8 ವರ್ಷಗಳ ಹಿಂದೆ ನೈಲ್ ಕಟ್ಟರ್ ನುಂಗಿ ಮರೆತು ಬಿಟ್ಟಿದ್ದ ಭೂಪ – ಹೊಟ್ಟೆ ನೋವಲ್ಲಿ ಆಸ್ಪತ್ರೆಗೆ ಸೇರಿದ ಆತನಿಗೆ ಏನಾಯ್ತು?
- ವೈರಲ್ ನ್ಯೂಸ್
- August 19, 2023
- No Comment
- 106
ನ್ಯೂಸ್ ಆ್ಯರೋ : ಮರೆವು ಎಂತಹ ಅನಾಹುತ ಸೃಷ್ಟಿಸುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ವ್ಯಕ್ತಿಯೊಬ್ಬರು 8 ವರ್ಷಗಳ ಹಿಂದೆ ನೈಲ್ ಕಟ್ಟರ್ ನುಂಗಿದ್ದರು. ಬಳಿಕ ಅದು ಅವರಿಗೆ ಮರೆತು ಹೋಗಿತ್ತು. ಇದೀಗ ಅದನ್ನು ಮಣಿಪಾಲ್ ಅಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.
ಏನಿದು ಪ್ರಕರಣ?
ಸರ್ಜಾಪುರದ 40 ವರ್ಷದ ವ್ಯಕ್ತಿಯೊಬ್ಬರು ಮದ್ಯಪಾನ ಮಾಡಿದ ಅಮಲಿನಲ್ಲಿ 2015ರಲ್ಲಿ ನೈಲ್ ಕಟ್ಟರ್ ನುಂಗಿದ್ದರು. ಬಳಿಕ ಅದನ್ನು ಮರೆತೇ ಬಿಟ್ಟಿದ್ದರು. ಇತ್ತೀಚೆಗೆ ನೋವು ಕಾಣಿಸಿಕೊಂಡಾಗ ಕ್ಲಿನಿಕ್ ಗೆ ತೆರಳಿದ್ದ ವೇಳೆ ನೈಲ್ ಕಟ್ಟರ್ ಇರುವುದು ಕಂಡು ಬಂದಿತ್ತು.
ಮಣಿಪಾಲ್ ಆಸ್ಪತ್ರೆಯ ಡಾ.ಯು.ಲೋಹಿತ್ ನೇತೃತ್ವದಲ್ಲಿ ವೈದ್ಯರ ತಂಡ ಲ್ಯಾಪ್ರೋಸ್ಕೋಫಿಕ್ ಶಸ್ತ್ರಚಿಕಿತ್ಸೆ ನಡೆಸಿ ನೈಲ್ ಕಟ್ಟರ್ ಅನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ಸದ್ಯ ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಆರೋಗ್ಯವಂತರಾಗಿರುವ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.