ನೆಟ್ ಫ್ಲಿಕ್ಸ್ ನ ಚಂದಾದಾರಿಕೆಯೊಂದಿಗೆ 2 ಅತ್ಯುತ್ತಮ ಕೊಡುಗೆ ಘೋಷಿಸಿದ ಜಿಯೋ – ರೀಚಾರ್ಜ್ ಬೆಲೆ ಎಷ್ಟು ಗೊತ್ತೇ?

ನೆಟ್ ಫ್ಲಿಕ್ಸ್ ನ ಚಂದಾದಾರಿಕೆಯೊಂದಿಗೆ 2 ಅತ್ಯುತ್ತಮ ಕೊಡುಗೆ ಘೋಷಿಸಿದ ಜಿಯೋ – ರೀಚಾರ್ಜ್ ಬೆಲೆ ಎಷ್ಟು ಗೊತ್ತೇ?

ನ್ಯೂಸ್ ಆ್ಯರೋ‌ : ಭಾರತದ ನಂ. 1 ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಪ್ರಸಿದ್ದ ಒಟಿಟಿ ಫ್ಲಾಟ್ ಫಾರ್ಮ್ ನೆಟ್ ಫ್ಲಿಕ್ಸ್ ನ ಚಂದಾದಾರಿಕೆಯನ್ನೂ ನೀಡುತ್ತಿರುವುದು ವಿಶೇಷ.

1099 ರೂ. ರೀಚಾರ್ಜ್

ಜಿಯೋ ಪರಿಚಯಿಸಿದ ಮೊದಲ ಪ್ರಿಪೇಯ್ಡ್ ಯೋಜನೆ ಇದಾಗಿದೆ. ಇದರಲ್ಲಿ ನೆಟ್ ಫ್ಲಿಕ್ಸ್ ಚಂದಾದಾರಿಕೆ ಉಚಿತ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯ. 5ಜಿ ನೆಟ್ ವರ್ಕ್ ನಲ್ಲಿ ದಿನಕ್ಕೆ 2 ಜಿಬಿ ಡೇಟಾ ಈ ರೀಚಾರ್ಜ್ ಮೂಲಕ ಪಡೆಯಬಹುದು. ಇದರ ವ್ಯಾಲಿಡಿಟಿ 84 ದಿನ.

1,499 ರೂ. ರೀಚಾರ್ಜ್

ಈ ಪ್ಲ್ಯಾನ್ ನಲ್ಲಿಯೂ ನೆಟ್ ಫ್ಲಿಕ್ಸ್ ಚಂದಾದಾರಿಕೆ ಇದೆ. ಇದರ ಅನುಕೂಲತೆ ಎಂದರೆ ಇದು ಮೊಬೈಲ್ ಗೆ ಸೀಮಿತವಲ್ಲ. ನೆಟ್ ಫ್ಲಿಕ್ಸ್ ಅನ್ನು ದೊಡ್ಡ ಪರದೆ ಮೇಲೂ ವೀಕ್ಷಿಸಬಹುದು. 84 ದಿನಗಳ ಕಾಲಾವಧಿ ಹೊಂದಿರುವ ಈ ಯೋಜನೆಯಲ್ಲಿ ಪ್ರತಿ ದಿನ 3ಜಿಬಿ 5ಜಿ ಡೇಟಾ ಲಭಿಸುತ್ತದೆ.

ಬಳಕೆದಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಬದ್ದರಾಗಿದ್ದೇವೆ. ನೆಟ್ ಫ್ಲಿಕ್ಸ್ ನಂತಹ ಜಾಗತಿಕ ಪಾಲುದಾರರೊಂದಿಗೆ ಸೇರಿ ಉತ್ತಮ ಕೊಡುಗೆ ನೀಡಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಜಿಯೋ ಕಂಪೆನಿ ಮೂಲಗಳು ತಿಳಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *