
ವಿಚ್ಛೇದನದ ಬಳಿಕ ನಿರೂಪಕಿ ಜಾಹ್ನವಿ ಹೊಸ ಬದುಕು – ಸಿನಿಮಾದ ನಾಯಕಿಯಾಗಲಿದ್ದಾರೆ ಜಾಹ್ನವಿ, ಸಿನಿಮಾ ಯಾವುದು ಗೊತ್ತಾ…!?
- ಮನರಂಜನೆ
- August 25, 2023
- No Comment
- 94
ನ್ಯೂಸ್ ಆ್ಯರೋ : ಗಿಚ್ಚಿಗಿಲಿ ಶೋನ ರನ್ನರ್, ನ್ಯೂಸ್ ಆ್ಯಂಕರ್ ಜಾಹ್ನವಿ ಅವರು ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿಗೆ ನಟಿಯಾಗಿ ಅಭಿನಯಿಸುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಬಿಗ್‌ಬಾಸ್ ವಿಜೇತ, ರಾಕ್‌ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಹೊಸ ಸಿನಿಮಾ ನಿನ್ನೆ ಸೆಟ್ಟೇರಿದ್ದು, ಇದೀಗ ಚಿತ್ರತಂಡ ನಾಯಕಿಯನ್ನಾಗಿ ಜಾಹ್ನವಿ ಅವರನ್ನು ಪರಿಚಯಿಸಿದೆ.
ನ್ಯೂಸ್ ಆ್ಯಂಕರ್ ಆಗಿ ಸುದ್ದಿ ಮನೆಯಲ್ಲಿ ಸದ್ದು ಮಾಡಿದ್ದ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದ ಜಾಹ್ನವಿ ಈಗ ‘ಅಧಿಪತ್ರ’ ಸಿನಿಮಾದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಲಿದ್ದಾರೆ.


ಈ ಹಿಂದೆ ಪತಿಯಿಂದ ವಿಚ್ಛೇದನ ಪಡೆಯುವ ಮೂಲಕ ವೈಯಕ್ತಿಕ ಬದುಕಿನ ಸಂಬಂಧ ಸುದ್ದಿಯಾಗಿದ್ದರು. ಇದೀಗ ಕಲರ್ಸ್ ಕನ್ನಡದ ಮಜಾ ಕೆಫೆ ಎಂಬ ಶೋ ನಡೆಸಿಕೊಂಡು ಬರುತ್ತಿದ್ದಾರೆ.
ಅಧಿಪತ್ರ ಸಿನಿಮಾವನ್ನು ಚಯನ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ತಯಾರಾಗುತ್ತಿರುವ ‘ಅಧಿಪತ್ರ’ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ.