
ಎರಡು ಆಕರ್ಷಕ ಬಣ್ಣಗಳಲ್ಲಿ ಬಂತು ನೋಕಿಯಾ 2660 ಫ್ಲಿಪ್ ಫೀಚರ್ ಫೋನ್ – ಇದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು ಗೊತ್ತಾ?
- ಟೆಕ್ ನ್ಯೂಸ್
- August 25, 2023
- No Comment
- 95
ನ್ಯೂಸ್ ಆ್ಯರೋ : ಒಂದು ಕಾಲದಲ್ಲಿ ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ಮಾಡಿದ್ದ ನೋಕಿಯಾ ಸ್ಮಾರ್ಟ್ ಫೋನ್ ಯುಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪೈಪೋಟಿ ನೀಡಲಾಗದೆ ಹಿಂದುಳಿದಿತ್ತು. ಅಲ್ಲಲ್ಲಿ ಕೆಲವು ಮಾಡೆಲ್ ಗಳ ಮೂಲಕ ತನ್ನ ಇರುವಿಕೆಯನ್ನು ಸಾರುತ್ತಿತ್ತು. ಇದೀಗ ಮತ್ತೆ ಛಾಪು ಮೂಡಿಸಲು ಮುಂದಾಗಿದೆ.
ಯಾವ ಮಾಡೆಲ್?
ನೋಕಿಯಾ ಇದೀಗ 2660 ಫ್ಲಿಪ್ ಫೋನ್ ಅನ್ನು ಇನ್ನೆರಡು ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸಿದೆ. ಪಾಪ್ ಪಿಂಕ್ ಮತ್ತು ಲಷ್ ಗ್ರೀನ್ ಗಮನ ಸೆಳೆಯುವಂತಿದೆ.
ಪ್ರಸ್ತುತ ಮಡಚುವ ಫೀಚರ್ ಫೋನ್ ಗಳಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ 2007ರಲ್ಲಿ ಹೊರ ತಂದ 2660 ಮಾದರಿಯನ್ನು ಇನ್ನಷ್ಟು ಆಕರ್ಷಕವಾಗಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. 1998ರಲ್ಲಿ ನೋಕಿಯಾದ ಮೊದಲ ಫ್ಲಿಪ್ ಫೋನ್ ಬಿಡುಗಡೆಯಾಗಿತ್ತು.
ವೈಶಿಷ್ಟ್ಯ
ನೋಕಿಯಾ 2660 ಮಾದರಿ ಆಕರ್ಷಕ ವಿನ್ಯಾಸ, 2.8 ಇಂಚಿನ ಡಿಸ್ ಪ್ಲೇ, 1450 mAh ಬ್ಯಾಟರಿ, ರಿಯರ್ ಕ್ಯಾಮರಾ, ಎಮರ್ಜೆನ್ಸಿ ಬಟನ್ ಸೌಲಭ್ಯ ಒಳಗೊಂಡಿದೆ. ಈ ಫೋನ್ ಅಮೇಜಾನ್ ಮತ್ತು ನೋಕಿಯಾ ವೆಬ್ ಸೈಟ್ ಗಳಲ್ಲಿ ಲಭ್ಯ.