
ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ಡಿವೋರ್ಸ್..!! – ಇವರ ಮಧ್ಯೆ ಯಾಕೀ ವಿಚ್ಛೇದನದ ಸುದ್ದಿ…?
- ಮನರಂಜನೆ
- November 10, 2023
- No Comment
- 134
ನ್ಯೂಸ್ ಆ್ಯರೋ : ಸಿನಿರಂಗದಲ್ಲಿ ಒಂದಲ್ಲಾ ಒಂದು ರೀತಿಯ ಕಾಂಟ್ರವರ್ಸಿ, ಕ್ಲೀಷೆಗಳನ್ನು ನಾವು ನೋಡುತ್ತಿರುತ್ತೇವೆ. ಅದರಲ್ಲೂ ಚಲನಚಿತ್ರ ರಂಗದಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಅನೇಕ ಸ್ಟಾರ್ ದಂಪತಿಯ ವೈಯಕ್ತಿಕ ಬದುಕಿನ ಬಗ್ಗೆಯೂ ನಾವು ಆಸಕ್ತಿ ತೋರಿಸುತ್ತೇವೆ. ಸಾಲು ಸಾಲು ವಿಚ್ಛೇದನದ ಕಥೆಗಳನ್ನು ಕೇಳಿ ಅಭಿಮಾನಿಗಳೂ ರೋಸಿ ಹೋಗಿದ್ದಾರೆ.
ಇದೆಲ್ಲದರ ನಡುವೆ ಇದೀಗ ಬಾಲಿವುಡ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆಯೂ ಡಿವೋರ್ಸ್ ಗುಸುಗುಸು ಹರಿದಾಡುತ್ತಿದೆ..
ವಿಚ್ಚೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಂತೂ ಬೆಚ್ಚಿ ಬಿದ್ದಿದ್ದಾರೆ. ಈ ಹಿಂದೆಯೂ ಇದೇ ರೀತಿ ಸುದ್ದಿಗಳು ಹರಿದಾಡಿದ್ದಾಗ ಅಮಿತಾಬ್ ಫ್ಯಾಮಿಲಿಗೂ ಕ್ಲಾರಿಟಿ ಸಿಕ್ಕಿತ್ತು. ಆದರೆ ಈ ವಿಚ್ಛೇದನದ ಸುದ್ದಿಗೆ ಒಂದು ಕಾರಣವಿದೆ.
ಡಿವೋರ್ಸ್ ವದಂತಿ ಹರಡಲು ಕಾರಣವೇನು..?
ಅಭಿಷೇಕ್- ಐಶ್ವರ್ಯಾ ಅವರನ್ನು ಬಾಲಿವುಡ್ ನ ಅತ್ಯಂತ ಸುಂದರ ತಾರಾ ಜೋಡಿ ಎಂದು ಕರೆಯುತ್ತಾರೆ. ಸುಮಾರು 20 ವರ್ಷಗಳಿಂದ ಯಾವುದೇ ಟೀಕೆಗಳಿಲ್ಲದೆ, ಜಗಳವಿಲ್ಲದೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಪ್ರೀತಿ ಕಾಣಿಕೆಯಾಗಿ ಆರಾಧ್ಯ ಎಂಬ ಮುದ್ದು ಹೆಣ್ಣು ಮಗಳೂ ಇದ್ದಾಳೆ.
ಯಾವುದೇ ಪಾರ್ಟಿಯಾಗಲಿ, ಸಿನಿಮಾ ಪ್ರದರ್ಶನವಾಗಲಿ ಜಂಟಿಯಾಗಿಯೇ ಕಾಣಸಿಗುತ್ತಾರೆ. ಇವರಿಬ್ಬರು ಯಾವತ್ತೂ ಒಂಟಿಯಾಗಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಇತ್ತೀಚೆಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಇತ್ತೀಚೆಗೆ ಮನೀಷಾ ಮಲ್ಹೋತ್ರಾ ನೀಡಿದ ದೀಪಾವಳಿ ಪಾರ್ಟಿಯಲ್ಲಿ ನಟಿ ಐಶ್ವರ್ಯ ರೈ ಮಿಂಚಿದ್ದರು.
ಆದರೆ ಈ ಪಾರ್ಟಿಯಲ್ಲಿ ನಟ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಐಶ್ವರ್ಯ ಸೋಲೋ ಎಂಟ್ರಿ ನೋಡಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಈ ಹಿಂದೆಯೂ ಒಂದು ಬಾರಿ ಮುಂಬೈನ ನೀತು ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ನ ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮಕ್ಕೆ ಐಶ್ವರ್ಯ ತನ್ನ ಮಗಳೊಂದಿಗೆ ಅತಿಥಿಯಾಗಿ ಆಗಮಿಸಿದ್ದರು. ಆಗಲೂ ಇದೇ ವಿಚ್ಛೇದನದ ವದಂತಿ ಹಬ್ಬಿತ್ತು.
ಮೊನ್ನೆ ಐಶ್ ಆಚರಿಸಿಕೊಂಡ ಹುಟ್ಟುಹಬ್ಬದಲ್ಲೂ ಅಭಿಷೇಕ್ ಗೈರು..!
ಇತ್ತೀಚೆಗಷ್ಟೇ ಐಶ್ವರ್ಯ ರೈ ತನ್ನ 50ನೇ ಹುಟ್ಟುಹಬ್ಬವನ್ನು ಸಿಯಾನ್ ಜಿಎಸ್ ಬಿ ಸೇವಾ ಮಂಡಲದ ಕ್ಯಾನ್ಸರ್ ರೋಗಿಗಳ ಜೊತೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದರು. ಈ ಸಂಭ್ರಮಾಚರಣೆಯಲ್ಲೂ ಅಭಿಷೇಕ್ ಇರಲಿಲ್ಲ. ಪತ್ನಿಯ ಜನ್ಮದಿನ ಸಂಭ್ರಮಾಚರಣೆಗೆ ಗೈರಾಗಿರುವುದು, ಲೇಟಾಗಿ ಶುಭಾಶಯ ಹೇಳಿರುವುದು..ಇದನ್ನೆಲ್ಲ ಗಮನಿಸಿರುತ್ತಿರುವ ಅಭಿಮಾನಿಗಳು ಇವರ ಮಧ್ಯೆ ನಿಜವಾಗಿಯೂ ಏನೋ ನಡೆದಿದೆ ಎಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.