
ನಟಿ ಸಮಂತಾ ಧರಿಸಿದ ಈ ಡ್ರೆಸ್ ಎಷ್ಟೊಂದು ದುಬಾರಿ ಗೊತ್ತಾ? – ನ್ಯೂಯಾರ್ಕ್ ನ ಕಾರ್ಯಕ್ರಮದಲ್ಲಿ ಸಮಂತಾ ಧರಿಸಿದ ಚಿನ್ನದ ಬಟ್ಟೆಯ ಬೆಲೆ ಎಷ್ಟು?
- ಮನರಂಜನೆ
- August 25, 2023
- No Comment
- 50
ನ್ಯೂಸ್ ಆ್ಯರೋ : ಸಮಂತಾ ರುತ್ ಪ್ರಭು – ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ದಕ್ಷಿಣದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಮಂತಾ ಇಂದಿಗೂ ಬಹು ಬೇಡಿಕೆಯ ನಟಿ. ಚಿತ್ರಗಳಲ್ಲಿ ಮಿಂಚುವ ಜೊತೆಗೆ ಅವರು ತಮ್ಮ ಫಾಷನ್ ಸೆನ್ಸ್ ನಿಂದಲೂ ಗಮನ ಸೆಳೆಯುತ್ತಾರೆ. ಟ್ರಂಡ್ ಗೆ ತಕ್ಕಂತೆ ಕಾಣಿಸಿಕೊಳ್ಳುವ ಅವರು ಇದೀಗ ನ್ಯೂಯಾರ್ಕ್ ನಲ್ಲಿ ಕಾಣಿಸಿಕೊಂಡ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬ್ರೇಕ್ ತೆಗೆದುಕೊಂಡ ನಟಿ

ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ತೆಲುಗು ಚಿತ್ರವನ್ನು ಮುಗಿಸಿರುವ ಸಮಂತಾ ಅದರ ಪ್ರಮೋಷನ್ ನಲ್ಲಿಯೂ ಭಾಗಿಯಾಗಿ ಬಿಡುವು ಪಡೆದುಕೊಂಡು ನ್ಯೂಯಾರ್ಕ್ ಗೆ ತೆರಳಿದ್ದಾರೆ. ಅಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ಅವರು 41ನೇ ಇಂಡಿಯಾ ಡೇ ಪರೇಡ್ ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರದಲ್ಲಿ ಅವರು ಧರಿಸಿದ ಉಡುಪು ಅನೇಕರ ಗಮನ ಸೆಳೆದಿದೆ.
ರಿತು ಕುಮಾರ್ ಅವರ ಮಾಡರ್ನ್ ಟ್ರೆಡಿಷನಲ್ ಔಟ್ ಫಿಟ್ ಧರಿಸಿದ್ದ ಸಮಂತಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಗೋಲ್ಡ್ ವರ್ಕ್ ಇದ್ದ ಕಲರ್ ಫುಲ್ ಕಾರ್ಸೆಟ್ ನಲ್ಲಿ ಆರೆಂಜ್, ಮಿಂಟ್, ಮರೂನ್ ಬಣ್ಣ ಮಿಳಿತವಾಗಿತ್ತು. ಜೊತೆಗೆ ಹೈ ವೇಸ್ಟ್ ಪ್ಯಾಂಟ್ ಮತ್ತು ಜಾಕೆಟ್ ಧರಿಸಿದ್ದರು.

ಬೆಲೆ ಎಷ್ಟು?
ಸದ್ಯ ಈ ಉಡುಪಿನ ಬೆಲೆ ಕುರಿತು ಚರ್ಚೆ ಆರಂಭವಾಗಿದೆ. ಯಾಕೆಂದರೆ ಇದರ ಬೆಲೆ ಬರೋಬ್ಬರಿ 2.92 ಲಕ್ಷ ರೂ. ಎನ್ನಲಾಗಿದೆ. ಈ ಬೆಲೆಗೆ 1.5 ಲಕ್ಷ ರೂ. ಬೆಲೆಯ 2 ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸಬಹುದಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಹಲವರಂತೂ ಸಮಂತಾ ರಾಯಲ್ ಆಗಿ ಕಾಣಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಸಮಂತಾ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿರುವ ‘ಖುಷಿ’ ಚಿತ್ರ ಸೆಪ್ಟಂಬರ್ 1ರಂದು ತೆರೆ ಕಾಣಲಿದೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಟಾಲಿವುಡ್ ನಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಜೊತೆಗೆ ತಮಿಳು, ಕನ್ನಡ, ಮಲೆಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಲಿದೆ. ಮಾತ್ರವಲ್ಲ ಸಮಂತಾ ನಟಿಸಿರುವ ‘ಸಿಟಾಡೆಲ್’ ಹಿಂದಿ ವೆಬ್ ಸೀರಿಸ್ ಕೂಡಾ ತಯಾರಾಗಿದೆ.