ಸ್ಟಾರ್​ ನಟನೊಂದಿಗೆ 22ನೇ ವಯಸ್ಸಿನಲ್ಲಿ ಮೊದಲ ಕಿಸ್‌ ಮಾಡಿದ್ದರಂತೆ ಶಿಲ್ಪಾ ಶೆಟ್ಟಿ – ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದು ಯಾರ ಜೊತೆ ಗೊತ್ತೇ?

ಸ್ಟಾರ್​ ನಟನೊಂದಿಗೆ 22ನೇ ವಯಸ್ಸಿನಲ್ಲಿ ಮೊದಲ ಕಿಸ್‌ ಮಾಡಿದ್ದರಂತೆ ಶಿಲ್ಪಾ ಶೆಟ್ಟಿ – ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದು ಯಾರ ಜೊತೆ ಗೊತ್ತೇ?

ನ್ಯೂಸ್ ಆ್ಯರೋ : ಫಿಟ್‌ನೆಸ್ ಹಾಗೂ ತಮ್ಮ ನಟನೆಯಿಂದಲೇ ಹೆಸರುವಾಸಿಯಾಗಿರುವ ನಟಿಯರ ಪೈಕಿ ಮೊದಲಿಗೆ ಕೇಳಿ ಬರುವ ಹೆಸರು ಎಂದರೆ ಅದು ಶಿಲ್ಪಾ ಶೆಟ್ಟಿ(Shilpa Shetty) ಅವರದ್ದು, ಸ್ಯಾಂಡಲ್‌ವುಡ್, ಬಾಲಿವುಡ್(Bollywood) ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಶಿಲ್ಪಾ ಶೆಟ್ಟಿ ಈಗ ವಿಚಾರ ಒಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನಲ್ಲಿ ಕನ್ಯತವನ್ನು ಕಳೆದುಕೊಂಡಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಲ್ಲದೇ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಅವರೊಂದಿಗೆ ಮಲಗಿದೆ ಎಂದು ಸೆನ್ಸೆಷನಲ್ ಕಾಮೆಂಟ್ ಮಾಡಿದ್ದರು. ಇದೀಗ ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಿತ್ರರಂಗ ಪ್ರವೇಶಿಸುವ ಮುನ್ನ ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಗೆ ಕಿಸ್ ಮಾಡಲಾಗಿದೆ ಎಂಬ ಸುದ್ದಿ ಇತ್ತು. ಈ ಸುಂದರಿಯೊಂದಿಗೆ ಡೇಟ್ ಮಾಡಿದ ಮೊದಲ ನಟ ಅಕ್ಷಯ್ ಕುಮಾರ್. ಅಲ್ಲಿಯವರೆಗೆ ನಟಿ ಯಾರೊಂದಿಗೂ ಡೇಟ್ ಮಾಡಿರಲಿಲ್ಲವಂತೆ. ಈತನಿಗೆ ತಾನು ಕನ್ಯತ್ವ ಕಳೆದುಕೊಂಡೆ ಎಂದು ನಟಿ ಪರೋಕ್ಷವಾಗಿ ಕಾರ್ಯಕ್ರಮ ಒಂದರಲ್ಲಿ ಬಹಿರಂಗಪಡಿಸಿದ್ದರು.

ಆರಂಭದ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು. ಇದಕ್ಕಿಂತ ಮೊದಲು ನಟಿ ಯಾವುದೇ ನಟನೊಂದಿಗೆ ಡೇಟಿಂಗ್ ಮಾಡಿರಲಿಲ್ಲ. ಆ ಸಮಯದಲ್ಲಿ ಅವರಿಬ್ಬರ ಡೇಟಿಂಗ್ ಸುದ್ದಿ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿರಲಿಲ್ಲ.

22 ನೇ ವಯಸ್ಸಿನಲ್ಲಿ ಅಮೆರಿಕನ್ ಶೋ ಬಿಗ್ ಬ್ರದರ್‌ನಲ್ಲಿ ಭಾಗವಹಿಸಿದಾಗ ಮದುವೆಗೆ ಮೊದಲು ತನ್ನ ಕನ್ಯತ್ವವನ್ನು ಕಳೆದುಕೊಂಡಿರುವುದನ್ನು ಖಚಿತಪಡಿಸಿದ್ದರು. ಸಹ-ಸ್ಪರ್ಧಿಯೊಬ್ಬರು ಶಿಲ್ಪಾ ಶೆಟ್ಟಿ ಕನ್ಯತ್ವವನ್ನು ಕಳೆದುಕೊಂಡಿರುವ ವಯಸ್ಸಿನ ಬಗ್ಗೆ ಕೇಳಿದರು. ನಟಿ ಮುಗುಳ್ನಕ್ಕು ಅದು ಬಾಲಿವುಡ್‌ನ ಖಿಲಾಡಿ ಕುಮಾರ್, ಅಕ್ಷಯ್ ಕುಮಾರ್ ಅವರೊಂದಿಗಿನ ಲವ್‌ಗಾಗಿ ಸುದ್ದಿ ಮಾಡುತ್ತಿದ್ದ ವಯಸ್ಸು ಎಂದು ಸೂಚ್ಯವಾಗಿ ಹೇಳಿದ್ದರು.

ಇನ್ನು ಒಂದು ಕಾಲದಲ್ಲಿ ಬಾಲಿವುಡ್‌ ಸೂಪರ್‌ಸ್ಟಾರ್‌, ಅಕ್ಷಯ್ ಕುಮಾರ್ ಅವರನ್ನು ಲೇಡೀಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು .ಸಾಲು ಸಾಲು ಆಫೇರ್‌ಗಳು ಮತ್ತು ಸಹ-ನಟರೊಂದಿಗಿನ ಅವರ ಸಂಬಂಧಗಳು ಇದಕ್ಕೆ ಕಾರಣವಾಗಿದೆ. 90 ರ ದಶಕದ ಆರಂಭದಲ್ಲಿ, ನಟಿ ಟ್ವಿಂಕಲ್ ಖನ್ನಾ (Twinkle Khanna) ಳನ್ನುಮದುವೆಯಾದ ನಂತರವೂ ಅಕ್ಷಯ್ ರವೀನಾ ಟಂಡನ್, ಪೂಜಾ ಬಾತ್ರಾ ಜೊತೆ ಡೇಟಿಂಗ್ (Dating) ಮಾಡಿದ್ದರಂತೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *