ಶೀಘ್ರದಲ್ಲೇ ಬೆಂಗಳೂರಿನಲ್ಲಿ ‘ಯುಲು’ ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆಗೆ – ಓಡಿಸುವಾಗ ಹೆಲ್ಮೆಟ್–ಲೈಸೆನ್ಸ್‌ ಎರಡೂ ಬೇಕಿಲ್ಲ..!!

ನ್ಯೂಸ್‌ ಆ್ಯರೋ : ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದ ಹಾಗೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಯಿತು. ಇದೀಗ ಭಾರತದ ಪ್ರತಿ ತಿಂಗಳು ಒಂದಿಲ್ಲೊಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಬರುತ್ತದೆ. ಇದೀಗ ಬೆಂಗಳೂರು ಮೂಲದ ಯುಲು ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಾಂಚ್‌ ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ.

ಯುಲು, ಬಜಾಜ್ ಆಟೋ ನೆರವಿನೊಂದಿಗೆ ಎರಡನೇ ಪೀಳಿಗೆಯ ಈ ಸ್ಕೂಟರ್ ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ನೂತನ ಮಿರಾಕಲ್ ಜಿಆರ್‌ ಹಾಗೂ ಡಿಎಕ್ಸ್ ಜಿಆರ್‌ ಸ್ಕೂಟರ್ ಗಳು ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಬಂದಿವೆ. OTA ಸಪೋರ್ಟ್ ಕೂಡ ಲಭ್ಯವಿರಲಿದೆ. ಇವುಗಳನ್ನು ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಸುಲಭವಾಗಿ ಉಪಯೋಗಿಸಬಹುದು. ಈ ಮೂಲಕ ಯುಲು ತನ್ನ ಆದಾಯವನ್ನು ದ್ವಿಗುಣಗೊಳಿಸಲು ಹೊರಟಿದೆ.

ಯುಲು ಕಂಪನಿ ಹಿನ್ನೆಲೆ:

ಇದು ದೊಡ್ಡ ನಗರಗಳಲ್ಲಿ ಖಾಸಗಿ ಹಾಗೂ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆ ಕೊಡುವ ಕಂಪನಿಯಾಗಿದೆ. 2017ರಲ್ಲಿ ಅಮಿತ್ ಗುಪ್ತಾ, ಆರ್‌.ಕೆ.ಮಿಶ್ರಾ, ಹೇಮಂತ್ ಗುಪ್ತಾ ಹಾಗೂ ನವೀನ್ ದಚೂರಿ ಎಂಬುವವರು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಪ್ರದಾನ ಕಚೇರಿಯನ್ನು ಹೊಂದಿದ್ದು, ದೆಹಲಿ, ಗುರುಗ್ರಾಮ್, ಮುಂಬೈ, ಪುಣೆ ಮತ್ತು ಭುವನೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬರೋಬ್ಬರಿ 18,000 ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದು, 2.5 ಲಕ್ಷ ಗ್ರಾಹಕರಿದ್ದಾರೆ.

ಓಡಿಸುವಾಗ ಹೆಲ್ಮೆಟ್‌– ಲೈಸೆನ್ಸ್‌ ಅಗತ್ಯವಿಲ್ಲ:

ಮಿರಾಕಲ್ ಜಿಆರ್‌ ಗರಿಷ್ಠ 25 km/h ಟಾಪ್ ಸ್ಪೀಡ್ ಓಡಿಸಬಹುದಾದ ಈ ಸ್ಕೂಟರ್‌ನಲ್ಲಿ 15 ಕೆಜಿವರೆಗಿನ ತೂಕದ ವಸ್ತುಗಳನ್ನು ಸಾಗಿಸಬಹುದಾಗಿದೆ. ಈ ಸ್ಕೂಟರ್ ಗಳಲ್ಲಿ ಸಂಚರಿಸುವಾಗ ಯಾವುದೇ ಹೈಲ್ಮೆಟ್ ಹಾಗೂ ಪರವಾನಗಿಯ ಅಗತ್ಯವಿಲ್ಲ. ಹೊಚ್ಚ ಹೊಸ ಮಿರಾಕಲ್ ಜಿಆರ್‌ ಹಾಗೂ ಡಿಎಕ್ಸ್ ಜಿಆರ್‌ ಸ್ಕೂಟರ್ ಗಳು ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಸ್ಮಾರ್ಟ್ ಡಾಕ್‌ಲೆಸ್ ಇವಿ ತಂತ್ರಜ್ಞಾನವನ್ನು ಪಡೆದುಕೊಂಡಿವೆ ಎಂದು ಹೇಳಬಹುದು.

ಯುಲು ಸ್ಕೂಟರ್ ಬಳಕೆಗೆ ಬುಕ್‌ ಮಾಡುವುದು ಹೇಗೆ?

ಮೊದಲಿಗೆ ಯುಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ. ಬಳಿಕ, ಸ್ಕೂಟರ್ ಬುಕ್ ಮಾಡಿರಿ. ಸಮೀಪ ಯುಲು ಸ್ಟೇಷನ್ ಗೆ ತೆರಳಿ.. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಲು ಸ್ಕೂಟರ್ ಬಳಕೆ ಮಾಡಬಹುದು. ಕೆಲಸ ಮುಗಿದ ಮೇಲೆ ಅಲ್ಲೇ ಹತ್ತಿರದ ನೋಂದಾಯಿತ ಯುಲು ಸ್ಟೇಷನ್ ನಲ್ಲಿ ಸ್ಕೂಟರ್ ಬಿಟ್ಟು ತೆರಳಬಹುದು. ಇದರಿಂದ ಬೆಂಗಳೂರು ಸೇರಿದಂತೆ ದೊಡ್ಡ ಮಹಾನಗರಗಳ ಜನರಿಗೆ ಅನುಕೂಲವಾಗಿದೆ.

‘ಯುಮಾ ಎನರ್ಜಿ’ ಬೆಂಗಳೂರು, ಮುಂಬೈ ಮತ್ತು ದೆಹಲಿಯಾದ್ಯಂತ ಸುಮಾರು 100 ಸೆಂಟರ್ ಗಳನ್ನು ಹೊಂದಿದ್ದು, 2024ರ ವೇಳೆಗೆ ಆ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಅವರು, ‘ಮಾರ್ಚ್ ಮೊದಲ ವಾರದಲ್ಲಿ ಸ್ಕೂಟರ್‌ಗಳು ಸಾರ್ವಜನಿಕರ ಬಳಕೆಗೆ ಲಭ್ಯವಿರುತ್ತವೆ. ನಾವು 2023ರ ಅಂತ್ಯದೊಳಗೆ 1 ಲಕ್ಷ ವಾಹನಗಳನ್ನು ನಮ್ಮ ಗ್ರಾಹರಿಗೆ ನೀಡಲು ಯೋಜಿಸಿದ್ದೇವೆ. ಅವುಗಳಲ್ಲಿ ಸರಿ ಸುಮಾರು 50 ಸಾವಿರದಷ್ಟು ಮಿರಾಕಲ್ ಜಿಆರ್ ಮತ್ತು ಡಿಎಕ್ಸ್ ಜಿಆರ್ ಸ್ಕೂಟರ್ ಇರಲಿವೆ’ ಎಂದು ಹೇಳಿದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *