ಸಂಜೀವಿನಿಯಾಗಿದ್ದ ಕೋವಿಡ್ ವ್ಯಾಕ್ಸಿನ್ ನಿಂದ ವಿಶ್ವಾದ್ಯಂತ ಅಡ್ಡ ಪರಿಣಾಮ ಹಿನ್ನೆಲೆ – ಕೊರೊನಾ ಲಸಿಕೆಯನ್ನೇ ಹಿಂಪಡೆದ ಅಸ್ಟ್ರಾಜೆನೆಕಾ

ಸಂಜೀವಿನಿಯಾಗಿದ್ದ ಕೋವಿಡ್ ವ್ಯಾಕ್ಸಿನ್ ನಿಂದ ವಿಶ್ವಾದ್ಯಂತ ಅಡ್ಡ ಪರಿಣಾಮ ಹಿನ್ನೆಲೆ – ಕೊರೊನಾ ಲಸಿಕೆಯನ್ನೇ ಹಿಂಪಡೆದ ಅಸ್ಟ್ರಾಜೆನೆಕಾ

ನ್ಯೂಸ್ ಆ್ಯರೋ : 2021ರಲ್ಲಿ ಕೋವಿಡ್ (Covid) ಜಗತ್ತನ್ನು ಆವರಿಸಿಕೊಂಡಾಗ ಎಲ್ಲಾ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ಜೀವರಕ್ಷಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ತ್ವರಿತವಾಗಿ ಬಿಡುಗಡೆ ಮಾಡಲು ಹಗಲಿರುಳು ಶ್ರಮಿಸುವ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದವು.

ಈ ಲಸಿಕೆಗಳಲ್ಲಿ ಮೊದಲನೆಯದು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ನ ಕೋವಿಡ್ ಲಸಿಕೆ. ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಿಂದ ಇವುಗಳನ್ನು ನೀಡಲಾಯಿತು. ಆದರೆ ಸ್ವಲ್ಪ ದಿನದ ಬಳಿಕ ಈ ಲಸಿಕೆಗಳ ವಿರುದ್ಧ ಅಪಶೃತಿ ಕೇಳಿಬರಲು ಶುರುವಾಯಿತು. ಆದರೆ ಅದಾಗಲೇ ಪ್ರಪಂಚದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.

ಆದರೀಗ ಕೋವಿಶೀಲ್ಡ್‌ ಲಸಿಕೆ ಬಲು ಅಪರೂಪವಾಗಿ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿರುವ ಬ್ರಿಟೀಷ್‌ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಈಗ ಕೋವಿಶೀಲ್ಡ್​ ಲಸಿಕೆ ತಯಾರಕಾ ಕಂಪನಿ ಅಸ್ಟ್ರಾಜೆನೆಕಾ(Astrazeneca) ಇದೀಗ ಪ್ರಪಂಚದಾದ್ಯಂತ ಔಷಧ ಮಾರುಕಟ್ಟೆಗಳಿಂದ ಲಸಿಕೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದೆ.

ಹೌದು ಕಳೆದ ಒಂದು ತಿಂಗಳಿಂದ ಕೋವಿಶೀಲ್ಡ್(Covishield)​ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕೋವಿಡ್ ಬಳಿಕ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅಲ್ಲದೇ ಇದಕ್ಕೆಲ್ಲ ಲಸಿಕೆಯೇ ಮೂಲ ಕಾರಣ ಅಂತ ಹೇಳಲಾಗುತ್ತಿದ್ದು, ಮೊದಲೆಲ್ಲಾ ಹೃದಯಾಘಾತ 45 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿತ್ತು, ಆದರೆ ಇತ್ತೀಚಿನ 2-3 ವರ್ಷಗಳಲ್ಲಿ ಯುವಕರಲ್ಲಿ, ಹದಿಹರೆಯದ ಪ್ರಾಯದವರಲ್ಲಿ ಹೃದಯಾಘಾತ ಸಮಸ್ಯೆ ಕಂಡು ಬರುತ್ತಿದೆ, ಆ ಮಕ್ಕಳಿಗೇನು ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದು ಇಲ್ಲ ಎಂದ ಎಷ್ಟೋ ಪೋಷಕರು ಹೇಳಿದ್ದಾರೆ. ಅಷ್ಟೋ ಆರೋಗ್ಯವಾಗಿದ್ದ ಯುವಕ-ಯುವತಿಯರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ಕೊರೊನಾ ಲಸಿಕೆ ಕಾರಣವಿರಬಹುದೇ ಎಂಬ ಸಂಶಯ ಜನರನ್ನು ಕಾಡುತ್ತಲೇ ಇದೆ.

ಇಷ್ಟೆಲ್ಲಾ ಆದ ಬಳಿಕ ಕಂಪನಿಯು ಈ ನಿರ್ಧಾರ ಮಾಡಿದೆ ಎಂದು ರಾಯ್ಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಸಾಂಕ್ರಾಮಿಕ ರೋಗಗಳ ಬಳಿಕ ಬೇಡಿಕೆಯು ಕಡಿಮೆಯಾಗಿದೆ. ಇದಲ್ಲದೆ ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ನಿಲ್ಲಿಸಲಾಗಿದೆ.

ಬ್ರಿಟಿಷ್ ಹೈಕೋರ್ಟ್​ನಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿಯು ತನ್ನ ಕೊರೊನಾ ಲಸಿಕೆ ಥ್ರಂಬೋಸಿಸ್, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್​ಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು, ಇದು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *