ನಿನ್ನ ದಯೆ ಮಕ್ಕಳ ಮೇಲೂ ಇರಲಿ-ತನ್ನನ್ನು ರಕ್ಷಿಸಿದ ಮಹಿಳೆಯ ಮಡಿಲಿಗೆ ಮರಿಗಳನ್ನು ಒಪ್ಪಿಸಿದ ಶ್ವಾನ-ವೀಡಿಯೋ ವೈರಲ್

ನಿನ್ನ ದಯೆ ಮಕ್ಕಳ ಮೇಲೂ ಇರಲಿ-ತನ್ನನ್ನು ರಕ್ಷಿಸಿದ ಮಹಿಳೆಯ ಮಡಿಲಿಗೆ ಮರಿಗಳನ್ನು ಒಪ್ಪಿಸಿದ ಶ್ವಾನ-ವೀಡಿಯೋ ವೈರಲ್

ನ್ಯೂಸ್ ಆ್ಯರೋ‌ : ನಾಯಿ ಜೊತೆಗಿನ ಮಾನವನ ಸಂಬಂಧಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಮಾನವನ ನಂಬಿಕಸ್ಥ ಪ್ರಾಣಿ ನಾಯಿ ಎಂದು ಕರೆಯಲಾಗುತ್ತದೆ. ಈ ಮಾತು ಪದೇ ಪದೆ ಸಾಬೀತಾಗುತ್ತಾ ಇರುತ್ತದೆ. ಈಗ ವೈರಲ್ ಆಗಿರುವ ವೀಡಿಯೋ ಕೂಡ ಅದೇ ರೀತಿಯದ್ದು.

ವೈರಲ್ ವೀಡಿಯೋದಲ್ಲೇನಿದೆ?

ಮಹಿಳೆಯೊಬ್ಬರು ಕೋಣೆಯಲ್ಲಿ ಕುಳಿತಿದ್ದಾರೆ. ಅವರ ಎದುರಿನ ಮೂಲೆಯಲ್ಲಿ ಶ್ವಾನವೊಂದು ಮರಿಗಳನ್ನು ಹೆತ್ತಿದೆ. ತಾಯಿ ಶ್ವಾನ ಮರಿಗಳನ್ನು ಒಂದೊಂದಾಗಿ ತಂದು ಆ ಮಹಿಳೆಯ ಮಡಿಲಿಗೆ ಹಾಕುತ್ತದೆ. ಆಕೆ ಮರಿಗಳ ಮೊತೆಗೆ ಶ್ವಾನವನ್ನೂ ಬಿಗಿದಪ್ಪುತ್ತಾಳೆ. ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೋ ವೈರಲ್ ಆಗಿದೆ.

ಈ ಹಿಂದೆ ಈ ಶ್ವಾನವನ್ನು ಆ ಮಹಿಳೆ ರಕ್ಷಿಸಿದ್ದರಂತೆ. ಹೀಗಾಗಿ ಕೃತಜ್ಞಾ ಭಾವದಿಂದ ಶ್ವಾನ ತನ್ನ ಕರುಳಕುಡಿಗಳನ್ನು ಮಹಿಳೆಯ ಮಡಿಲಿಗೆ ಹಾಕುತ್ತಿದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ಸದ್ಯ ಈ ವೀಡಿಯೋವನ್ನು ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ 2 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದು, 52 ಸಾವಿರಕ್ಕೂ ಅಧಿಕ ಲೈಕ್ ಲಭಿಸಿದೆ.

ಈ ವೀಡಿಯೋ ನೋಡಿ ಅನೇಕರು ಭಾವುಕರಾಗಿದ್ದಾರೆ. ಈ ಶ್ವಾನಕ್ಕೆ ತನ್ನನ್ನು ರಕ್ಷಿಸಿದ್ದು ಈ ಮಹಿಳೆ ಎನ್ನುವುದು ಗೊತ್ತು. ತನ್ನ ಮರಿಗಳಿಗೂ ಅಷ್ಟೇ ಪ್ರೀತಿ, ಕಾಳಜಿ ದೊರೆಯಲೆಂದು ಹೀಗೆ ವರ್ತಿಸುತ್ತಿದೆ ಎಂದು ಹಲವರು ಅಬಿಪ್ರಾಯಪಟ್ಟಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *