ಅಭಿಮಾನಿ ತಲೆಗೆ ಹೊಡೆದ್ರಾ ನಟ ನಾನಾ ಪಾಟೇಕರ್? – ವೈರಲ್ ಆಗ್ತಿರೋ ವಿಡಿಯೋದಲ್ಲಿ ಏನಿದೆ?

ಅಭಿಮಾನಿ ತಲೆಗೆ ಹೊಡೆದ್ರಾ ನಟ ನಾನಾ ಪಾಟೇಕರ್? – ವೈರಲ್ ಆಗ್ತಿರೋ ವಿಡಿಯೋದಲ್ಲಿ ಏನಿದೆ?

ನ್ಯೂಸ್ ಆ್ಯರೋ : ನೆಚ್ಚಿನ ಸೆಲೆಬ್ರಿಟಿಗಳು ಹತ್ತಿರ ಬಂದಾಗ ಸೆಲ್ಫಿ, ಆಟೋಗ್ರಾಫ್ ಗಾಗಿ ಅವರ ಅಭಿಮಾನಿಗಳು ಮುಗಿಬೀಳುವುದು ಸಹಜ. ಇದು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಬೇಸರ ಉಂಟು ಮಾಡುತ್ತದೆ. ಇದರಿಂದ ಅವರು ಉಡಾಫೆಯಿಂದ ವರ್ತಿಸುವುದು ಇದೆ.

ಇದೀಗ ನಾನಾ ಪಾಟೇಕರ್ ಅವರು ಇತ್ತೀಚೆಗೆ ಅಭಿಮಾನಿಯೊಂದಿಗೆ ಉಡಾಫೆಯಿಂದ ವರ್ತಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿಂದಿ, ಮರಾಠಿ ಚಿತ್ರ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಾನಾ ಪಾಟೇಕರ್ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಆದರೆ ಇದೀಗ ಅವರು ಅಭಿಮಾನಿಯೊಬ್ಬರ ಜೊತೆ ನಡೆದುಕೊಂಡ ರೀತಿಗೆ ಅನೇಕರು ಬೇಸರ ವ್ಯಕ್ತ ಪಡಿಸಿದ್ದಾರೆ.

ವಾರಣಾಸಿಯಲ್ಲಿ ಚಿತ್ರವೊಂದರ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ನಾನಾ ಪಾಟೇಕರ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಾನಾ ಪಾಟೇಕರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬಂದಿದ್ದು, ಈ ವೇಳೆ ನಾನಾ ಪಾಟೇಕರ್ ಅಭಿಮಾನಿಯ ತಲೆಗೆ ಹೊಡೆದು ದೂಡಿದ್ದಾರೆ.

ಬಳಿಕ ಅವರ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ದೂರ ದೂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಮಂದಿಯಲ್ಲಿ ಬೇಸರ ಉಂಟು ಮಾಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರ ನಿರ್ದೇಶಕ ಅನಿಲ್ ಶರ್ಮ, ಅದು ಸಿನಿಮಾದ ಚಿತ್ರೀಕರಣ ಒಂದು ಶಾಟ್ ಅಷ್ಟೇ. ರಸ್ತೆ ಮಧ್ಯ ದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಹುಡುಗನ ತಲೆಯೊಂದಕ್ಕೆ ಹೊಡೆಯಬೇಕಾದ ಸೀನ್ ಇತ್ತು. ಇದರ ಚಿತ್ರೀಕರಣ ವೇಳೆ ಯಾರೋ ಒಬ್ಬರು ಶೂಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *