
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಾಸುಕಿ ವೈಭವ್ – ಬಹುಕಾಲದ ಗೆಳತಿ ಜತೆ ಶೀಘ್ರದಲ್ಲೇ ಹಸೆಮಣೆಗೆ : ವಧು ಯಾರು?
- ಮನರಂಜನೆ
- November 10, 2023
- No Comment
- 97
ನ್ಯೂಸ್ ಆ್ಯರೋ : ಯುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆಂಬ ವಿಚಾರವನ್ನು ನಟಿ ತಾರಾ ಅವರು ಹೇಳಿದ್ದಾರೆ.
ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಅವರು ಮದುವೆ ಗಂಡಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಕುರಿತಾಗಿ ಮಾತನಾಡುವ ವೇಳೆ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇದೇ ನವೆಂಬರ್ 16ರಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ.
ಮದುವೆ ಕುರಿತಂತೆ ವಾಸುಕಿ ಒಪ್ಪಿಕೊಂಡಿದ್ದರು. ತಾರಾ ಅವರಿಗೆ ‘ಅಯ್ಯೋ.. ಹೇಳಬೇಡಿ’ ಎಂದು ಕೇಳಿಕೊಂಡಿದ್ದರೂ, ಅವರು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ವಾಸುಕಿ ಅವರು ಹೇಳಿಕೊಂಡಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ವಾಸುಕಿ ಮಾಹಿತಿ ನೀಡಬಹುದು.