
2 ವರ್ಷಗಳ ಬಳಿಕ ಡಿವೋರ್ಸ್ ಗೆ ಕಾರಣ ತಿಳಿಸಿದ ಸಮಂತಾ – ಮದುವೆ ಬಗ್ಗೆ ಸ್ಯಾಮ್ ಹೇಳಿದ್ದೇನು ಗೊತ್ತಾ?
- ಮನರಂಜನೆ
- November 10, 2023
- No Comment
- 140
ನ್ಯೂಸ್ ಆ್ಯರೋ : ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ತೆಲುಗು ನಟ ನಾಗಚೈತನ್ಯಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ಸಮಯಕ್ಕೆ ಇವರಿಬ್ಬರ ಬದುಕಿಗೆ ವಿಚ್ಚೇದನ ಪೂರ್ಣ ವಿರಾಮ ಹಾಕಿತು. ಈ ವಿಚಾರ ದೇಶದೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿತ್ತು.
ಸ್ವತಃ ಸಮಂತಾ ಬದುಕಿನಲ್ಲಿ ಎದ್ದ ಬಿರುಗಾಳಿಗೆ ನಲುಗಿ ಸಿನಿಮಾದಿಂದಲೂ ಕೊಂಚ ಬ್ರೇಕ್ ಪಡೆದಿದ್ದರು. ಆದರೆ ಇದೀಗ ನಾಗಚೈತನ್ಯ ಅವರೊಂದಿಗಿನ ವಿಚ್ಚೇದನ ಸಂಬಂಧ ಅಚ್ಚರಿಯ ಹೇಳಿಕೆಯೊಂದನ್ನು ಸಮಂತಾ ನೀಡಿದ್ದಾರೆ. ಸ್ಯಾಮ್ ಹೇಳಿದ ಆ ಅಚ್ಚರಿಯ ಸಂಗತಿ ಹೀಗಿದೆ ನೋಡಿ.
ಹೊಡೆತದ ಮೇಲೆ ಹೊಡೆತ ಅನುಭವಿಸಿದೆ..!
ಮದುವೆಯಾಗಿ 3 ವರ್ಷಗಳ ಕಾಲ ಸಮಂತಾ-ನಾಗ್ ಒಟ್ಟಿಗೆ ಇದ್ದರು. ಬಳಿಕ ವಿಚ್ಚೇದನ ಪಡೆದರು. ಈ ಬಗ್ಗೆ ಮಾತನಾಡಿರುವ ಸ್ಯಾಮ್, ‘ನನ್ನದು ವಿಫಲವಾದ ಮದುವೆ. ವಿಚ್ಚೇದನ ಅನ್ನುವುದು ನನ್ನ ವೈಯಕ್ತಿಕ ಬದುಕು, ಆರೋಗ್ಯ ಹಾಗೂ ಸಿನಿಮಾದ ಮೇಲೆ ಪರಿಣಾಮ ಬೀರಿತು.
ಇದರಿಂದಾಗಿ ಹೊಡೆತದ ಮೇಲೆ ಹೊಡೆತ ಅನುಭವಿಸಿದೆ. ಟ್ರೋಲಿಗರು ನನ್ನ ಬದುಕಿನ ಬಗ್ಗೆ ಮನಬಂದಂತೆ ಮಾತನಾಡಿದ್ದರು ಆದರೆ ಇದರಿಂದ ನಾನು ವಿಚಲಿತಳಾಗಿಲ್ಲ’ ಎಂದಿದ್ದಾರೆ.
ನಾನು ಹೋರಾಡಲು ಸಿದ್ಧ!
ಮಾತು ಮುಂದುವರೆಸಿದ ಸ್ಯಾಮ್, ‘ಮನುಷ್ಯನ ಗೆಲುವು ನಿರ್ಣಯವಾಗುವುದು ಪ್ರಶಸ್ತಿ, ಅಂತಸ್ತು ಅಥವಾ ಹೆಸರಿನಿಂದಲ್ಲ ಆತನ ಒಳ್ಳೆಯ ಗುಣದಿಂದ. ಕಷ್ಟ, ನೋವು, ಕೊರತೆಗಳು ನನ್ನನ್ನು ಕಾಡುತ್ತಿದೆ. ಆದರೆ ಅದೆಲ್ಲವನ್ನು ಸಾರ್ವಜನಿಕವಾಗಿಸಲು ನಾನು ಬಯಸುವುದಿಲ್ಲ.
ಎಂತಹ ಪರಿಸ್ಥಿತಿಯಲ್ಲೂ, ಯಾರ ವಿರುದ್ಧವೂ ಕೂಡ ನಾನು ಹೋರಾಡಲು ಸಿದ್ಧ’ ಎಂದು ಸಮಂತಾ ಹೇಳಿಕೆ ನೀಡಿದ್ದಾರೆ.