ಒಂದೇ ತಿಂಗಳಿಗೆ ಬರೋ ಗ್ಯಾಸ್ ಎರಡು ತಿಂಗಳು ಬಳಸ್ಬೋದು – ಈ ಟ್ರಿಕ್ಸ್ ಫಾಲೋ ಮಾಡಿ

ಒಂದೇ ತಿಂಗಳಿಗೆ ಬರೋ ಗ್ಯಾಸ್ ಎರಡು ತಿಂಗಳು ಬಳಸ್ಬೋದು – ಈ ಟ್ರಿಕ್ಸ್ ಫಾಲೋ ಮಾಡಿ

ನ್ಯೂಸ್‌ ಆ್ಯರೋ : ಇಂದಿನ ಕಾಲಘಟ್ಟದಲ್ಲಿ ದಿನ ಬಳಕೆಗಳ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಅದಲ್ಲದೆ ಅಡುಗೆ ಅನಿಲದ ಬೆಲೆ ದಿನಕಳೆದಂತೆ ಏರಿಕೆಯಾಗುತ್ತಲೇ ಹೋಗುತ್ತಿದೆ. ಇದು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿದೆ. ಇನ್ನೂ ಅಡುಗೆ ಮಾಡುವ ಮುನ್ನಾ ಗ್ಯಾಸ್‌ ಅನ್ನು ಉಳಿತಾಯ ಮಾಡಲು ಪ್ರಯತ್ನಿಸಬೇಕು. ಇದರಿಂದ ಹಣದ ಉಳಿತಾಯದ ಜತೆಗೆ, ನಮ್ಮ ತಿಂಗಳ ಖರ್ಚು ವೆಚ್ಚಗಳ ಆರ್ಥಿಕ ಹೊರೆ ಕೂಡ ಕಡಿಮೆ ಆಗುತ್ತದೆ. ಗ್ಯಾಸ್‌ ಅನ್ನು ಉಳಿತಾಯ ಮಾಡುವ ಕೆಲ ಟೆಕ್ನಿಕ್ಸ್‌ ಇಲ್ಲಿದೆ.

1. ಮೊದಲು ಗ್ಯಾಸ್ ಬರ್ನರ್ ಅನ್ನು ಶುಚಿಯಾಗಿರಿಸಬೇಕು

ಗ್ಯಾಸ್ ಬರ್ನರ್‌ನ್ನು ಸರಿಯಾಗಿ ಶುಚಿ ಮಾಡದೆ ಇದ್ದರೆ ಆಗ, ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಬರ್ನರ್ ಕೂಡ ಸರಿಯಾಗಿ ಉರಿಯದು.
ಮೊದಲಿಗೆ ಬರ್ನರ್ ನಲ್ಲಿ ಹಳದಿ ಅಥವಾ ಕಿತ್ತಳೆ ಬೆಂಕಿಯು ಬರುತ್ತಿದೆಯಾ ಅಥವಾ ಬೆಂಕಿಯು ಅಸ್ತವ್ಯಸ್ತವಾಗಿ ಇದೆಯಾ ಎಂದು ನೋಡಿ. ಒಂದು ವೇಳೆ ಬೆಂಕಿ ಈ ಬಣ್ಣಕ್ಕೆ ತಿರುಗಿದ್ದರೆ, ಬರ್ನರ್ ನಲ್ಲಿ ಸಮಸ್ಯೆ ಇದೆ ಎಂದರ್ಥ. ಎರಡು ವಾರಕ್ಕೆ ಒಮ್ಮೆ ಈ ಗ್ಯಾಸ್ ಬರ್ನರ್‌ನ್ನು ತೆಗೆದು ಸರಿಯಾಗಿ ಶುಚಿ ಮಾಡಿದರೆ ಒಳ್ಳೆಯದು.

2. ಕೆಲವೊಂದು ಧಾನ್ಯಗಳನ್ನು ಹಾಗೂ ಅಕ್ಕಿಯನ್ನು ನೆನೆಸಿಡಿ

ಕೆಲವೊಂದು ಧಾನ್ಯಗಳು ಹಾಗೂ ಅಕ್ಕಿ ಬೇಯಲು ತುಂಬಾ ಸಮಯ ಬೇಕಾಗುವುದು. ಹೀಗಾಗಿ ಕೆಲವೊಂದು ಧಾನ್ಯಗಳು ಅಥವಾ ಅಕ್ಕಿಯನ್ನು ಅಡುಗೆ ಮಾಡುವ ಮುನ್ನ ಒಂದೆರಡು ಗಂಟೆಗಳ ಕಾಲ ನೆನೆಸಿಟ್ಟರೆ ಇದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಹೀಗಾಗಿ ಕೆಲವು ಗಂಟೆಗಳ ಕಾಲ ಇವುಗಳನ್ನು ನೀರಿನಲ್ಲಿ ನೆನೆಸಿಟ್ಟರೆ, ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

3. ಪಾತ್ರೆಗಳನ್ನು ತೊಳೆದ ಬಳಿಕ, ಬಿಸಿಲಿಗಿಡಿ

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಅಡುಗೆ ಮಾಡುವುದಕ್ಕಾಗಿ ಗ್ಯಾಸ್ ಒಲೆಯ ಮೇಲೆ ಇಟ್ಟುಬಿಡುವರು. ಈ ಸಮಯದಲ್ಲಿ ಇದರಲ್ಲಿರುವ ಪದಾರ್ಥಗಳು ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಗ್ಯಾಸ್ ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ, ಸ್ವಚ್ಛವಾಗಿರುವ ಬಟ್ಟೆಯಿಂದ ಒರೆಸಿಕೊಳ್ಳಿ. ಇಲ್ಲದಿದ್ದರೆ ಬಿಸಿಲಿಗಿಡಿ. ಆಮೇಲೆ ಅಡುಗೆಗೆ ಬಳಸಿ ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುತ್ತದೆ.

4. ಗ್ಯಾಸ್‌ ಹಚ್ಚುವ ಮುನ್ನಾ ತರಕಾರಿಗಳನ್ನು ತಯಾರಿಸಿಡಿ

ಅಡುಗೆಗೆ ಬೇಕಾಗಿರುವ ಎಲ್ಲಾ ಸಾಮಾಗ್ರಿಗಳನ್ನು ಮೊದಲು ರೆಡಿ ಮಾಡಿಟ್ಟುಕೊಳ್ಳಿ. (ಉದಾಹರಣೆಗೆ ಗ್ಯಾಸ್ ಉರಿಸುವ ಮುನ್ನ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳುವುದು, ಒಗ್ಗರಣೆಗೆ ಬೇಕಾದ ಸಾಮಾಗ್ರಿಗಳನ್ನು ಪಕ್ಕದಲ್ಲಿ ಇಟ್ಟುಕೊಂಡಿರುವುದು) ಒಮ್ಮೆ ಎಲ್ಲಾ ಅಚ್ಚುಕಟ್ಟಾಗಿ ನಿರ್ವಹಣೆ ಆದ ಬಳಿಕ ಗ್ಯಾಸ್ ಉರಿಸಿ, ಆಮೇಲೆ ಅಡುಗೆ ಶುರುಮಾಡಿಕೊಳ್ಳಿ. ಇದರಿಂದಾಗಿ ಗ್ಯಾಸ್ ಕೂಡ ಉಳಿತಾಯವಾಗುತ್ತದೆ.

5. ಕುಕ್ಕರ್ ಬಳಸಿದರೆ ಗ್ಯಾಸ್‌ನಲ್ಲಿ ಇನ್ನಷ್ಟು ಉಳಿತಾಯವಾಗುತ್ತದೆ

ಗ್ಯಾಸ್ ಬಳಸಿ ಅಡುಗೆ ಮಾಡುವವರು ಹೆಚ್ಚಾಗಿ ಪ್ರೆಶರ್ ಕುಕ್ಕರ್‍‌ನ ಬಳಕೆ ಜಾಸ್ತಿ ಮಾಡುತ್ತಾರೆ. ಇದರಿಂದ ಅಡುಗೆ ಕೂಡ ಬೇಗ ರೆಡಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಗ್ಯಾಸ್ ಖರ್ಚು ಕಡಿಮೆ ಆಗಬೇಕೆಂದರೆ, ಅಡುಗೆಗೆ ಕುಕ್ಕರ್‌ನ್ನು ಬಳಸಿ. (ಉದಾಹರಣೆಗೆ ಧಾನ್ಯಗಳನ್ನು ಬೇಯಿಸಲು, ಅನ್ನ ಮಾಡಲು, ತರಕಾರಿಗಳನ್ನು ಬೇಯಿಸಲು ಇತ್ಯಾದಿ) ಇದರಿಂದ ಸಮಯದ ಜೊತೆಗೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ.

6. ಪೈಪ್‌ , ರೆಗ್ಯೂಲೇಟರ್‌ನಲ್ಲಿ ಲೀಕ್ ಇದೆಯಾ ಎಂದು ನೋಡಿ

ಪೈಪ್ ಮತ್ತು ರೆಗ್ಯೂಲೇಟರ್‌ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂಬುದನ್ನು ಮೊದಲು ಪತ್ತೆ ಹಚ್ಚಿ. ಗ್ಯಾಸ್ ಸಿಲಿಂಡರ್‌ ಹಾಗೂ ಇದರ ಪೈಪ್‌ನ ಸುರಕ್ಷತೆಯಷ್ಟೇ ಇದರ ರೆಗ್ಯೂಲೇಟರ್ ಬಗ್ಗೆ ಕೂಡ, ಅಷ್ಟೇ ಕಾಳಜಿ ವಹಿಸಬೇಕು.

ಕೆಲವೊಮ್ಮೆ ರೆಗ್ಯೂಲೇಟರ್ ನ ಕಾರಣದಿಂದ ಕೂಡ ಸೋರಿಕೆ ಉಂಟಾಗಬಹುದು. ಇದರಿಂದ ಸರಿಯಾದ ನಿರ್ವಹಣೆಯು ಅಗತ್ಯ. ಕನಿಷ್ಠಪಕ್ಷ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಮ್ಮೆ ಸಿಲಿಂಡರ್ ಮತ್ತು ಸ್ಟವ್ ಮಧ್ಯ ಭಾಗದಲ್ಲಿರುವ ರಬ್ಬರ್ ಪೈಪ್ ಚೆಕ್ ಮಾಡಿಸಿಕೊಳ್ಳಿ.

ಈ ಎಲ್ಲ ಮೇಲಿನ ಟೆಕ್ನಿನ್ಸ್‌ಗಳನ್ನು ಬಳಸಿ ಗ್ಯಾಸ್‌ನಲ್ಲಿ ಇನ್ನಷ್ಟು ಉಳಿತಾಯವನ್ನು ಮಾಡಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *