
ಎಲ್ಲಾ ಮೊಬೈಲ್ ನಂಬರ್ 6,7,8,9 ರಿಂದ ಆರಂಭವಾಗೋದು ಯಾಕೆ? – ಇದರ ಹಿಂದಿರುವ ಗುಟ್ಟೇನು ಗೊತ್ತಾ?
- ಟೆಕ್ ನ್ಯೂಸ್
- November 8, 2023
- No Comment
- 88
ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಮೊಬೈಲ್ ಬಳಸುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗಿದೆ. ಇನ್ನೂ ಮೊಬೈಲ್ ಖರೀದಿ ಮಾಡಿದರೆ ಪ್ರಮುಖವಾಗಿ ಬೇಕಾಗಿರುವುದು ಸಿಮ್ ಕಾರ್ಡ್. ಹೀಗಾಗಿ ಮೊಬೈಲ್ಗೆ ಸಿಮ್ ಅನಿವಾರ್ಯವಾಗಿದೆ.
ನಮ್ಮ ನೆಟ್‌ವರ್ಕ್ ಹಾಗೂ ಗ್ರಾಹಕರಿಗೆ ನೀಡುವ ಕೊಡುಗೆಗಳ ಅನುಗುಣವಾಗಿ ಸಿಮ್ ಅನ್ನು ಖರೀದಿಸುತ್ತೇವೆ. ಆದರೆ ನೀವು ಬಳಕೆ ಮಾಡುವ ಮೊಬೈಲ್ ಸಿಮ್ಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯವಾಗಿ ಎಲ್ಲರ ಮೊಬೈಲ್ ಸಂಖ್ಯೆಯೂ 6,7, 8 ಅಥವಾ 9 ಅಂಕೆಯಿಂದಲೇ ಆರಂಭವಾಗಿರುತ್ತದೆ. ಈ ಅಂಕೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ವೈಯಕ್ತಿಕ ಬಳಕೆಗಾಗಿ ಬಳಸುವ ಸಿಮ್ಗಳು ಯಾವುದೇ ಕಂಪನಿಗೆ ಸೇರಿದ್ದರೂ ಸಹ ಅವುಗಳ ನಂಬರ್ 6,7,8 ಅಥವಾ 9 ರಿಂದಲೇ ಆರಂಭಗೊಳ್ಳುತ್ತದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಅದು ಏನೆಂದರೆ 1 ಎನ್ನುವುದು ಒಂದು ವಿಶೇಷ ಸಂಖ್ಯೆಯಾಗಿದೆ. ಈ ನಂಬರ್ನ್ನು ಪೊಲೀಸ್, ಅಗ್ನಿಶಾಮಕ ದಳ ಹಾಗೂ ಆಂಬ್ಯೂಲೆನ್ಸ್ ಸೇವೆ ಸೇರಿದಂತೆ ವಿವಿಧ ತುರ್ತು ಸೇವೆಗಳ ಸಂಖ್ಯೆಯ ಆರಂಭಿಕ ಅಂಖ್ಯೆಯಾಗಿ ಬಳಕೆ ಮಾಡಲಾಗುತ್ತದೆ.
ಅದೇ ರೀತಿ 2,3,4 ಹಾಗೂ ಐದು ಕೂಡ ಸಹಾಯವಾಣಿ ಸಂಖ್ಯೆಗಳ ಆರಂಭಿಕ ನಂಬರ್ ಆಗಿ ಬಳಕೆಯಾಗುತ್ತದೆ. ಹೀಗಾಗಿ ಸಾಮಾನ್ಯರಿಗೆ ನೀಡುವ ಮೊಬೈಲ್ ಸಿಮ್ಗಳು 1ರಿಂದ ಐದರವರೆಗಿನ ಆರಂಭಿಕ ಸಂಖ್ಯೆಗಳನ್ನು ಹೊಂದಿರುವುದಿಲ್ಲ. 0 ಕೂಡ ಯಾರ ಮೊಬೈಲ್ ನಂಬರ್ ನ ಆರಂಭಿಕ ಅಂಕೆಯ ಸ್ಥಾನವನ್ನು ಪಡೆಯುವುದಿಲ್ಲ. ಇದಕ್ಕೂ ಕೂಡ ಕಾರಣವಿದೆ.
ಏಕೆಂದರೆ ಸೊನ್ನೆಯನ್ನು ಅನೇಕ ದೂರವಾಣಿ ಸಂಖ್ಯೆಗಳಿಗೆ ಎಸ್ಟಿಡಿ ಕೋಡ್ ಆಗಿ ಬಳಕೆ ಮಾಡಲಾಗುತ್ತದೆ. ಭಾರತ ದೇಶದ ಕೋಡ್ +91 ಆಗಿದ್ದು ಈ ಆರಂಭಿಕ ಸಂಖ್ಯೆಯಿಂದ ಬರುವ ಯಾವುದೇ ಕರೆಯು ಭಾರತದಲ್ಲಿ ಖರೀದಿಸಿದ ಸಿಮ್ನಿಂದಲೇ ಆಗಿರುತ್ತದೆ ಎಂದು ನೀವು ತಿಳಿಯಬಹುದಾಗಿದೆ.
ಮೊಬೈಲ್ ಸಿಮ್ಗಳ ಆರಂಭಿಕ ಸಂಖ್ಯೆ ಆದರೆ ನಂತರದಿಂದಲೇ ಆರಂಭವಾಗಬೇಕು ಅಂತಾ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಆದರೆ ಇದುವರೆಗೂ ಆ ನಿಯಮನೇ ನಡೆದುಕೊಂಡು ಬಂದಿದ್ದುಸ, ಮುಂದಿನ ದಿನಗಳಲ್ಲಿ ಇದು ಬದಲಾವಣೆಯಾಗಬಹುದು.