
ಕನ್ನಡ ಕಿರುತೆರೆಯ ಟಿಆರ್ಪಿಯಲ್ಲಿ ಬಾಸ್ ಆದ “ಬಿಗ್ ಬಾಸ್” – ಜನಪ್ರಿಯ ಧಾರಾವಾಹಿಗಳನ್ನೇ ಬದಿಗೆ ಸರಿಸಿದ ರಿಯಾಲಿಟಿ ಶೋ..!
- ಮನರಂಜನೆ
- November 10, 2023
- No Comment
- 66
ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಜನರು ಇತ್ತೀಚೆಗೆ ಧಾರಾವಾಹಿಗಳ ಮೇಲೆ ಮಾತ್ರವಲ್ಲದೆ ರಿಯಾಲಿಟಿ ಶೋಗಳ ಮೇಲೂ ಒಲವು ತೋರಿಸುತ್ತಿದ್ದಾರೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ 9 ಸಂಚಿಕೆಗಳನ್ನು ಪೂರೈಸಿ 10ರ ಸೀಸಸ್ ಗೆ ಪಾದಾರ್ಪಣೆ ಮಾಡಿದೆ. ಈ ದುಬಾರಿ ರಿಯಾಲಿಟಿ ಶೋ ಆರಂಭಕ್ಕೂ ಮುನ್ನವೇ ಸೀಸನ್ 10 ವಿಭಿನ್ನವಾಗಿರುತ್ತೆ ಎಂದು ಹೇಳಿಯೇ ಆರಂಭ ಮಾಡಲಾಗಿತ್ತು. ಅದನ್ನು ಕೇವಲ ನಾಲ್ಕು ವಾರದಲ್ಲೇ ಈ ಸೀಸನ್ ಸಾಬೀತು ಮಾಡಿದೆ. ಬಹಳ ದಿನಗಳ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 10 ಟಿಆರ್ ಪಿ ಪಟ್ಟಿಯಲ್ಲಿ ನಂ.1 ಸ್ಥಾನಕೇರಿದೆ.
ಹೇಗಿದೆ ಟಿಆರ್ ಪಿ ಲಿಸ್ಟ್…?
ಯಾವುದೇ ರಿಯಾಲಿಟಿ ಶೋ ಬಂದರೂ ಧಾರವಾಹಿಗಳಂತೂ ಸಖತ್ ಪೈಪೋಟಿ ನೀಡುತ್ತಲೇ ಬರುತ್ತಿದೆ. ಆದರೆ ಈ ಬಾರಿ ಬಿಗ್ ಬಾಸ್ ಗೆ ವೀಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಟಾಸ್ಕ್, ಗಲಾಟೆ, ಮನಸ್ತಾಪ, ಪ್ರೀತಿ- ಪ್ರೇಮ ಮುಂತಾದ ಎಲ್ಲಾ ಹೊಸ ವಿಷಯಗಳು ದೊಡ್ಮನೆಯಲ್ಲಿ ವೀಕ್ಷಕರನ್ನು ಸೆಳೆಯುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ ಎಂಬುವುದಕ್ಕೆ ಈ ಬಾರಿಯ ಟಿಆರ್ ಪಿ ಲೀಸ್ಟೇ ಸಾಕ್ಷಿ. ಕಿಚ್ಚ ಸುದೀಪ್ ನಿರೂಪಣೆ ಮಾಡುವ ಶನಿವಾರದ ಸಂಚಿಕೆ ಅಂದರೆ 8.1 ಟಿವಿಆರ್ ನ್ನು ಪಡೆದುಕೊಂಡಿದೆ. ಹಾಗೆಯೇ ಭಾನುವಾರ ಕೂಡಾ 7.6 ಟಿವಿಆರ್ ಸಿಕ್ಕಿದೆ. ಈ ಅಂಕಗಳ ಮೂಲಕ ಮತ್ತೆ ಬಿಗ್ ಬಾಸ್ ಗೆದ್ದ ಸಂಭ್ರಮದಲ್ಲಿದೆ. ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂಬುವುದು ಸಾಬೀತಾಗುತ್ತಿದೆ.
ಸೀರಿಯಲ್ ಗಳನ್ನು ಸೈಡಿಗೆ ಸರಿಸಿದ ಬಿಗ್ ಬಾಸ್…!
ಇಷ್ಟು ದಿನ ಕಿರುತೆರೆಯಲ್ಲಿ ಧಾರವಾಹಿಗಳು ಡಾಮಿನೇಟ್ ಮಾಡುತ್ತಿದ್ದವು. ಆದರೆ ಬಿಗ್ ಬಾಸ್ ಅದನ್ನೀಗ ಬಗ್ಗುಬಡಿದಿದೆ. ನಂಬರ್ ವನ್ ಸ್ಥಾನದಲ್ಲಿರುತ್ತಿದ್ದ ಝೀ ಕನ್ನಡ ವಾಹಿನಿಯ ‘ ಪುಟ್ಟಕ್ಕನ ಮಕ್ಕಳು’ ಧಾರವಾಹಿ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಈ ಧಾರವಾಹಿಗೆ 7.9, ಸರಿಗಮಪ ರಿಯಾಲಿಟಿ ಶೋಗೆ 7.8 ಟಿಆರ್ ಪಿ ಬಂದಿದೆ.