ಐಶ್- ಅಭಿಷೇಕ್ ಮಗಳ ಸ್ಕೂಲ್ ಫೀಸ್ ಎಷ್ಟು ಗೊತ್ತೇ ? – ನಿಜ ಗೊತ್ತಾದ್ರೆ ನೀವು ಹುಬ್ಬೇರಿಸೋದು ಗ್ಯಾರಂಟಿ…!!

ಐಶ್- ಅಭಿಷೇಕ್ ಮಗಳ ಸ್ಕೂಲ್ ಫೀಸ್ ಎಷ್ಟು ಗೊತ್ತೇ ? – ನಿಜ ಗೊತ್ತಾದ್ರೆ ನೀವು ಹುಬ್ಬೇರಿಸೋದು ಗ್ಯಾರಂಟಿ…!!

ನ್ಯೂಸ್ ಆ್ಯರೋ : ಸ್ಟಾರ್ ಕಿಡ್ ಗಳನ್ನು ಭವಿಷ್ಯದ ಸೂಪರ್ ಸ್ಟಾರ್ ಗಳೆಂದೇ ಬಿಂಬಿಸಲಾಗುತ್ತದೆ. ಹೀಗಾಗಿ ಅವರು ಎಲ್ಲೇ ಹೋದರೂ, ಏನೇ ಮಾಡಿದರೂ ಸುದ್ದಿಯಾಗುತ್ತದೆ.

ಸೆಲೆಬ್ರಿಟಿ ಮಕ್ಕಳಿಗೆ ಸಾಮಾನ್ಯ ಜೀವನ ನಡೆಸುವುದು ತುಂಬಾ ಕಷ್ಟ. ಯಾಕೆಂದರೆ ಸದಾ ಇವರನ್ನು ಪಾಪರಾಜಿಗಳು ಕಾಡುತ್ತಲೇ ಇರುತ್ತಾರೆ. ಹೀಗಾಗಿ ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಹೆಚ್ಚು ಸುರಕ್ಷಿತ ಮತ್ತು ಹೊರಗಿನ ಪ್ರಪಂಚದಿಂದ ದೂರವಿಟ್ಟು ತಮ್ಮ ಮಕ್ಕಳನ್ನು ಸಾಕಲು ಪ್ರಯತ್ನಿಸುತ್ತಾರೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಸಿಗಬೇಕು ಎಂದು ದೇಶದಲ್ಲೇ ಅತ್ಯನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಸ್ಕೂಲ್ ಫೀಸ್ ಬಗ್ಗೆ ಚಿಂತೆ ಮಾಡೋದಿಲ್ಲ.

ಇನ್ನು ತಮ್ಮ ಮಕ್ಕಳು ಸಾಮಾನ್ಯರಂತೆ ಬದುಕಬೇಕು ಎನ್ನುವ ಅಸೆ ಇರುವ ಸೆಲೆಬ್ರಿಟಿಗಳು ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಅಲ್ಲೇ ಓದಿಸುತ್ತಾರೆ. ಆದರೆ ಮಕ್ಕಳಿಂದ ದೂರವಿರುವುದು ಜೊತೆಗೆ ವೃತ್ತಿ ಬದುಕನ್ನು ಸಂಭಾಳಿಸೋದು ಕಷ್ಟ. ಹೀಗಾಗಿ ಸ್ಟಾರ್ ಕಿಡ್ ಗಳಲ್ಲಿ ಹೆಚ್ಚಿನವರು ದೇಶದ ಅತ್ಯುನ್ನತ ಶಾಲೆಗಳಿಗೆ ಸೇರಿಸುತ್ತಾರೆ.

ಸ್ಟಾರ್ ಕಿಡ್ ಗಳ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಳ್ಳುವ ಕುತೂಹಲವಂತೂ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಅವರು ಎಲ್ಲಿ ಓದುತ್ತಾರೆ, ಅವರ ಸ್ಕೂಲ್ ಫೀಸ್ ಎಷ್ಟಿರುತ್ತೆ ಎಂದು ಕೇಳಿದರೆ ಒಮ್ಮೆ ಶಾಕ್ ಆಗೋದು ಖಚಿತ. ಅದರಲ್ಲೂ ಬಚ್ಚನ್ ಕುಟುಂಬದ ಸೊಸೆ, ಬಾಲಿವುಡ್ ತಾರೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಗಳ ಸ್ಕೂಲ್ ಫೀಸ್ ಎಷ್ಟಿದೆ ಗೊತ್ತೇ?

ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರದಲ್ಲೂ ಅಂಬಾನಿ ಕುಟುಂಬ ಹೆಸರು ಮಾಡಿದೆ. ಸಾಮಾನ್ಯವಾಗಿ ಟಾಪ್ ಸೆಲೆಬ್ರಿಟಿಗಳ ಮಕ್ಕಳೆಲ್ಲ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿಓದುತ್ತಿದ್ದಾರೆ. ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಕೂಡ ಇದೇ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.

ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಒಂದಾದ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆರಾಧ್ಯ ಕಲಿಯೋ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಶುಲ್ಕ 1.70 ಲಕ್ಷ ರೂ.ಗಳಾಗಿದೆ. 8 ರಿಂದ 10ನೇ ತರಗತಿಗೆ 4.48 ಲಕ್ಷ ರೂ. ಮತ್ತು 11 ಮತ್ತು 12ನೇ ತರಗತಿ ಶುಲ್ಕವು 9.65 ಲಕ್ಷ ರೂ. ಇದೆ.

ಇದು ಅಂತರರಾಷ್ಟ್ರೀಯ ಖಾಸಗಿ ಶಾಲೆಯಾಗಿದ್ದು, ಅತ್ಯುತ್ತಮ ಪಠ್ಯಕ್ರಮ, ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೆಚ್ಚು ಅರ್ಹ ಶಿಕ್ಷಕರಿಗೆ ಹೆಸರುವಾಸಿಯಾಗಿದೆ. ಕಠಿಣ ಶೈಕ್ಷಣಿಕ ಕಾರ್ಯಕ್ರಮಗಳು, ವೈವಿಧ್ಯಮಯ ಪಠ್ಯೇತರ ಚಟುವಟಿಕೆಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ಶಿಕ್ಷಣದೊಂದಿಗೆ ಇಲ್ಲಿ ಆರಾಧ್ಯ ಬಚ್ಚನ್ ಗೆ ಕ್ರೀಡೆ, ಸಂಗೀತ, ನೃತ್ಯ ಹಾಗೂ ವಿವಿಧ ಕಲೆಯನ್ನು ಕಲಿಯುವ ಅವಕಾಶವಿದೆ.

ಧೀರುಬಾಯಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಆರಾಧ್ಯ ಬಚ್ಚನ್‌ ಮಾತ್ರವಲ್ಲ ಶಾರೂಖ್‌ ಖಾನ್‌ ಪುತ್ರ ಅಬ್ರಾಂ, ಸೈಫ್‌ ಆಲಿಖಾನ್‌ – ಕರಿಷ್ಮಾ ಕಪೂರ್‌ ಮಗ ತೈಮೂರ್‌, ಮಗಳು ಸಮಿರಾ, ಚಂಕಿ ಪಾಂಡೆ ಮಗಳು ಅನನ್ಯ ಕೂಡ ಇಲ್ಲೇ ಓದುತ್ತಿದ್ದಾರೆ.

ಮಕ್ಕಳಿಗೆ ಎಷ್ಟೇ ದೊಡ್ಡ ಶಾಲೆಯಲ್ಲಿ ದುಬಾರಿ ಶುಲ್ಕ ಪಾವತಿಸಿದರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ. ಮುಖ್ಯವಾಗಿ ಮನೆಯಲ್ಲಿ ಅವರಿಗೆ ಉತ್ತಮ ವಾತಾವರಣ ಕಲ್ಪಿಸಬೇಕು. ಅದಕ್ಕೆ ಹಿರಿಯರು ಹೇಳಿರುವುದು ಮಕ್ಕಳಿಗೆ ಮೊದಲ ಪಾಠ ಶಾಲೆ ಮನೆಯೇ ಆಗಿರುತ್ತದೆ. ಇದರಲ್ಲಿ ಐಶ್ವರ್ಯಾ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದ ಅಭಿಷೇಕ್, ನನ್ನ ಪತ್ನಿ ಮಗಳಿಗೆ ಕಲಿಸುವುದನ್ನು ನಾನು ಗಮನಿಸುತ್ತೇನೆ. ಆರಾಧ್ಯಗೆ ಅವಳು ಯಾವುದೇ ರೀತಿಯ ಒತ್ತಡ ಹಾಕೋದಿಲ್ಲ. ಹಿರಿಯರಿಗೆ ಗೌರವ ನೀಡುವುದನ್ನು ಆಕೆ ಮಗಳಿಗೆ ಕಲಿಸುತ್ತಾಳೆ ಎಂದು ಹೇಳಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *