
ನ್ಯಾನೋಗಿಂತ ಸಣ್ಣ ಕಾರಾಗಿ ಮಾರ್ಪಾಡದ ಟಾಟಾ ಇಂಡಿಕಾ: ಮೇಕಿಂಗ್ ವಿಡಿಯೋಗೆ ಮನಸೋತ ಗ್ರಾಹಕರು
- ಆಟೋ ನ್ಯೂಸ್
- March 7, 2023
- No Comment
- 73
ನ್ಯೂಸ್‌ಆ್ಯರೋ: 5 ಆಸನಗಳ ಟಾಟಾ ಇಂಡಿಕಾ ಕಾರನ್ನು ಮಾರ್ಪಾಡು ಮಾಡಿ ವಿಶ್ವದ ಅತಿ ಚಿಕ್ಕ ಕಾರನ್ನಾಗಿ ಮಾಡಲಾಗಿದ್ದು, ಮೇಕಿಂಗ್ ಆಫ್ ಕಾರಿನ ವಿಡಿಯೋ ನೋಡಿದವರು ಶಾಕ್ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಎರಡು ಬಾಗಿಲಿನ ಟಾಟಾ ಇಂಡಿಕಾದ ವಿಡಿಯೋವನ್ನು ವಾಸಿಂ ಕ್ರಿಯೇಷನ್ಸ್ ಹೆಸರಿನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕಾರಿನ ಸಂಪೂರ್ಣ ಮಾರ್ಪಾಡು ಪ್ರಕ್ರಿಯೆಯನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಆರಂಭದಲ್ಲಿ ಈ ಕಾರು 5 ಆಸನಗಳ ಟಾಟಾ ಇಂಡಿಕಾ ಆಗಿತ್ತು. ನಂತರ, ಕಾರನ್ನು ಕತ್ತರಿಸಿ ಬೆಸುಗೆ ಹಾಕಲಾಗುತ್ತದೆ. ಮಾರ್ಪಡಿಸಿದ ನಂತರ ಕಾರಿನ ಉದ್ದವು 8 ಅಡಿಗಳಷ್ಟಾಗಿದೆ. ಅಂದರೆ ಮೂಲ ಗ್ರಾತಕ್ಕಿಂತ 3.5 ಅಡಿಯಷ್ಟು ಈ ಕಾರು ಚಿಕ್ಕದಾಗಿದೆ.
ಹಿಂಬದಿಯ ಬಾಗಿಲನ್ನು ತೆಗೆದು ಕಾರಿನ ಬಿ ಪಿಲ್ಲರ್‌ಗೆ ಹಿಂಬದಿಯ ಭಾಗವನ್ನು ವೆಲ್ಡ್ ಮಾಡಿ ಕಾರನ್ನು ಚಿಕ್ಕದಾಗಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಶೇಷವೆಂದರೆ ಬಂಪರ್‌ಗಳನ್ನು ಬದಲಾಯಿಸದೆ, ದುರಸ್ತಿಗೊಳಿಸಿ ಮರು ಅಳವಡಿಸಲಾಗಿದೆ. ನಂತರ ಕಾರನ್ನು ಸಿದ್ಧಪಡಿಸಿದ ಬಾಡಿವರ್ಕ್‌ನೊಂದಿಗೆ ತೋರಿಸಲಾಗುತ್ತದೆ. ಕಾರ್ ಸೈಡ್ ಫ್ಲೇರ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಿಗೆ ಮ್ಯಾಟ್ ಬ್ಲಾಕ್ ಬಣ್ಣವನ್ನು ನೀಡಲಾಗಿದೆ.
ಮುಂಭಾಗದಲ್ಲಿರುವ ಎರಡೂ ಹೆಡ್‌ಲೈಟ್‌ಗಳು ಹೊಚ್ಚ ಹೊಸದಾಗಿವೆ. ಸೈಡ್ ಪ್ರೊಫೈಲ್‌ಗೆ ಹೊಸ ವ್ಹೀಲ್ ಕವರ್‌ಗಳನ್ನು ಸೇರಿಸಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ಸಂಯೋಜಿಸಿ ಮಾಡಿದ ಕಸ್ಟಮ್ ಬಾಗಿಲನ್ನು ಸಹ ವೀಡಿಯೊದಲ್ಲಿ ಕಾಣಬಹುದು. ಕಾರಿನ ಡ್ಯಾಶ್‌ಬೋರ್ಡ್‌ಗೆ ಬಾಹ್ಯ ಥೀಮ್‌ಗೆ ಹೊಂದಿಕೆಯಾಗುವಂತೆ ಕಪ್ಪು ಮತ್ತು ಸಿಲ್ವರ್ ಕಲರ್ ನೀಡಲಾಗಿದೆ.