ಕೇರಳದಲ್ಲಿಆಫ್ರಿಕನ್ ಹಂದಿಜ್ವರ ಪತ್ತೆ – ಫಾರ್ಮ್ ನಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ..!

ಕೇರಳದಲ್ಲಿಆಫ್ರಿಕನ್ ಹಂದಿಜ್ವರ ಪತ್ತೆ – ಫಾರ್ಮ್ ನಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ..!

ನ್ಯೂಸ್ ಆ್ಯರೋ‌ : ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಪ್ರದೇಶದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ 2 ಫಾರ್ಮ್ ಗಳಲ್ಲಿರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದೃಢಪಡಿಸಿದ ಅಧಿಕಾರಿಗಳು

ಶುಕ್ರವಾರ ಜಿಲ್ಲೆಯ ಮಲಯಂಪಾಡಿಯಲ್ಲಿರುವ ಫಾರ್ಮ್ ಒಂದರಲ್ಲಿ ಹಂದಿ ಜ್ವರ ಪತ್ತೆಯಾಗಿದ್ದನ್ನು ಪಶು ಸಂಗೋಪನೆ ಅಧಿಕಾರಿಗಳು ದೃಢಪಡಿಸಿದ್ದರು. ಇದಾದ ಬಳಿಕ 10 ಕಿ.ಮೀ. ದೂರದಲ್ಲಿರುವ ಇನ್ನೊಂದು ಫಾರ್ಮ್ ನಲ್ಲಿರುವ ಹಂದಿಗಳನ್ನೂ ಸಂಶಯದ ಹಿನ್ನಲೆಯಲ್ಲಿ ಕೊಲ್ಲಲು ಸೂಚಿಸಲಾಗಿದೆ.

ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ 1 ಕಿ.ಮೀ. ಅನ್ನು ಸೋಂಕು ಪತ್ತೆಯಾದ ಪ್ರದೇಶವೆಂದೂ, 10 ಕಿ.ಮೀ.ಯನ್ನು ರೋಗ ಕಣ್ಗಾವಲು ವಲಯ ಎಂದೂ ಘೋಷಿಸಲಾಗಿದೆ. ಇಲ್ಲಿ ಹಂದಿ ಮಾಂಸ ಮಾರಾಟ, ವಿತರಣೆ ನಿಷೇಧಿಸಲಾಗಿದೆ.

ಈ ನಿಷೇಧ 3 ತಿಂಗಳವರೆಗೆ ಮುಂದುವರಿಯಲಿದೆ. ಸೋಂಕಿಗೆ ಒಳಗಾಗಿರುವ ಹಂದಿಗಳನ್ನು ಬೇರೆ ಫಾರ್ಮ್ ಗಳಿಂದ ಖರೀದಿಸಲಾಗಿತ್ತೇ ಎನ್ನುವುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *