ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ಹಿರೋಯಿನ್ ದಾಂಪತ್ಯ ಬದುಕು ಅಂತ್ಯ – ಮದುವೆಯಾದ ನಾಲ್ಕೇ ವರ್ಷಕ್ಕೆ ‘ಮೊದಲಾ ಸಲ’ ಬೆಡಗಿಯ ಡೈವೋರ್ಸ್..!!

ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ಹಿರೋಯಿನ್ ದಾಂಪತ್ಯ ಬದುಕು ಅಂತ್ಯ – ಮದುವೆಯಾದ ನಾಲ್ಕೇ ವರ್ಷಕ್ಕೆ ‘ಮೊದಲಾ ಸಲ’ ಬೆಡಗಿಯ ಡೈವೋರ್ಸ್..!!

ನ್ಯೂಸ್ ಆ್ಯರೋ : ಕೆಲದಿನಗಳಿಂದ ‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಶೈಲೂ’ ಚಿತ್ರದಲ್ಲಿ ನಟಿಸಿದ್ದ ನಟಿ ಭಾಮಾ ( Bhama ) ವೈಯಕ್ತಿಕ ಜೀವನದ ಬಗ್ಗೆಯೇ ಸಾಕಷ್ಟು ಚರ್ಚೆ ನಡೆದಿತ್ತು. ಅಲ್ಲದೇ ಭಾಮಾ ಅವರ ಸೋಶಿಯಲ್ ಮೀಡಿಯಾ ಫೋಟೋಗಳು ಡಿಲಿಟ್ ಆಗಿರೋದರಿಂದಲೇ ಅನೇಕ ಅನುಮಾನ ಶುರುವಾಗಿತ್ತು.

ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಭಾಮಾ ಅವರು ಮದುವೆ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಇತ್ತೀಚೆಗೆ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲಿಟ್ ಮಾಡಿದ್ದರು. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿತ್ತು.

ಇದೀಗ ಈ ಗುಸು ಗುಸುಗೆ ಫುಲಿಸ್ಟಾಪ್ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಾವು ಗಂಡನಿಂದ ದೂರಾಗಿ ಡಿವೋರ್ಸ್ ಆಗಿರುವುದನ್ನು ಖಚಿತಪಡಿಸಿದ್ದಾರೆ.

ಹೌದು ಭಾಮಾ ಅವರು ತಮ್ಮ ಗಂಡನಿಂದ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆರಂಭದಲ್ಲಿ ಇದೆಲ್ಲ ಕೇವಲ ವದಂತಿ ಮಾತ್ರ ಎಂದು ಹೇಳಲಾಗಿತ್ತು. ಆದರೆ, ಕೊನೆಗೂ ಸ್ವತಃ ಭಾಮಾ ಅವರೇ ಡಿವೋರ್ಸ್ ವಿಚಾರವನ್ನು ಖಚಿತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್ ಖಚಿತಪಡಿಸಿದ್ದಾರೆ. ನಾನೀಗ ಸಿಂಗಲ್ ಮದರ್ ಎಂದು ಹೇಳಿಕೊಂಡಿದ್ದಾರೆ. ನಾನು ಎಷ್ಟು ಬಲಶಾಲಿ ಎಂಬುದು ನನಗೇ ತಿಳಿದಿರಲಿಲ್ಲ. ನಾನು ಒಂಟಿ ತಾಯಿಯಾಗಿ ಇರುವವಸ್ಥೆಗೂ ಬಲಶಾಲಿಯಾಗಿರುವುದು ನನ್ನ ಏಕೈಕ ಆಯ್ಕೆಯಾಗಿದೆ. ಇನ್ಮುಂದ ನಾನು ಮತ್ತು ನನ್ನ ಮಗಳು ಮಾತ್ರ ಎಂದು ಭಾಮಾ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡು ಈ ಮೇಲಿನಂತೆ ಬರೆದುಕೊಂಡಿದ್ದಾರೆ.

ಇನ್ನು 2020ರಲ್ಲಿ ಅರುಣ್‌ ಎಂಬ ಉದ್ಯಮಿಯನ್ನು ಕೊಚ್ಚಿಯಲ್ಲಿ ಭಾಮಾ ಅವರು ಮದುವೆಯಾಗಿದ್ದರು. ಈ ಮದುವೆಗೆ ಅನೇಕರು ಭಾಗಿಯಾಗಿದ್ದರು. ಮಲಯಾಳಂ ಚಿತ್ರರಂಗದ ಗಣ್ಯರು ಕೂಡ ಈ ಮದುವೆಗೆ ಸಾಕ್ಷಿಯಾಗಿದ್ದರು. ಭಾಮಾ ಹಾಗೂ ಅರುಣ್‌ಗೆ 2 ವರ್ಷದ ಮಗಳಿದ್ದಾಳೆ.

2018ರಲ್ಲಿ ಭಾಮಾ ಅವರು ‘Khilafath’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ನಂತರ ಅವರು ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಸದ್ಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಭಾಮಾ ಮತ್ತೆ ಚಿತ್ರರಂಗಕ್ಕೆ ಕಾಲಿಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ಭಾಮಾ ನಟನೆಯ ಸಿನಿಮಾಗಳು
ಕನ್ನಡ, ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಭಾಮಾ ಅವರು ‘ಮೊದಲಸಲ’, ‘ಶೈಲೂ’, ‘ಒಂದು ಕ್ಷಣದಲ್ಲಿ’, ‘ಆಟೋರಾಜ’, ‘Husbands in Goa’, ‘ಅಪ್ಪಯ್ಯ’, ‘ಬರ್ಫಿ’, ‘101 Weddings’, ‘ಡಿ ಕಂಪೆನಿ’, ‘Naku Penta Naku Taka’, ‘Maalgudi Days’, ‘ಅಂಬರ’, ‘ಅರ್ಜುನ’, ‘ರಾಗ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *