
ಅಭಿಮಾನಿಗಳಿಗೆ ಮನೆ ಅಡ್ರೆಸ್ ಕೊಟ್ಟ ನಟಿ ರಾಧಿಕಾ ಕುಮಾರಸ್ವಾಮಿ – ಏನ್ ಸ್ಪೆಷಲ್ ಗೊತ್ತಾ..?
- ಮನರಂಜನೆ
- November 10, 2023
- No Comment
- 67
ನ್ಯೂಸ್ ಆ್ಯರೋ : ಚಿತ್ರರಂಗದಲ್ಲಿ ಎಲ್ಲರಿಗೂ ತಮ್ಮ ನೆಚ್ಚಿನ ನಟ ನಟಿಯರು ಇದ್ದೇ ಇರುತ್ತಾರೆ. ಸಿನಿ ಪ್ರಿಯರಿಗಂತೂ ಸಿನಿಮಾರಂಗದಲ್ಲಿನ ಪ್ರತಿಯೊಂದು ಅಪ್ಡೇಟ್ ಗಳನ್ನು ಮೆಲುಕು ಹಾಕುವುದೆಂದರೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಕೆಲವು ಸೆಲೆಬ್ರೆಟಿಗಳ ವೈಯಕ್ತಿಕ ವಿಚಾರ ಅಂದ್ರೆ ಮಾತಿಗೂ ನಿಲುಕದ ಕುತೂಹಲ. ಅದರಲ್ಲೂ ಒಬ್ಬ ನಟಿ ತನ್ನ ಅಭಿಮಾನಿಗಳಿಗೆ ಮನೆ ವಿಳಾಸವನ್ನೇ ಕೊಡ್ತಾರಂದ್ರೆ ಬಿಡ್ತಾರಾ…?
ಕಳೆದ ಕೆಲ ವರ್ಷಗಳಿಂದ ತನ್ನದೇ ಅನೇಕ ವೈಯಕ್ತಿಕ ವಿಚಾರಗಳಿಂದ ಅಭಿಮಾನಿಗಳಿಂದ ದೂರ ಉಳಿದಿದ್ದ ಸ್ಯಾಂಡಲ್ ವುಡ್ ನ ಒಂದು ಕಾಲದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಈ ಬಾರಿ ಅವರ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ತನ್ನ ಮನೆ ಅಡ್ರೆಸ್ ನ್ನು ಏಕಾಏಕಿ ಅವರೇ ತಿಳಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು..?
‘ಎಲ್ಲರಿಗೂ ನಮಸ್ಕಾರ. ಹಲವು ವರ್ಷಗಳಿಂದ ಅಭಿಮಾನಿಗಳನ್ನು ಭೇಟಿ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ನವೆಂಬರ್ 11ರಂದು ಶನಿವಾರ ನಾನು ನನ್ನ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಅಂದು ನಿಮಗೂ ಸಿಗುತ್ತೇನೆ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ನಟಿ ರಾಧಿಕಾ ಕುಮಾರಸ್ವಾಮಿ ಮನೆ ಅಡ್ರೆಸ್ ಏನು..?
ವೀಡಿಯೋ ಮಾಡಿ ವಿಷಯ ತಿಳಿಸಿದ ನಟಿ ಅಭಿಮಾನಿಗಳ ಖುದ್ದು ಭೇಟಿಗಾಗಿ ತನ್ನ ಮನೆಯ ವಿಳಾಸವಾದ ‘ 10/11 ಎರಡನೇ ಮುಖ್ಯರಸ್ತೆ, ಎರಡನೇ ಕ್ರಾಸ್, ಆರ್ ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್, ನ್ಯೂ ಬೆಲ್ ರೋಸ್, ಡಾಲರ್ಸ್ ಕಾಲೋನಿ ಬೆಂಗಳೂರು’ ಎಂದು ಹೇಳಿದ್ದಾರೆ.
ಸಂಜೆ 6.30ರಿಂದ 9ಗಂಟೆಯವರೆಗೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳುತ್ತಿದ್ದೇನೆ. ಶನಿವಾರ ತಪ್ಪದೆ ಸಿಗೋಣ. ಲವ್ ಯು ಬೈ ನಮಸ್ಕಾರ’ ಎಂದು ಹೇಳುವ ಮೂಲಕ ವೀಡಿಯೋದ ಜೊತೆಗೆ ತನ್ನ ಬರ್ತ್ ಡೇ ಬಗೆಗಿನ ಮಾಹಿತಿ ನೀಡಿದ್ದಾರೆ.