ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳ ಪಾತ್ರ ಮಾಡಿದ್ದ ಬಾಲಕಿ ಸದ್ಯ ಹೀರೋಯಿನ್ – ಬ್ಯೂಟಿ ನೋಡಿ ಕಿಚ್ಚಗೆ ಜೋಡಿಯಾಗಿ ಎಂದಾ ನೆಟ್ಟಿಗರು

ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳ ಪಾತ್ರ ಮಾಡಿದ್ದ ಬಾಲಕಿ ಸದ್ಯ ಹೀರೋಯಿನ್ – ಬ್ಯೂಟಿ ನೋಡಿ ಕಿಚ್ಚಗೆ ಜೋಡಿಯಾಗಿ ಎಂದಾ ನೆಟ್ಟಿಗರು

ನ್ಯೂಸ್‌ ಆ್ಯರೋ : ಕನ್ನಡದ ಹಿಟ್ ಸಿನಿಮಾ ವೀರ ಮದಕರಿಯಲ್ಲಿ ನಟ ಸುದೀಪ್ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದ ಬಾಲನಟಿ ಜೆರುಶಾ ಕ್ರಿಸ್ಟೋಫರ್ ಅವರು ನಾಯಕಿಯಾಗಿ ಇದೀಗ ಮಿಂಚುತ್ತಿದ್ದಾರೆ. ಈಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ ವಿಡಿಯೋ ಕ್ಲಿಪ್ ಸದ್ಯ ವೈರಲ್ ಆಗಿದೆ. ಈಕೆಯನ್ನು ನೋಡಿದ ನೆಟ್ಟಿಗರು ವೀರಮದಕರಿ ಸಿನಿಮಾದ ಬಾಲ ನಟಿ ಊಹಿಸಲಾಗದಷ್ಟು ಬದಲಾಗಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಬೆಂಗಳೂರಿನವರಾಗಿರುವ ಜೆರುಶಾ ಅವರು ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಟನೆಯ ಧೂಮಂ ಸಿನಿಮಾದಲ್ಲಿ ನಟಿಸಿದ್ದಾರೆ. ಈಚೆಗೆ ಇವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ‘ನಾನು ಕನ್ನಡದ ವೀರಮದಕರಿ ಸಿನಿಮಾದಲ್ಲಿ ಸುದೀಪ್ ಅವರಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ’ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿದ ಸಂದರ್ಶಕ ‘ವಾಟ್’ ಎಂದು ಆಶ್ಚರ್ಯಸೂಚಕವಾಗಿ ಪ್ರಶ್ನೆ ಮಾಡಿದ್ದಾರೆ.

50ಕ್ಕೂ ಅಧಿಕ ಜಾಹೀರಾತುಗಳಲ್ಲಿ ನಟಿಸಿದ್ದೇನೆ. ನನ್ನ ಕೆಲಸಗಳಿಗೆ ತಂದೆ ತಾಯಿ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಪ್ರತಿಯೊಂದು ಹೆಜ್ಜೆಗೂ ಜತೆಯಾಗಿ ನಿಂತಿದ್ದಾರೆ ಎಂದು ಜೆರುಶಾ ಸಂತೋಷ ಹೊರಹಾಕಿದ್ದಾರೆ.

ಈ ವಿಡಿಯೋಗೆ ಬಗೆಬಗೆಯ ಕಮೆಂಟ್​ಗಳು ಬರುತ್ತಿವೆ. ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕಾಣಿಸಿಕೊಂಡಿದ್ದರು. ಈಗ ಸುದೀಪ್​ಗೆ ನಾಯಕಿ ಆಗಿ ಅವರು ಕಾಣಿಸಿಕೊಳ್ಳಬಹುದು. ಅಷ್ಟು ಸುಂದರವಾಗಿ ಬೆಳೆದಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಜೆರುಶಾ ಅವರಿಗೆ 20 ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 114ಕ್ಕೂ ಪೋಸ್ಟ್‌ಗಳನ್ನು ಮಾಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *