ಅಂಗವೈಕಲ್ಯ ದೇಹಕ್ಕೆ ಮಾತ್ರ ಇವರ ಮಾತೃ ವಾತ್ಸಲ್ಯಕ್ಕಲ್ಲ…! – ಈ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ…!!

ಅಂಗವೈಕಲ್ಯ ದೇಹಕ್ಕೆ ಮಾತ್ರ ಇವರ ಮಾತೃ ವಾತ್ಸಲ್ಯಕ್ಕಲ್ಲ…! – ಈ ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ…!!

ನ್ಯೂಸ್ ಆ್ಯರೋ : ತಾಯಿ ಪ್ರೀತಿ ಮೀರಿದ ವಾತ್ಸಲ್ಯ ಜಗತ್ತಿನಲ್ಲಿ ಬೇರೇನಿದೆ ಹೇಳಿ. ಆ ಮಮಕಾರ ಮೂರ್ತಿ ನಮ್ಮ ಬದುಕಿನಲ್ಲಿ ತ್ಯಾಗಿಯಾಗಿ ಬದುಕ ಸವೆಸುವವಳು. ತನ್ನವರಿಗಾಗಿ ಜೀವವನ್ನೂ ಮುಡಿಪಾಗಿಡಲು ಸಿದ್ಧವಿರುವವಳು. ತನ್ನ ಮಕ್ಕಳು ಕಿಂಚಿತ್ತೂ ಕಷ್ಟ ಪಡುವುದನ್ನು ನೋಡಲು ಬಯಸದ ಸ್ವಚ್ಛ ಹೃದಯಿ ಅವಳು.

ಇದೀಗ ಆ ಮಾತೃ ವಾತ್ಸಲ್ಯ ಬಿಂಬಿಸುವ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದೋರು ಮಾತ್ರ ಕಣ್ಣೀರು ಹಾಕದಿರಲ್ಲ..!

ವೀಡಿಯೋದಲ್ಲಿ ಏನಿದೆ…?

ವೀಡಿಯೋದಲ್ಲಿ ಅಂಗವಿಕಲ ಮಹಿಳೆಯೊಬ್ಬಳು ಕೋಲುಗಳ ಸಹಾಯದಿಂದ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ತಾನಾಗಿಯೇ ಮಹಿಳೆಗೆ ನೇರವಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ತನ್ನ ಪುಟ್ಟ ಮಗುವನ್ನು ಬೆನ್ನ ಮೇಲೆ ಕೂರಿಸಿಕೊಂಡಿದ್ದಾಳೆ.

ಲೋಕದ ಪರಿವಿಲ್ಲದ ಆ ಕಂದಮ್ಮ ಬೆನ್ನ ಮೇಲೆ ಕೂತು ಕಲ್ಲಂಗಡಿ ಹಣ್ಣನ್ನು ಸಂತೋಷದಿಂದ ತಿನ್ನುತ್ತಿದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಮಹಿಳೆಗೆ ಹಣ ನೀಡಲು ಮುಂದೆ ಬಂದು ಮಾನವೀಯತೆ ಮೆರೆದಿದ್ದಾರೆ.

80,000 ವೀಕ್ಷಣೆ ಕಂಡ ವೀಡಿಯೋ..!

ಈ ವೀಡಿಯೊವನ್ನು @RobertLyngdoh2 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 80,000ಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ್ರೆ ಮನಸ್ಸು ಚೂರಾಗುತ್ತೆ. ಬಡತನದ ಬೇಗೆಯಲ್ಲಿ ಒಂದು ದಿನವನ್ನು ದೂಡಲು, ಒಪ್ಪತ್ತು ಊಟ ಮಾಡಲು ಕಷ್ಟ ಪಡುವ ಅದೆಷ್ಟೋ ಜನರಿದ್ದಾರೆ. ಈ ತಾಯಿಯ ಛಲಗಾರಿಕೆಗೆ ಮಾತ್ರ ಈಕೆಯೇ ಸರಿಸಾಟಿ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *