ್ಯವಾಗಿ ಕತ್ರಿನಾ, ತಮನ್ನಾ, ಪ್ರೀತಿ ಜಿಂಟಾ ಕೂಡ ಸೇರಿದ್ದಾರೆ.

ಕತ್ರಿನಾ ಕೈಫ್ : ಒಂಬತ್ತು ವರ್ಷಗಳ ಹಿಂದೆ ಕತ್ರಿನಾ ಕೈಫ್ ಅವರ ಅಶ್ಲೀಲ ವಿಡಿಯೋ ಒಂದು ವೈರಲ್ ಆಗಿತ್ತು. ಆದರೆ ಬಳಿಕ ಇದು ನಕಲಿ ಎಂದು ತಿಳಿಯಿತು. ಆಗಲೂ ಈ ಬಗ್ಗೆ ಕೊಂಚ ಚರ್ಚೆಯಾಗಿ ಬಾಲಿವುಡ್ ಸುಮ್ಮನಾಗಿತ್ತು.

ತಮನ್ನಾ ಭಾಟಿಯಾ : ಎಡಿಟ್ ವಿಡಿಯೋದಿಂದ ತಮನ್ನಾ ಅವರೂ ತೊಂದರೆ ಅನುಭವಿಸಿದ್ದರು. ಬಳಿಕ ಇದು ಫೇಕ್ ಅನ್ನೋದು ತಿಳಿಯಿತು.

ಸೋನಾಕ್ಷಿ ಸಿನ್ಹಾ : ಸೋನಾಕ್ಷಿ ಸಿನ್ಹಾ ಅವರ ಖಾಸಗಿ ವಿಡಿಯೋ ಒಂದು ವೈರಲ್ ಆಗಿದ್ದು, ಬಳಿಕ ಇದು ನಕಲಿ ಎನ್ನುವುದು ತಡವಾಗಿ ಗೊತ್ತಾಯಿತು.

ಅಕ್ಷರಾ ಸಿಂಗ್ : ಭೋಜ್​ಪುರಿ ನಟಿ ಅಕ್ಷರಾ ಸಿಂಗ್ ಅವರ ವಿಡಿಯೋ ವೈರಲ್ ಆದ ಬಳಿಕ ಅವರು ಸ್ಪಷ್ಟನೆ ನೀಡಿದರೂ ಅನೇಕರು ಇದನ್ನು ನಂಬಲಿಲ್ಲ. ಇದರಿಂದ ನಟಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಯಿತು.

ಪ್ರೀತಿ ಜಿಂಟಾ : ನಟಿ ಪ್ರೀತಿ ಜಿಂಟಾ ಲಿಪ್ ಲಾಕ್ ಮಾಡುವ ಎಂಎಂಎಸ್ ಒಂದು ಹರಿದಾಡಿತ್ತು. ಬಳಿಕ ಇದು ನಕಲಿ ಅನ್ನೋದು ತಿಳಿಯುತು.

ಅಂಜಲಿ ಅರೋರಾ : ಡ್ಯಾನ್ಸರ್ ಅಂಜಲಿ ಅರೋರಾ ಅವರ ಫೇಕ್ ವಿಡಿಯೋವೊಂದು ಹರಿದಾಡಿದ್ದು ಬಳಿಕ ಅವರು ಸ್ಪಷ್ಟನೆ ನೀಡಲೇಬೇಕಾಯಿತು.

ಮೋನಾ ಸಿಂಗ್ : ಮೋನಾ ಸಿಂಗ್ ಅವರದ್ದು ಎಂದು ಹೇಳಲಾದ ನಕಲಿ ಬೆತ್ತಲೆ ವಿಡಿಯೋದಿಂದ ಅವರು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದರು.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *