ವಿದ್ಯಾರ್ಥಿಗಳಿಗೆ 20 ಸಾವಿರ ಬೆಲೆಗೆ ಸಿಗಲಿದೆ ಲ್ಯಾಪ್‌ಟಾಪ್ – Google- HP ಕಂಪನಿಯ ಹೊಸ ಯೋಜನೆ ಏನಿದು?

ವಿದ್ಯಾರ್ಥಿಗಳಿಗೆ 20 ಸಾವಿರ ಬೆಲೆಗೆ ಸಿಗಲಿದೆ ಲ್ಯಾಪ್‌ಟಾಪ್ – Google- HP ಕಂಪನಿಯ ಹೊಸ ಯೋಜನೆ ಏನಿದು?

ನ್ಯೂಸ್ ಆ್ಯರೋ : ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ನಡುವೆ ಪ್ರತಿಯೊಬ್ಬರೂ ಅದನ್ನು ಬಳಸುವುದನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ ನಾವು ತಂತ್ರಜ್ಞಾನದ ಜ್ಞಾನದಿಂದ ಹಿಂದೆ ಉಳಿಯಬೇಕಾಗುತ್ತದೆ.

ಇಂದು ಲ್ಯಾಪ್‌ಟಾಪ್‌ಗಳು ಎಲ್ಲರಿಗೂ ಅಗತ್ಯದ ವಸ್ತು ವಾಗಿದೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳು ಖರೀದಿ ಮಾಡುವುದು ದುಬಾರಿಯಾಗಿದೆ. ಆದರೆ, ಇನ್ಮುಂದೆ ಈ ಬಗ್ಗೆ ವಿದ್ಯಾರ್ಥಿಗಳು ಚಿಂತೆ ಮಾಡಬೇಕಿಲ್ಲ. ಸ್ಮಾರ್ಟ್‌ಫೋನ್‌ ದರದಲ್ಲಿ ಲ್ಯಾಪ್‌ಟಾಪ್‌ಗಳನ್ನೂ ಖರೀದಿ ಮಾಡಬಹುದು.

ಕೆಲವಡೆ ಸರಕಾರವೇ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿವೆ. ಕಡಿಮೆ ಸಾಮರ್ಥ್ಯ ಇರುವ ಈ ಲ್ಯಾಪ್‌ಟಾಪ್‌ಗಳ ಮೂಲಕ ಅಗತ್ಯ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್‌ ಪರಿಚಯಿಸಲು ಗೂಗಲ್‌ ಹಾಗೂ ಹೆಚ್‌ಪಿ ಕಂಪೆನಿ ಗಳು ಕೈಜೋಡಿಸಿವೆ.

ವಿದ್ಯಾರ್ಥಿಗಳ ಬಜೆಟ್ ಗೆ ಹೊರೆಯಾಗದಂತೆ ಕ್ರೋಮ್‌ಬುಕ್‌ಗಳನ್ನು ತಯಾರಿಸಲು ಒಂದಾಗಿರುವ ಗೂಗಲ್‌-ಹೆಚ್‌ಪಿ ಒಂದು ಕಾರ್ಯತಂತ್ರ ರೂಪಿಸಿಕೊಂಡಿವೆ. ಈ ಯೋಜನೆಗೆ ಅಕ್ಟೋಬರ್ 2ರಂದು ಚಾಲನೆ ನೀಡಲಾಗುತ್ತದೆ. ಕೈಗೆಟುಕುವ ದರದಲ್ಲಿ ಶಿಕ್ಷಣ ವಲಯಕ್ಕೆ ಪಿಸಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿದೆ. ಹೆಚ್‌ಪಿ ಯ ಚೆನ್ನೈ ಮೂಲದ ಫ್ಲೆಕ್ಸ್ ಫೆಸಿಲಿಟಿ ಮೂಲಕ ಇವುಗಳನ್ನು ತಯಾರಿಸಲಾಗುತ್ತದೆ. 20,000 ರೂ. ನಿಂದ ಪ್ರಾರಂಭವಾಗುವ ಬೆಲೆಯೊಂದಿಗೆ ಈ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿತರಿಸಲು ಉತ್ಪಾದನಾ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನೂ ಹೊಂದಿದೆ.

ಈ ಕುರಿತ ಮಾಹಿತಿ ನೀಡಿರುವ ಹೆಚ್‌ಪಿ ಇಂಡಿಯಾ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿಮ್ ಭಾರತದಲ್ಲೇ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸುವ ಮೂಲಕ ಭಾರತೀಯ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದ ಕಂಪ್ಯೂಟರ್‌ಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಗೂಗಲ್‌ನ ಶಿಕ್ಷಣದ ಮುಖ್ಯಸ್ಥ (ದಕ್ಷಿಣ ಏಷ್ಯಾ) ಬನಿ ಧವನ್‌ ಮಾತನಾಡಿ, ಬಜೆಟ್ ಸ್ನೇಹಿ ನೋಟ್‌ಬುಕ್‌ಗಳೊಂದಿಗೆ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ಉತ್ತಮವಾಗಿ ಸಂಯೋಜಿಸುವ ಅವಕಾಶವಾಗಿ ಗೂಗಲ್ ಎದುರು ನೋಡುತ್ತಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ.

ಚೆನ್ನೈನಲ್ಲಿರುವ ಫ್ಲೆಕ್ಸ್ ಫೆಸಿಲಿಟಿ ಕಂಪೆನಿಯಲ್ಲಿ ಈ ಲ್ಯಾಪ್ ಟಾಪ್ ಗಳನ್ನು ತಯಾರಿಸಲಾಗುತ್ತಿದ್ದು, ವಿಶೇಷ ವಿನ್ಯಾಸದೊಂದಿಗೆ ತಯಾರಿಸಲಾಗುತ್ತದೆ. ಜೊತೆಗೆ ಬಳಕೆದಾರರಿಗೆ ಸೂಕ್ತವಾಗುವ ವಿವಿಧ ಉತ್ಪನ್ನಗಳನ್ನು ಒದಗಿಸಲಾಗುತ್ತದೆ.

ಮುಖ್ಯವಾಗಿ ಗ್ರಾಹಕ ಡಿವೈಸ್‌, ಆಪ್ಟಿಕಲ್ ಉತ್ಪನ್ನ, ವಿದ್ಯುತ್ ಸರಬರಾಜು ವಿನ್ಯಾಸ ಪರಿಹಾರ, ಸೌರ ಟ್ರ್ಯಾಕರ್ ಮತ್ತು ಸಾಫ್ಟ್‌ವೇರ್ ಪರಿಹಾರ, ವಿತರಣೆ ಮತ್ತು ಲಾಜಿಸ್ಟಿಕ್ಸ್ ಸೇವೆ ಹಾಗೂ ಆಪಲ್ ಉತ್ಪನ್ನಗಳನ್ನೂ ಇದರಲ್ಲಿ ಒದಗಿಸುವ ಯೋಜನೆ ರೂಪಿಸಲಾಗಿದೆ. ಒಟ್ಟಿನಲ್ಲಿ ಈ ಲ್ಯಾಪ್ ಟಾಪ್ ಗಳು ವಿದ್ಯಾರ್ಥಿ ಸ್ನೇಹಿಯಾಗಲಿದೆ ಎನ್ನುವದರಲ್ಲಿ ಸಂದೇಹವಿಲ್ಲ. ಶೀಘ್ರದಲ್ಲೇ ಇದು ಎಲ್ಲ ವಿದ್ಯಾರ್ಥಿಗಳ ಕೈಗೆ ದೊರೆಯುವಂತಾಗಲಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *