ನಿಮ್ಮ ಮೊಬೈಲ್‌ನಲ್ಲಿ ಸದ್ದಿಲ್ಲದೆ ಬ್ಯಾಟರಿ ಖಾಲಿಯಾಗುತ್ತಿದೆಯೇ? – ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ನಿಮ್ಮ ಮೊಬೈಲ್‌ನಲ್ಲಿ ಸದ್ದಿಲ್ಲದೆ ಬ್ಯಾಟರಿ ಖಾಲಿಯಾಗುತ್ತಿದೆಯೇ? – ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ನ್ಯೂಸ್‌ ಆ್ಯರೋ : ಇದೀಗ ಡೇಂಜರ್ ಆ್ಯಪ್‌ಗಳು ಲಗ್ಗೆಯಿಟ್ಟಿದ್ದು, ಫ್ಲೇ ಸ್ಟೋರ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡುವ ಮೊದಲು ಹಾಗೂ ಈಗಾಗಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್ ಗಳನ್ನು ಪರಿಶೀಲಿಸುವಂತೆ ಮ್ಯಾಕ್‌ಅಫೀ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ.

ಕೆಲವೊಂದು ಆಪ್‌ಗಳು ಬ್ಯಾಟರಿ ಬ್ಯಾಕಪ್‌ ಅನ್ನು ಕಡಿಮೆ ಮಾಡುವುದರ ಜತೆಗೆ ಡಿಸ್‌ಪ್ಲೇ ಆಫ್ ಆಗಿರುವಾಗಲೂ ಮೊಬೈಲ್ ಡೇಟಾವನ್ನು ಉಪಯೋಗಿಸುತ್ತಿದೆ. ಇದು ಗೂಗಲ್‌ನ ನಿಯಮವನ್ನು ಮುರಿದು ಕಾರ್ಯ ನಿರ್ವಹಿಸುತ್ತಿರುವುದರಿಂದ ಬಳಕೆದಾರರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೆ ಬಳಕೆದಾರರ ಒಪ್ಪಿಗೆಯಿಲ್ಲದೆ ಜಾಹೀರಾತು ಕ್ಲಿಕ್‌ಗಳನ್ನು ರಚಿಸಲು ಕೆಲವು ಡೆವಲಪರ್‌ಗಳು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ. ಹಲವು ಆಪ್‌ಗಳನ್ನು ಗೂಗಲ್‌ನಿಂದ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲ್ಪಟ್ಟಿದ್ದರೂ, ಮೂಲಗಳ ಪ್ರಕಾರ ಸುಮಾರು 2.5 ಮಿಲಿಯನ್ ಬಳಕೆದಾರರು ಅವುಗಳನ್ನು ಈಗಾಗಲೇ ಇನ್‌ಸ್ಟಾಲ್‌ ಮಾಡಿ ಬಳಸಿಕೊಳ್ಳುತ್ತಿರುವ ಆಘಾತಕಾರಿ ವಿಷಯ ತಿಳಿದುಬಂದಿದೆ.

ಕೆಲ ಡೇಂಜರ್ ಆಪ್‌ಗಳ ಲಿಸ್ಟ್ ಇಲ್ಲಿದೆ:

ಟಿವಿ/ಡಿಎಮ್‌ಬಿ ಪ್ಲೇಯರ್, ಮ್ಯೂಸಿಕ್‌ ಡೌನ್‌ಲೋಡರ್, ನ್ಯೂಸ್ ಆಂಡ್‌ ಕ್ಯಾಲೆಂಡರ್ ಅಪ್ಲಿಕೇಶನ್‌ ಆಗಿವೆ. ಉಳಿದ ಲಿಸ್ಟ್‌ ಅನ್ನು ತಿಳಿಸಲಾಗಿಲ್ಲ. ಅದಾಗ್ಯೂ ಈ ಎಲ್ಲಾ ಕಳ್ಳ ಆ್ಯಪ್‌ಗಳು ಆರಂಭದಲ್ಲಿ ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲವಂತೆ. ಆದರೆ, ಕೆಲವು ವಾರಗಳ ನಂತರ ಜಾಹೀರಾತುಗಳನ್ನು ಡಿಸ್‌ಪ್ಲೇ ಮಾಡಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ತಿಳಿದುಬಂದಿದೆ.

ಹೊಸ ಆ್ಯಪ್‌ ಇನ್‌ಸ್ಟಾಲ್ ಮಾಡುವ ಮೊದಲು ಎಚ್ಚರ:

ಅದಲ್ಲದೆ ಮ್ಯಾಕ್‌ಅಫೀ ತಮ್ಮ ಬಳಕೆದಾರರು ಹೊಸ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೊದಲು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದೆ. ಅಂದರೆ ಇನ್‌ಸ್ಟಾಲ್‌ ಮಾಡುವ ಮೊದಲು ಅದು ವಿನಂತಿಸಿದ ಅನುಮತಿಗಳನ್ನು ಪರಿಶೀಲಿಸಬೇಕೆಂದು ವಿವರಿಸಿದೆ.

ಅದಲ್ಲದೆ ಹೊಸ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ ಬಳಕೆದಾರರು ತಮ್ಮ ಡಿವೈಸ್‌ನ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿ ಈ ವೇಳೆ ಬ್ಯಾಟರಿ ಬಾಳಿಕೆಯಲ್ಲಿ ಏರುಪೇರಾದರೆ ಆ ಆ್ಯಪ್‌ ದೋಷಪೂರಿತ ಎಂದು ನಿರ್ಧರಿಸಬೇಕೆಂದು ಸಲಹೆ ನೀಡಿದೆ.

ದೋಷಪೂರಿತ ಆ್ಯಪ್‌ಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ಬ್ಯಾಟರಿ ಡ್ರೈನ್ ಸಮಸ್ಯೆಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಳ್ಳಿ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಹಳೆಯ ಫೋನ್‌ಗಳ ಬ್ಯಾಟರಿ ಬ್ಯಾಕಪ್‌ ಸಹ ಈ ರೀತಿಯ ಸಮಸ್ಯೆ ಉಂಟು ಮಾಡುತ್ತದೆ. ಹಾಗಂದ ಮಾತ್ರಕ್ಕೆ ಇದೂ ಸಹ ಆ್ಯಪ್‌ನಿಂದಲೇ ಆಗುತ್ತಿರುವುದು ಅಂದುಕೊಳ್ಳಬೇಡಿ. ಇದರೊಂದಿಗೆ ನೀವು ಒಪ್ಪಿಗೆ ಸೂಚಿಸುವ ಅನುಮತಿಗಳ ಬಗ್ಗೆ ಸಾದಾ ಜಾಗೃತರಾಗಿರಿ.

ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಿಂದ ಮಾತ್ರ ಆ್ಯಪ್ ಇನ್‌ಸ್ಟಾಲ್ ಮಾಡಿ:

ಒಂದು ಆ್ಯಪ್ ಇನ್‌ಸ್ಟಾಲ್ ಮಾಡುವ ಮೊದಲು ಹಲವು ಬಾರಿ ಯೋಚಿಸಿ ಅದರ ಪ್ರಯೋಜನವನ್ನು ತಿಳಿದುಕೊಳ್ಳಿ. ನಂತರ ವಿಶ್ವಾಸಾರ್ಹ ಅಧಿಕೃತ ಆ್ಯಪ್ ಸ್ಟೋರ್‌ಗಳಿಂದಲೇ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿ. ನೀವು ಯಾವುದೇ ಆ್ಯಪ್‌ಗಳನ್ನಾದರೂ ಸಹ ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಅಪ್ಲಿಕೇಶನ್‌ಗಳಿಗಾಗಿ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಹೊಂದಿರುವ ಇತರ ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳಿಂದ ಮಾತ್ರ ಇನ್‌ಸ್ಟಾಲ್‌ ಮಾಡಿ. ಹೊರತಾಗಿ ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು ಅಥವಾ ಅನಧಿಕೃತ ಸ್ಟೋರ್‌ಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಕೆಲಸ ಮಾಡಬೇಡಿ.

ಆ್ಯಪ್‌ ಇನ್‌ಸ್ಟಾಲ್‌ಗೆ ಮುನ್ನಾ ರೇಟಿಂಗ್ ಪರಿಶೀಲಿಸುವುದು ಅಗತ್ಯ:

ಯಾವುದೇ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡುವ ಮುನ್ನ ಅದರ ರೇಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಬಳಕೆದಾರರ ವಿಮರ್ಶೆಗಳನ್ನು ತಿಳಿದು ನಂತರ ಇನ್‌ಸ್ಟಾಲ್ ಮಾಡಿ. ಜನರ ಅಭಿಪ್ರಾಯವನ್ನು ಪರಿಶೀಲಿಸಿದಾಗ ಅದರ ಧನಾತ್ಮಕ ಹಾಗೂ ಋಣಾತ್ಮಕ ಅಭಿಪ್ರಾಯಗಳು ತಿಳಿಯುತ್ತದೆ.

ಆಗಾಗ್ಗೆ ಡಿವೈಸ್‌ ಅಪ್‌ಡೇಟ್ ಮಾಡಿ:

ಆವಾಗವಾಗ ಡಿವೈಸ್‌ಗಳನ್ನು ಅಪ್‌ಡೇಟ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಕೆಲ ಸಮಸ್ಯೆಗಳನ್ನು ನಾವು ಪ್ರಾರಂಭಿಕ ಹಂತದಲ್ಲೇ ತಡೆಯಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *