ಗೂಗಲ್‌ನ ಮೊದಲ ಹೂಡಿಕೆದಾರ ಭಾರತೀಯ ಉದ್ಯಮಿ ಬಗ್ಗೆ ನಿಮಗೆ ಗೊತ್ತಾ? – ಅಮೆರಿಕನ್ ಬಿಲಿಯನೇರ್ ಕವಿತಾರ್ಕ್ ರಾಮ್ ಬಗ್ಗೆ ಮಾಹಿತಿ ಇಲ್ಲಿದೆ..

ಗೂಗಲ್‌ನ ಮೊದಲ ಹೂಡಿಕೆದಾರ ಭಾರತೀಯ ಉದ್ಯಮಿ ಬಗ್ಗೆ ನಿಮಗೆ ಗೊತ್ತಾ? – ಅಮೆರಿಕನ್ ಬಿಲಿಯನೇರ್ ಕವಿತಾರ್ಕ್ ರಾಮ್ ಬಗ್ಗೆ ಮಾಹಿತಿ ಇಲ್ಲಿದೆ..

ನ್ಯೂಸ್‌ ಆ್ಯರೋ : ಕವಿತಾರ್ಕ್ ರಾಮ್ ಶ್ರೀರಾಮ್ ಅವರು ಭಾರತೀಯ-ಅಮೇರಿಕನ್ ಬಿಲಿಯನೇರ್ ಉದ್ಯಮಿ ಮತ್ತು ಲೋಕೋಪಕಾರಿ. ಇವರು ಗೂಗಲ್‌ನ ಮೊದಲ ಹೂಡಿಕೆದಾರರಲ್ಲಿ ಒಬ್ಬರು. ಭಾರತೀಯರು ಹೆಮ್ಮೆ ಪಡುವ ವ್ಯಕ್ತಿಯಲ್ಲಿ ಇವರು ಒಬ್ಬರಾಗಿದ್ದು, ಆದರೆ ಇವರ ಪರಿಚಯ ಹೆಚ್ಚಿನವರಿಗಿಲ್ಲ.

ತಮ್ಮ ಜೀವನದ ಆರಂಭದಲ್ಲಿ ಕಷ್ಟಗಳ ಸರಮಾಲೆ ದುರಂತವನ್ನು ಕಂಡು ಬೆಳೆದ ಭಾರತೀಯ ಮೂಲದ ಬಿಲಿಯನೇರ್ ಕವಿತಾರ್ಕ್ ರಾಮ್ ಅವರ “ಜೀವನದ ಅಸಾಧಾರಣ ಯಶಸ್ಸಿನ ಕಥೆ” ಯಲ್ಲಿ ಅಮೇರಿಕನ್ ಟೆಕ್ ಟೈಕೂನ್‌ಗಳಾದ ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಗೂಗಲ್‌ನ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ನಂತವರು ಸಹನಟರಾಗಿದ್ದಾರೆ ಅಂದರೆ ಎಂತವರಿಗೂ ಅಶ್ಚರ್ಯವಾದಿತು.

ಸಣ್ಣ ಗ್ಯಾರೇಜ್‌ನಲ್ಲಿ ಸ್ಥಾಪಿಸಲಾದ ಆಗ ತಾನೇ ಹುಟ್ಟುತ್ತಿರುವ ಕಂಪನಿ ಮುಂದೆ ವಿಶ್ವಕ್ಕೆ ಪಸರಿಸಿಬಹುದೆಂಬುವುದನ್ನು ಕಂಡುಕೊಂಡ ದಾರ್ಶನಿಕರು ಆಗಿದ್ದಾರೆ ಕವಿತಾರ್ಕ್ ರಾಮ್ ಶ್ರೀರಾಮ್. ಮುಂದೆ ಇದೇ ಕಂಪನಿಯು ಗೂಗಲ್ ಎಂದು ಪ್ರಸಿದ್ಧವಾಯಿತು.

ಗೂಗಲ್‌ನ ಮೊದಲ ಹೂಡಿಕೆದಾರ ರಾಮ್ ಶ್ರೀರಾಮ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ತಮ್ಮ ಗ್ಯಾರೇಜ್ ಪ್ರಾರಂಭಕ್ಕಾಗಿ ಹಣಕ್ಕಾಗಿ ವೆಂಚರ್ ಕ್ಯಾಪಿಟಲಿಸ್ಟ್ ಕವಿತಾರ್ಕ್ ರಾಮ್ ಶ್ರೀರಾಮ್ ಅವರನ್ನು ಸಂಪರ್ಕಿಸಿದ್ದರು. ಆಗಿನ್ನು ಇಂಟರ್ನೆಟ್ ಯುಗ ಅಸ್ತಿತ್ವಕ್ಕೆ ಬಂದಿರಲಿಲ್ಲ ಮತ್ತು ಅವರ ಕಂಪನಿಯನ್ನು ‘ಗೂಗಲ್’ ಎಂದು ಕರೆದಿರಲಿಲ್ಲ. ರಾಮ್ ಅವರು ಈ ಇಬ್ಬರು ಹೊಸ ಮತ್ತು ಭರವಸೆಯ ಯುವಕರ ಯೋಚನೆಗಳನ್ನು ಕಂಡು ಅರ್ಧ ಮಿಲಿಯನ್ ಡಾಲರ್‌ಗಳ ಚೆಕ್ ಅನ್ನು ಹಸ್ತಾಂತರಿಸಿದ್ದರು. ಇಂದು ಗೂಗಲ್ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ.

ತಂದೆಯ ನಿಧನ ಬಳಿಕ ಕವಿತಾರ್ಕ್ ರಾಮ್ ಶ್ರೀರಾಮ್ ಅವರು ತುಂಬಾ ಹಿನ್ನಡೆಯನ್ನು ಅನುಭವಿಸಿದ್ದರು. ಅದಲ್ಲದೆ ಇವರ ಕುಟುಂಬಕ್ಕೆ ಆರ್ಥಿಕ ಹೊಡೆತ ನೀಡಿತ್ತು. ಇದು ಕವಿತಾರ್ಕ್ ಅವರು ಶಿಕ್ಷಣಕ್ಕೂ ಅಡ್ಡಿಯಾಯಿತು. ಎಲ್ಲ ಕಷ್ಟಗಳನ್ನು ಎದುರಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬಿಎಸ್ ಪದವಿಯನ್ನು ಗಳಿಸಿದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಂಬಿಎ ಓದುವ ಅವಕಾಶ ಬರುವ ಮೂಲಕ ಇವರ ಜೀವನದಲ್ಲಿ ಮೊದಲ ತಿರುವು ಬಂದಿತು.

ನಂತರ ಅವರು ಕಾರ್ಯನಿರ್ವಾಹಕರಾಗುವ ಮೂಲಕ ವೃತ್ತಿಜೀವನವನ್ನು ಆರಂಭಿಸಿದರು. ಇಂದು ಇ-ಕಾಮರ್ಸ್ ದೈತ್ಯವಾಗಿ ಬೆಳೆದಿರುವ ಅಮೆಜಾನ್ ಸಂಸ್ಥೆಯ ಆರಂಭಿಕ ಹಂತದಲ್ಲಿ ಜೆಫ್ ಬೆಜೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು.

ಶ್ರೀರಾಮ್ ಅವರ ನೇತೃತ್ವದಲ್ಲಿ ಆನ್‌ಲೈನ್ ಸಂಸ್ಥೆ ಜಂಗ್ಲೀ ಅನ್ನು 1998 ರಲ್ಲಿ ಅಮೆಜಾನ್ $185 ಮಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತು. ರಾಮ್ ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿ ಕಂಪನಿಯ ಉಪಾಧ್ಯಕ್ಷರಾಗಿದ್ದರು. 2000ರಲ್ಲಿಅವರ ಜೀವನದಲ್ಲಿ ಎರಡನೇ ತಿರುವು ಆಗಿತ್ತು. ಇದೇ ವರ್ಷ ಅವರು ತಮ್ಮ ವೆಂಚರ್ ಕ್ಯಾಪಿಟಲ್ (ಸಾಹಸೋದ್ಯಮ ಬಂಡವಾಳ) ಸಂಸ್ಥೆಯಾದ ” ಶೆರ್ಪಾಲೋ ವೆಂಚರ್ಸ್” ಅನ್ನು ಸ್ಥಾಪಿಸಿದರು. ಈ ಸಂಸ್ಥೆ ಮೂಲಕ ಇನ್ನು ಅಂಬೆಗಾಲಿಡುತ್ತಿರುವ ಕಲ್ಪನೆಗಳಲ್ಲಿರುವ ಸಂಭಾವ್ಯ ಉದ್ಯಮಕ್ಕೆ ಹೂಡಿಕೆಗಳನ್ನು ಮಾಡಲು ನಿರ್ಧರಿಸಿದರು.

ಶ್ರೀರಾಮ್ ಅವರು ಅರ್ಧ ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಆರಂಭದಲ್ಲಿ ಗೂಗಲ್ ಬೆಂಬಲ ನೀಡಿದರು. ಇದು ಇಂದು ಆಲ್ಫಾಬೆಟ್ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಶ್ರೀಮಂತ ಕಂಪೆನಿಯಾಗಿ ಬೆಳೆದು ನಿಂತಿದೆ.

ಶ್ರೀರಾಮ್ ಅವರ ನಿವ್ವಳ ಮೌಲ್ಯ 21,637 ಕೋಟಿ ರೂಪಾಯಿ ಆಗಿದೆ. ಗೂಗಲ್ ಮಾತ್ರವಲ್ಲದೇ ಇತರ ಪ್ರಮುಖ ಹೂಡಿಕೆಗಳನ್ನು ಪೇಪರ್‌ಲೆಸ್ ಪೋಸ್ಟ್, ಗಸ್ಟೋ ಮತ್ತು ಇನ್‌ಮೊಬಿಯಂತಹ ಕಂಪನಿಗಳಲ್ಲಿ ಮಾಡಿದ್ದಾರೆ. ಬಿಲಿಯನೇರ್ ಆಗಿರುವ ಶ್ರೀರಾಮ್ ಮತ್ತು ಅವರ ಪತ್ನಿ 2014 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ 61 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.

ಶ್ರೀರಾಮ್ ಅವರು ವಿಜಯ್ ಅವರನ್ನು ವಿವಾಹವಾದರು. ಈ ದಂಪತಿಗೆ ಜಾನ್ವಿ ಮತ್ತು ಕೇತಕಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *