
ನಿಮ್ಮ ಕರೆಯನ್ನು ಯಾರಾದರೂ ಕದ್ದು ಕೇಳುತ್ತಿದ್ದಾರೆ ಎಂಬ ಅನುಮಾನವೇ? -ಇದನ್ನು ಪತ್ತೆ ಹಚ್ಚುವುದು ಸುಲಭ : ಹೀಗೆ ಮಾಡಿ ಸಾಕು
- ಟೆಕ್ ನ್ಯೂಸ್
- November 16, 2023
- No Comment
- 46
ನ್ಯೂಸ್ ಆ್ಯರೋ : ಮೊಬೈಲ್ ಇಲ್ಲದ ಒಂದು ಕ್ಷಣವನ್ನು ಯೋಚಿಸುವುದು ಈಗ ಸಾಧ್ಯವಿಲ್ಲ. ಕರೆ, ಸಂದೇಶ ಕಳುಹಿಸುವುದರಿಂದ ಹಿಡಿದು ಹಣ ವರ್ಗಾವಣೆಗೂ ಈಗ ಮೊಬೈಲ್ ಬೇಕೇಬೇಕು.
ದಿನದ ಬಹುತೇಕ ಭಾಗವನ್ನು ನಾವು ಮೊಬೈಲ್ ನೊಂದಿಗೆಯೇ ಕಳೆಯುವಂತಾಗಿದೆ. ಕಚೇರಿ ಕೆಲಸ, ಶಾಪಿಂಗ್, ಬಿಲ್ ಪಾವತಿ, ಕ್ಯಾಬ್, ಬಸ್, ಟ್ರೈನ್, ವಿಮಾನ ಬುಕ್ಕಿಂಗ್, ಹಣ ವರ್ಗಾವಣೆ ಸೇರಿದಂತೆ ಅನೇಕ ಕೆಲಸಗಳನ್ನು ನಾವು ಫೋನ್ ಮೂಲಕವೇ ಮಾಡಿ ಮುಗಿಸುತ್ತೇವೆ. ಹೀಗಿರುವಾಗ ಇತ್ತೀಚೆಗೆ ಸೈಬರ್ ದಾಳಿಯು ಹೆಚ್ಚಾಗಿದೆ.
ಫೋನ್ ಟ್ಯಾಪ್ ಮಾಡುವುದು ಇತ್ತೀಚೆಗೆ ಸಾಮಾನ್ಯ ಸಂಗತಿ. ಕಳೆದ ತಿಂಗಳಷ್ಟೇ ಫೋನ್ ಟ್ಯಾಪ್ ಬಗ್ಗೆ ಆಪಲ್ ಕಂಪೆನಿ ಬಹುತೇಕ ರಾಜಕೀಯ ನಾಯಕರಿಗೆ ಸಂದೇಶ ಕಳುಹಿಸಿ ಎಲ್ಲರನ್ನೂ ಎಚ್ಚರಿಸಿತ್ತು. ಈ ನಡುವೆ ನಮ್ಮ ಫೋನ್ ಅನ್ನು ಯಾರಾದರೂ ಕದ್ದು ಕೇಳುತ್ತಾರೆಯೇ ಎನ್ನುವ ಸಣ್ಣ ಕುತೂಹಲ ಎಲ್ಲರಲ್ಲೂ ಮೂಡಿದೆ.
ಹ್ಯಾಕರ್ ಗಳಿಗೆ ಫೋನ್ ಹ್ಯಾಕ್ ಮಾಡುವುದು ದೊಡ್ಡ ವಿಷಯವೇ ಅಲ್ಲ. ಹೀಗಾಗಿ ನಮ್ಮ ಫೋನ್ ಹ್ಯಾ ಕ್ ಆಗಿದೆಯೇ ಅಥವಾ ಯಾರಾದರೂ ನಿಮ್ಮ ರಹಸ್ಯ ಕರೆಗಳನ್ನು ಕೇಳುತ್ತಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚಲು ನಾವು ದೊಡ್ಡ ಕಾರ್ಯವನ್ನೇನು ಮಾಡಬೇಕಿಲ್ಲ. ನಾವೇ ಇದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಕೆಲವೊಮ್ಮೆ ನಮ್ಮ ಫೋನ್ ಗೆ ಅನಗತ್ಯ ಕರೆಗಳು, ವೈಯಕ್ತಿಕ ಸಂದೇಶಗಳು ಬರುತ್ತವೆ. ಅನೇಕ ಬಳಕೆದಾರರು ಅಂತಹ ಕರೆ, ಸಂದೇಶಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಒಂದು ವೇಳೆ ಯಾರಾದರೂ ಫೋನ್ ಹ್ಯಾಕ್ ಮಾಡಲಾಗಿದ್ದರೆ ನಮ್ಮ ವಯಕ್ತಿಕ ಕರೆಗಳನ್ನು ಕೇಳಬಹುದು, ಸಂದೇಶಗಳನ್ನು ಸುಲಭವಾಗಿ ಓದಬಹುದು.
ಯಾರಾದರೂ ನಮ್ಮ ಕರೆ, ಸಂದೇಶಗಳನ್ನು ನೋಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಒಂದು ದಾರಿ ಇದೆ. ಇದಕ್ಕಾಗಿ ಫೋನ್ ನಲ್ಲಿ *#61# ಡಯಲ್ ಮಾಡಿ ಬಳಿಕ ಫೋನ್ ಪರದೆಯ ಪಾಪ್-ಅಪ್ ನಲ್ಲಿ ಕೆಲವು ವಿವರಗಳು ಬರುತ್ತವೆ. ಇದರಲ್ಲಿ ನಮ್ಮ ಕರೆಯನ್ನು ಯಾರಿಗೆ ಫಾರ್ ವರ್ಡ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಕರೆಗೆ ಉತ್ತರಿಸದಿದ್ದಾಗ ಅಥವಾ ಫೋನ್ ನೆಟ್ವರ್ಕ್ ಪ್ರದೇಶದಲ್ಲಿ ಇಲ್ಲದೇ ಇದ್ದಾಗ ನಮಗೆ ಬರುವ ಕರೆಗಳು ಸ್ವಯಂಚಾಲಿತವಾಗಿ ಬೇರೆಯವರಿಗೆ ಫಾರ್ ವರ್ಡ್ ಆಗುತ್ತದೆ. ಇದನ್ನು ಈ ಪಾಪ್ ಅಪ್ ನಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಇನ್ನು ಒಂದು ವೇಳೆ ನಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಪತ್ತೆ ಹಚ್ಚುವುದು ಕಷ್ಟವೇನಲ್ಲ.